ಪಪ್ಪಾಯ ಗಿಡಕ್ಕೆ ಮೊಳೆ ಹೊಡೆದರೆ ಬೇಗ ಫಲ ಕೊಡತ್ತಾ? ಭರಪೂರ ಹಣ್ಣು ಬರಲು ಏನು ಮಾಡಬೇಕು

Published : Jun 25, 2026, 06:06 PM IST

ಪಪ್ಪಾಯಿ ಮರಕ್ಕೆ ಮೊಳೆ ಹೊಡೆದು ಫಲ ಪಡೆಯುವ ಸಾಂಪ್ರದಾಯಿಕ ಪದ್ಧತಿಯು ಮರಕ್ಕೆ ಒತ್ತಡ ನೀಡಿ ಫಲ ನೀಡುವಂತೆ ಪ್ರೇರೇಪಿಸುತ್ತದೆ ಎಂದು ನಂಬಲಾಗಿದೆ. ಆದರೆ, ವೈಜ್ಞಾನಿಕವಾಗಿ ಇದು ಮರಕ್ಕೆ ಹಾನಿಕಾರಕವಾಗಿದ್ದು, ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. 

PREV
16
ಬೆಳೆ ಬರಲು ಮೊಳೆ ಹೊಡೆಯೋದು ಸರಿನಾ?

ಕೃಷಿ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ತಲೆತಲಾಂತರಗಳಿಂದ ಬಂದಿರುವ ಕೆಲವೊಂದು ಸಾಂಪ್ರದಾಯಿಕ ತಂತ್ರಗಳಿರುತ್ತವೆ. ಅವುಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಇರುವುದಿಲ್ಲ. ಇದರ ಹೊರತಾಗಿಯೂ ಅದು ನಡೆದುಕೊಂಡು ಬಂದಿರುತ್ತದೆ. ಅದು ಯಶಸ್ಸು ಕೂಡ ಕಂಡಿರುತ್ತದೆ. ಅಂಥದ್ದರಲ್ಲಿ ಒಂದು ಪಪ್ಪಾಯ ಸೇರಿದಂತೆ ಕೆಲವು ಗಿಡ-ಮರಗಳಿಗೆ ಮೊಳೆ ಹೊಡೆಯುವ ಪದ್ಧತಿ. ಪಪ್ಪಾಯಿ ಮರಕ್ಕೆ ಮೊಳೆ ಹೊಡೆಯುವುದು ಹಠಮಾರಿ ಅಥವಾ "ಗಂಡು" ಮರಗಳಲ್ಲಿ ಫಲ ನೀಡುವುದನ್ನು ಉತ್ತೇಜಿಸಲು ಬಳಸುವ ಸಾಂಪ್ರದಾಯಿಕ ಕೃಷಿ ತಂತ್ರವಾಗಿದೆ. ಇದು ಸಸ್ಯವನ್ನು ಒತ್ತಡದ ಪ್ರತಿಕ್ರಿಯೆಗೆ ಪ್ರೇರೇಪಿಸುತ್ತದೆ, ಇದು ಹರ್ಮಾಫ್ರೋಡೈಟ್ (ಹಣ್ಣು ಬಿಡುವ) ಹೂವುಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ ಎನ್ನುವ ಮಾತಿದೆ. ಇದೇ ಕಾರಣಕ್ಕೆ ಹಲವರು ಈ ತಂತ್ರವನ್ನು ಬಳಸುವುದು ಇದೆ.

26
ಸಾಂಪ್ರದಾಯಿಕ ಪದ್ಧತಿ ಹೇಳೋದೇನು?

ಮೊಳೆ ಹೊಡದಾಗ ಕಾಂಡಕ್ಕೆ ಗಾಯವಾಗುವುದರಿಂದ ರಕ್ಷಣಾ ಕಾರ್ಯವಿಧಾನ ಆರಂಭವಾಗುತ್ತದೆ. ಮರವು ಎಥಿಲೀನ್ ಮತ್ತು ಜಾಸ್ಮೋನಿಕ್ ಆಮ್ಲದಂತಹ ಒತ್ತಡದ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ, ಇದು ಹೂವಿನ ಲೈಂಗಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಬದಲಾಯಿಸಿ ಗಂಡು ಮರವು ಫಲ ನೀಡಲು ಪ್ರೋತ್ಸಾಹಿಸುತ್ತದೆ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ನೆಲದಿಂದ ಸುಮಾರು 3 ರಿಂದ 4 ಅಡಿ ಎತ್ತರದಲ್ಲಿ ಮೊಳೆಯನ್ನು ಭಾಗಶಃ ಕಾಂಡಕ್ಕೆ ನಿಧಾನವಾಗಿ ಸುತ್ತಿಗೆಯಿಂದ ಹೊಡೆಯಲಾಗುತ್ತದೆ. ಕೆಲವು ತೋಟಗಾರರು ಲೋಹದ ಮೊಳೆಗೆ ಪರ್ಯಾಯವಾಗಿ ಶುದ್ಧವಾದ ಮರದ ಕೋಲು ಅಥವಾ ಟೂತ್‌ಪಿಕ್ ಅನ್ನು ಬಳಸುವುದು ಇದೆ.

36
ವೈಜ್ಞಾನಿಕ ಪುರಾವೆಗಳಲ್ಲಿ ಏನಿದೆ?

ಆದರೆ, ವೈಜ್ಞಾನಿಕ ಪುರಾವೆಗಳ ಆಧಾರದ ಹೇಳುವುದಾದರೆ, ಇದು ಮರವನ್ನು ಘಾಸಿಗೊಳಿಸುತ್ತದೆ ಎಂದೇ ಹೇಳಲಾಗುತ್ತದೆ. ವೈಜ್ಞಾನಿಕ ಪುರಾವೆ ಹೇಳುವ ಪ್ರಕಾರ, ಹಣ್ಣು ಬಿಡುವ ಪ್ರಕ್ರಿಯೆಯು ಸಂಪೂರ್ಣವಾಗಿ ಸಸ್ಯದ ವೈವಿಧ್ಯತೆ, ಪೋಷಣೆ, ಸೂರ್ಯನ ಬೆಳಕು, ತಾಪಮಾನ ಮತ್ತು ನೀರಿನ ಮೇಲೆ ಅವಲಂಬಿತವಾಗಿರುತ್ತದೆ. ಮೊಳೆ ಹೊಡೆಯುವುದರಿಂದ ಕಾಂಡದಲ್ಲಿ ಗಾಯಗಳು ಉಳಿಯುತ್ತವೆ, ಇದು ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ, ಇದು ಸಸ್ಯದ ಬೆಳವಣಿಗೆಗೆ ಹಾನಿ ಮಾಡುತ್ತದೆ ಎನ್ನುವುದು.

46
6 ರಿಂದ 8 ಗಂಟೆಗಳ ಕಾಲ ಸೂರ್ಯನ ಬೆಳಕು

ಇದರ ಹೊರತಾಗಿಯೂ ಪಪ್ಪಾಯಿಯನ್ನು ಹೆಚ್ಚು ವೇಗವಾಗಿ ಫಲ ನೀಡಲು ಪ್ರೋತ್ಸಾಹಿಸಲು ಬಳಸಬಹುದಾದ ಇತರ ವಿಧಾನಗಳೂ ಇವೆ. ಆರಂಭಿಕ ಹಣ್ಣಿನ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳಲು, ಪಪ್ಪಾಯಿ ಗಿಡಗಳು ಪ್ರತಿದಿನ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಸೂರ್ಯನ ಬೆಳಕನ್ನು ಪಡೆಯಬೇಕು.

56
ಉತ್ತಮ ಗೊಬ್ಬರ

ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸಲು ಕಾಂಪೋಸ್ಟ್, ವರ್ಮಿಕಾಂಪೋಸ್ಟ್ ಮತ್ತು ಪೊಟ್ಯಾಶ್ ಗೊಬ್ಬರಗಳನ್ನು ಬಳಸಿ. ನಾಟಿ ಮಾಡುವಾಗ, ಉತ್ತಮ ಗುಣಮಟ್ಟದ ಬೀಜಗಳು ಅಥವಾ ಸಸಿಗಳನ್ನು ಬಳಸಿ. ಇದು ಸಸ್ಯಗಳು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ ಮತ್ತು ಹಣ್ಣಿನ ಉತ್ಪಾದನೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

66
ಪಪ್ಪಾಯಿ ಕೃಷಿ ಸಲಹೆಗಳು

ನಿಮ್ಮ ಪಪ್ಪಾಯಿ ಗಿಡಕ್ಕೆ ಮೊಳೆಗಳನ್ನು ಹೊಡೆಯಲು ಅನೇಕ ಜನರು ನಿಮಗೆ ಸಲಹೆ ನೀಡಬಹುದು, ಆದರೆ ನೀವು ಇದನ್ನು ತಪ್ಪಿಸಬೇಕು. ಇದು ಸಸ್ಯಕ್ಕೆ ಹಾನಿ ಮಾಡಬಹುದು. ಸರಿಯಾದ ತೋಟಗಾರಿಕೆ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಸಸ್ಯದಿಂದ ಹೆಚ್ಚಿನ ಹಣ್ಣುಗಳನ್ನು ಪಡೆಯಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories