ರಾತ್ರಿ ನಿದ್ದೆ ಬರ್ತಿಲ್ವಾ? ನಿಮ್ಮ ಕೋಣೆಯಲ್ಲಿ ಈ ಗಿಡವನ್ನಿಡಿ.. ಫಟಾ ಫಟ್ ಅಂತ ಬರುತ್ತೆ

Published : Jul 07, 2026, 02:27 PM IST

Snake plant benefits: ನಿಮಗೂ ಮನೆಯಲ್ಲಿ ಗಿಡಗಳನ್ನು ಬೆಳೆಸುವ ಹವ್ಯಾಸವಿದೆಯೇ? ಹಾಗಿದ್ದರೆ ಈ ಪ್ಲಾಂಟ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಕೇವಲ ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ.  

PREV
15
ಕಡಿಮೆ ಆರೈಕೆಯಲ್ಲಿ ಸುಲಭವಾಗಿ ಬೆಳೆಯುತ್ತೆ

ಕಡಿಮೆ ಆರೈಕೆಯಲ್ಲಿ ಸುಲಭವಾಗಿ ಬೆಳೆಯುತ್ತೆ
ಇತ್ತೀಚಿನ ದಿನಗಳಲ್ಲಿ ಜನರು ಮನೆ ಮತ್ತು ಕಚೇರಿಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ವಿವಿಧ ರೀತಿಯ ಇನ್ ಡೋರ್ ಪ್ಲಾಂಟ್‌ಗಳನ್ನು (Indoor Plants) ಬಳಸುತ್ತಾರೆ. ಅವುಗಳಲ್ಲಿ ಸ್ನೇಕ್ ಪ್ಲಾಂಟ್ (ಸನ್ಸೆವೇರಿಯಾ) ಕೂಡ ಒಂದು. ಇದು ತನ್ನ ಉದ್ದನೆಯ ಸುಂದರವಾದ ಎಲೆಗಳು ಮತ್ತು ಆರೋಗ್ಯಕಾರಿ ಗುಣಗಳಿಂದಾಗಿ ಹೆಚ್ಚು ಜನಪ್ರಿಯವಾಗಿದೆ. ಕಡಿಮೆ ಆರೈಕೆಯಲ್ಲಿ ಸುಲಭವಾಗಿ ಬೆಳೆಯುವ ಈ ಗಿಡವು ಮನೆಯ ವಾತಾವರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

25
ಗಾಳಿಯನ್ನು ಶುದ್ಧೀಕರಿಸುತ್ತೆ

ಗಾಳಿಯನ್ನು ಶುದ್ಧೀಕರಿಸುತ್ತೆ
ಸ್ನೇಕ್ ಪ್ಲಾಂಟ್‌ನ ದೊಡ್ಡ ವಿಶೇಷತೆಯೆಂದರೆ ಇದು ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ವಾತಾವರಣದಲ್ಲಿರುವ ಫಾರ್ಮಾಲ್ಡಿಹೈಡ್, ಬೆಂಜೀನ್ ಮತ್ತು ಟ್ರೈಕ್ಲೋರೋಎಥಿಲಿನ್‌ನಂತಹ ಹಾನಿಕಾರಕ ವಿಷಕಾರಿ ಅಂಶಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಲೇ ಮನೆ ಮತ್ತು ಆಫೀಸ್‌ನ ಒಳಗೆ ಇಡಲು ಇದು ಬೆಸ್ಟ್ ಪ್ಲಾಂಟ್ ಎನಿಸಿಕೊಂಡಿದೆ.

35
ಉತ್ತಮ ನಿದ್ರೆಗೆ ಸಹಕಾರಿ

ಉತ್ತಮ ನಿದ್ರೆಗೆ ಸಹಕಾರಿ
ಹೆಚ್ಚಿನ ಗಿಡಗಳು ಹಗಲಿನಲ್ಲಿ ಆಮ್ಲಜನಕ ಬಿಡುಗಡೆ ಮಾಡಿದರೆ, ಸ್ನೇಕ್ ಪ್ಲಾಂಟ್ ರಾತ್ರಿಯ ಸಮಯದಲ್ಲಿಯೂ ಆಮ್ಲಜನಕವನ್ನು (Oxygen) ಬಿಡುಗಡೆ ಮಾಡುತ್ತದೆ. ಇದರಿಂದ ಗಾಳಿಯು ಶುದ್ಧವಾಗಿರುತ್ತದೆ ಮತ್ತು ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಈ ಕಾರಣದಿಂದ ಅನೇಕರು ಇದನ್ನು ಬೆಡ್‌ರೂಮ್‌ನಲ್ಲಿ ಇಡಲು ಇಷ್ಟಪಡುತ್ತಾರೆ.

45
ಮಾನಸಿಕ ಒತ್ತಡ ಕಡಿಮೆ ಮಾಡುತ್ತೆ

ಮಾನಸಿಕ ಒತ್ತಡ ಕಡಿಮೆ ಮಾಡುತ್ತೆ
ಮನೆ ಅಥವಾ ಕಚೇರಿಯಲ್ಲಿ ಹಸಿರಿರುವುದು ಮಾನಸಿಕ ಶಾಂತಿಯನ್ನು ನೀಡುತ್ತದೆ ಮತ್ತು ಧನಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಸ್ನೇಕ್ ಪ್ಲಾಂಟ್‌ನ ಆಕರ್ಷಕ ನೋಟವು ಕೋಣೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೆ ತಾಜಾತನದ ಅನುಭವ ನೀಡುತ್ತದೆ.

55
ಆರೈಕೆ ಮಾಡುವುದು ಹೇಗೆ?

ಆರೈಕೆ ಮಾಡುವುದು ಹೇಗೆ?
ಇದರ ನಿರ್ವಹಣೆ ತುಂಬಾ ಸುಲಭ. ಇದಕ್ಕೆ ಪ್ರತಿದಿನ ನೀರು ಹಾಕುವ ಅಗತ್ಯವಿಲ್ಲ. ವಾರಕ್ಕೊಮ್ಮೆ ಅಥವಾ ಮಣ್ಣು ಪೂರ್ತಿ ಒಣಗಿದಾಗ ನೀರು ಹಾಕಿದರೆ ಸಾಕು. ಅತಿಯಾಗಿ ನೀರು ಹಾಕಿದರೆ ಬೇರುಗಳು ಕೊಳೆಯಬಹುದು. ಇದು ನೇರ ಬಿಸಿಲು ಇಲ್ಲದಿದ್ದರೂ ಚೆನ್ನಾಗಿ ಬೆಳೆಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories