ರಾತ್ರಿ ತಲೆಸ್ನಾನ ಬೇಡ ಎನ್ನಲು ವೈಜ್ಞಾನಿಕ ಕಾರಣಗಳು:
- ರಾತ್ರಿ ತಲೆಸ್ನಾನ ಮಾಡಿ, ಒದ್ದೆ ಕೂದಲಲ್ಲಿ ಮಲಗಿದರೆ ಕೂದಲು ಒಡೆಯುತ್ತದೆ. ಕೂದಲು ಬುಡ ಬಲಹೀನವಾಗುತ್ತದೆ.
- ಒದ್ದೆ ಕೂದಲಲ್ಲಿ ಮಲಗಿದರೆ ಕೂದಲು ಉದುರುತ್ತೆ. ಮಲಗಿ ತಿರುಗಾಡುವಾಗ ಕೂದಲು ಸಿಕ್ಕಿಹಾಕಿಕೊಂಡು, ಉದುರುವುದು ಹಾಗೂ ಒಡೆಯುತ್ತದೆ. ಆದ್ದರಿಂದ ಒದ್ದೆ ಕೂದಲಲ್ಲಿ ಮಲಗಬಾರದು..
- ಒದ್ದೆ ಕೂದಲಲ್ಲಿ ಮಲಗಿದರೆ ತಲೆಯಲ್ಲಿ ಫಂಗಸ್ ಬೆಳೆಯುತ್ತದೆ. ಇದರಿಂದ ಅಲರ್ಜಿ, ತಲೆಹೊಟ್ಟು ಬರುತ್ತದೆ. ತಲೆನೋವು, ಜ್ವರ, ಕೆಮ್ಮು ಬರುತ್ತದೆ.