Snake mating effects: ಪ್ರಕೃತಿಯಲ್ಲಿ ಜೋಡಿ ಹಾವುಗಳು ಮಿಲನದಲ್ಲಿ ತೊಡಗಿರುವ ದೃಶ್ಯ ಅಪರೂಪದ್ದು. ಆದರೆ ಈ ದೃಶ್ಯವನ್ನು ಮದುವೆಯಾಗದ ಯುವಕ-ಯುವತಿಯರು ನೋಡಬಾರದು ಎಂದು ಹಿರಿಯರು ಹೇಳುತ್ತಾರೆ. ಇದರ ಹಿಂದೆ ಅಡಗಿರುವ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.
ಕಾರಣವೇನು? ಹಾವುಗಳೆಂದರೆ ಹೆಚ್ಚಿನವರಿಗೆ ಭಯ. ಅವುಗಳನ್ನು ನೋಡಿದ ತಕ್ಷಣ ಮಾರುದೂರ ಓಡುವವರೇ ಹೆಚ್ಚು. ಆದರೆ ಕೆಲವೊಮ್ಮೆ ಹಾವುಗಳ ಚಟುವಟಿಕೆಗಳನ್ನು ನೋಡಲು ಜನರು ಆಸಕ್ತಿ ತೋರಿಸುತ್ತಾರೆ. ವಿಶೇಷವಾಗಿ ಜೋಡಿ ಹಾವುಗಳು ಮಿಲನದಲ್ಲಿ ತೊಡಗಿದ್ದಾಗ ಅದನ್ನು ನೋಡಲು ಜನ ಸೇರುತ್ತಾರೆ. ಆದರೆ, ಅವಿವಾಹಿತ ಸ್ತ್ರೀ-ಪುರುಷರು ಇದನ್ನು ನೋಡಬಾರದು ಎಂದು ಹಿರಿಯರು ಹೇಳುತ್ತಾರೆ. ಅದರ ಹಿಂದಿನ ಪುರಾಣ ಮತ್ತು ವೈಜ್ಞಾನಿಕ ಕಾರಣಗಳು ಇಲ್ಲಿವೆ.
25
ಅವಿವಾಹಿತರು ನೋಡಬಾರದ್ಯಾಕೆ
ಅವಿವಾಹಿತರು ನೋಡಬಾರದ್ಯಾಕೆ ಪುರಾಣಗಳ ಪ್ರಕಾರ, ಮದುವೆಯಾಗದ ಯುವಕ ಅಥವಾ ಯುವತಿಯರು ಹಾವುಗಳ ಮಿಲನವನ್ನು ನೋಡಿದರೆ ಅವರಿಗೆ ವಿವಾಹ ಯೋಗ ತಡವಾಗುತ್ತದೆ. ಅಷ್ಟೇ ಅಲ್ಲದೆ, ಒಂದು ವೇಳೆ ಮದುವೆಯಾದರೂ ಅವರ ವೈವಾಹಿಕ ಜೀವನದಲ್ಲಿ ಅನೇಕ ಅಡೆತಡೆಗಳು ಮತ್ತು ಸಮಸ್ಯೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ. ಈ ಕಾರಣದಿಂದಲೇ ಹಿರಿಯರು ಅವಿವಾಹಿತರನ್ನು ಇಂತಹ ದೃಶ್ಯಗಳಿಂದ ದೂರವಿರಲು ಸೂಚಿಸುತ್ತಾರೆ.
35
ಗರ್ಭಿಣಿಯರು ನೋಡಿದ್ರೆ ಏನಾಗುತ್ತೆ?
ಗರ್ಭಿಣಿಯರು ನೋಡಿದ್ರೆ ಏನಾಗುತ್ತೆ? ಗರ್ಭಿಣಿ ಮಹಿಳೆಯರು ಸಹ ಹಾವುಗಳ ಮಿಲನವನ್ನು ನೋಡಬಾರದು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಹೆರಿಗೆಯ ಸಮಯದಲ್ಲಿ ಸಂಕೀರ್ಣತೆಗಳು ಉಂಟಾಗಬಹುದು ಅಥವಾ ಹುಟ್ಟುವ ಮಗುವಿಗೆ ದೋಷಗಳು ತಗುಲಬಹುದು ಎಂಬ ಭೀತಿ ಇದೆ. ಹಾಗೆಯೇ, ಹೊಸದಾಗಿ ಮದುವೆಯಾದ ದಂಪತಿಗಳು ಒಟ್ಟಾಗಿ ಈ ದೃಶ್ಯವನ್ನು ನೋಡಿದರೆ, ಅವರ ನಡುವೆ ಭಿನ್ನಾಭಿಪ್ರಾಯ ಮೂಡಿ ದಾಂಪತ್ಯದಲ್ಲಿ ಬಿರುಕು ಉಂಟಾಗಬಹುದು ಎನ್ನಲಾಗುತ್ತದೆ.
ಭಂಗ ಉಂಟಾಗಿ ಕೋಪದಿಂದ ದಾಳಿ ಮಾಡುವ ಸಾಧ್ಯತೆ ಧಾರ್ಮಿಕ ದೃಷ್ಟಿಕೋನದಿಂದ ನೋಡುವುದಾದರೆ, ಹಾವುಗಳು ಶಿವನಿಗೆ ಅತ್ಯಂತ ಪ್ರಿಯವಾದವು. ಅವುಗಳ ಮಿಲನ ಪ್ರಕ್ರಿಯೆಯು ಪವಿತ್ರವಾದುದು ಎಂದು ಪರಿಗಣಿಸಲಾಗುತ್ತದೆ. ಅದನ್ನು ನೋಡುವುದು ಅಪವಿತ್ರ ಅಥವಾ ದೋಷಕ್ಕೆ ಕಾರಣವಾಗಬಹುದು. ಮಿಲನದ ಸಮಯದಲ್ಲಿ ಹಾವುಗಳು ಮನುಷ್ಯರನ್ನು ಗಮನಿಸಿದರೆ, ಅವುಗಳಿಗೆ ಭಂಗ ಉಂಟಾಗಿ ಕೋಪದಿಂದ ದಾಳಿ ಮಾಡುವ ಸಾಧ್ಯತೆ ಇರುತ್ತದೆ.
55
ವಿಜ್ಞಾನ ಹೇಳುವುದೇನು?
ವಿಜ್ಞಾನ ಹೇಳುವುದೇನು? ವಿಜ್ಞಾನದ ಪ್ರಕಾರ, ಮಿಲನದ ಸಮಯದಲ್ಲಿ ಹಾವುಗಳು ಅತ್ಯಂತ ಆಕ್ರಮಣಕಾರಿಯಾಗಿರುತ್ತವೆ (Aggressive). ಆ ಸಮಯದಲ್ಲಿ ಅವುಗಳ ಹತ್ತಿರ ಹೋಗುವುದು ಅಥವಾ ಅವುಗಳನ್ನು ತೊಂದರೆಗೊಳಿಸುವುದು ಅಪಾಯಕಾರಿ. ತಮ್ಮ ಏಕಾಂತಕ್ಕೆ ಭಂಗ ತಂದ ವ್ಯಕ್ತಿಯನ್ನು ಅವು ಬೆನ್ನಟ್ಟಿ ಕಚ್ಚುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದಲೂ ಹಾವುಗಳ ಮಿಲನದ ವೇಳೆ ಅಲ್ಲಿಗೆ ಹೋಗಬಾರದು ಎಂದು ಹೇಳಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.