ಶೂಲೇಸ್ ಪದೇ ಪದೇ ಬಿಚ್ಚಿಕೊಳ್ಳಲು ಹಲವು ಕಾರಣವಾಗಳಿವೆ. ಶೂ ಲೇಸ್ ಕ್ರಮಬದ್ಧವಾಗಿ ಕಟ್ಟಿಕೊಂಡರೆ ಈ ಸಮಸ್ಯೆ ಎದುರಾಗಲ್ಲ. ಶೂಲೇಸ್ ಬಿಚ್ಚಿಕೊಳ್ಳುವ ಸಮಸ್ಯೆಗಳಿಗೆ ಪರಿಹಾರವನ್ನು ಈ ಲೇಖನ ಹೊಂದಿದೆ.
ಫಾರ್ಮಲ್ ಲುಕ್ ಬೇಕಾದ್ರೆ ಲೇಸ್ ಇರೋ ಶೂಗಳನ್ನು ಧರಿಸಬೇಕಾಗುತ್ತದೆ. ಆದ್ರೆ ಶೂಗಳು ಧರಿಸಿದ ಕೂಡಲೇ ಲೇಸ್‌ಗಳು ಬಿಚ್ಚಲಾರಂಭಿಸುತ್ತವೆ. ಶೂ ಲೇಸ್‌ಗಳು ಪದೇ ಪದೇ ಬಿಚ್ಚಿಕೊಳ್ಳೋದ್ಯಾಕೆ? ಶೂಲೇಸ್ ಹೇಗೆ ಕಟ್ಟಿಕೊಳ್ಳಬೇಕು ಎಂಬುದರ ಮಾಹಿತಿಯನ್ನು ಈ ಲೇಖನ ಹೊಂದಿದೆ.
26
ಲೇಸ್ ಉದ್ದ ಪರಿಗಣಿಸಿ
ಲೇಸ್‌ಗಳನ್ನು ಕಟ್ಟಿಕೊಳ್ಳುವಾಗ ಉದ್ದವನ್ನು ನೋಡಬೇಕು. ಶೂ ಲೇಸ್ ಕಟ್ಟಿಕೊಳ್ಳುವ ಅದನ್ನು ಎರಡು ಭಾಗಗಳನ್ನಾಗಿ ಮಾಡಿಕೊಳ್ಳಿ. ನಂತರ ಎರಡೂ ಬದಿಯಿಂದ ಲೇಸ್ ಹಾಕಿಕೊಳ್ಳಬೇಕು. ಆನಂತರ ಕೊನೆಯದಾಗಿ ಉಳಿಯುವ ಶೂಲೇಸ್‌ನಿಂದ ಗಟ್ಟಿಯಾಗಿ ನಾಟ್ (ಗಂಟು) ಹಾಕಿಕೊಳ್ಳಿ.
ಹೆಚ್ಚುವರಿಯಾಗಿ ಲೇಸ್ ಉಳಿದ್ರೆ ಹಾಗೆ ಬಿಡಬಾರದು. ಶೋಲೇಸ್ ನೆಲಕ್ಕೆ ತಾಗುತ್ತಿದ್ದರೆ ಅದು ಪದೇ ಪದೇ ಬಿಚ್ಚಿಕೊಳ್ಳುವ ಸಾಧ್ತೆ ಇರುತ್ತದೆ. ಹೆಚ್ಚುವರಿ ಲೇಸ್‌ನಿಂದಲೂ ಚಿಕ್ಕದಾಗಿ ನಾಟ್ ಹಾಕಿಕೊಳ್ಳಿ. ಮಧ್ಯಮ ಉದ್ದದ ಲೇಸ್ ಖರೀದಿಸೋದು ಉತ್ತಮ.
36
ಒತ್ತಡದಿಂದ ಬಿಚ್ಚಿಕೊಳ್ಳುತ್ತೆ ಶೂ
ಕಾಲುಗಳಿಗೆ ಶೂ ಆರಾಮದಾಯಕವಾಗಿರಬೇಕಾಗುತ್ತದೆ. ಶೂನಲ್ಲಿ ಪಾದ ಒತ್ತಡದಲ್ಲಿದ್ರೆ ಅದು ಲೇಸ್ ಬಿಚ್ಚಿಕೊಳ್ಳಲು ಶುರುವಾಗುತ್ತದೆ. ಪಾದದ ಭಾಗದಲ್ಲಿ ಶೂ ಚಿಕ್ಕದಾಗಿದ್ರೆ ಅದರ ಒಳಗಿನ ಒತ್ತಡ ಶೂ ಮೇಲ್ಭಾಗದಲ್ಲಿ ಕಟ್ಟಲಾಗಿರುವ ಲೇಸ್ ಮೇಲೆ ಪರಿಣಾಮ ಬೀರುತ್ತದೆ. ಶೂ ಒಳಗಿನ ಪಾದದ ಒತ್ತಡದಿಂದ ಲೇಸ್ ಬಿಚ್ಚಿಕೊಳ್ಳುತ್ತದೆ.
ಕೆಲವರು ಶೂಗಳು ಧರಿಸಿದಾಗ ಕಾಲ್ಬೆರಳುಗಳಿಗೆ ಜಾಗ ಇಕ್ಕಟ್ಟಾಗುತ್ತದೆ. ಈ ಇಕ್ಕಟ್ಟಿನಿಂದ ಶೂ ಒಳಗಿನಿಂದಲೇ ಪಾದವನ್ನು ಪದೇ ಪದೇ ಸರಿ ಮಾಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಹಾಗಾಗಿ ನಿಮ್ಮ ಪಾದಗಳಿಗೆ ಕಂಫರ್ಟ್ ಫೀಲ್ ನೀಡುವ ಮತ್ತು ಸರಿಯಾದ ಅಳತೆಯ ಶೂಗಳನ್ನು ಖರೀದಿ ಮಾಡೋದರಿಂದ ಲೇಸ್ ಬಿಚ್ಚಿಕೊಳ್ಳುವ ಸಮಸ್ಯೆ ದೂರವಾಗುತ್ತದೆ.
56
ಕೊಳಕು ಅಥವಾ ಒದ್ದೆಯಾದ ಲೇಸ್
ಕೆಲವೊಮ್ಮೆ ಗಂಟು ಸರಿಯಾಗಿ ಹಾಕಿಕೊಂಡರೂ ಲೇಸ್ ಬಿಚ್ಚಿಕೊಳ್ಳಲು ಅದರ ಮೇಲಿನ ಕೊಳಕು ಕಾರಣವಾಗುತ್ತದೆ. ಲೇಸ್ ಮೇಲಿನ ಕೊಳಕಿನಿಂದ ಗಂಟು ಜಾರುತ್ತದೆ. ಹಾಗೆಯೇ ಶೂಲೇಸ್ ನೀರಿನಲ್ಲಿ ಒದ್ದೆಯಾಗಿದ್ದರೂ ಬಿಚ್ಚಿಕೊಳ್ಳಲು ಆರಂಭಿಸುತ್ತದೆ. ಗಂಟು ಹಾಕಿಕೊಳ್ಳೋದು ಎಷ್ಟು ಮುಖ್ಯವೋ ಹಾಗೆಯೇ ಲೇಸ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋದು ಮುಖ್ಯವಾಗುತ್ತದೆ.
66
ಶೂಲೇಸ್ ತೊಳೆಯೋದು ಹೇಗೆ?
ಶೂಲೇಸ್‌ಗಳನ್ನು ಡಿಟರ್ಜೆಂಟ್ ನೀರಿನಲ್ಲಿ ಅದ್ದಿ ಸುಮಾರು 15 ರಿಂದ 20 ನಿಮಿಷ ಎತ್ತಿಟ್ಟುಕೊಳ್ಳಬೇಕು. ನಂತರ ಬ್ರಶ್‌ನಿಂದ ಶೂಲೇಸ್ ಉಜ್ಜಿಕೊಂಡು ಸ್ವಚ್ಛವಾದ ನೀರಿನಲ್ಲಿ ತೊಳೆದುಕೊಳ್ಳಿ. ಲೇಸ್ ಸಂಪೂರ್ಣವಾಗಿ ಒಣಗಿದ ಬಳಿಕವಷ್ಟೇ ಬಳಕೆ ಮಾಡಿ. ಇದರಿಂದ ಲೇಸ್ ಬಿಚ್ಚಿಕೊಳ್ಳುವ ಸಮಸ್ಯೆ ಎದುರಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.