ಹಂದಿಗಳು ಮನುಷ್ಯರಂತೆ ಅಥವಾ ಇತರೆ ಪ್ರಾಣಿಗಳಂತೆ ಜೀವನದಲ್ಲಿ ಒಮ್ಮೆಯೂ ತಲೆ ಎತ್ತಿ ಆಕಾಶ ನೋಡೋಕೆ ಆಗಲ್ಲ... ಯಾಕೆ ಗೊತ್ತಾ? ಹಂದಿಗಳ ದೇಹ ರಚನೆ ಮತ್ತು ಅವುಗಳ ದೃಷ್ಟಿಯ ಹಿಂದಿರುವ ಇಂಟರೆಸ್ಟಿಂಗ್ ವಿಚಾರಗಳನ್ನು ಇಲ್ಲಿ ತಿಳಿಯೋಣ.
ಪ್ರಾಣಿ ಪ್ರಪಂಚದಲ್ಲಿ ಸಾಕಷ್ಟು ಅಚ್ಚರಿಗಳಿವೆ. ಹಸುಗಳು ಹಸಿರು ಹುಲ್ಲು ತಿಂದು ಬಿಳಿ ಹಾಲು ಕೊಡುತ್ತವೆ, ಹಾವಿನ ವಿಷಕ್ಕೆ ಕುದುರೆಗಳಿಂದ ಮದ್ದು ತಯಾರಿಸುತ್ತಾರೆ, ಕಪ್ಪೆಗಳು ಊಟ, ನೀರಿಲ್ಲದೆ ತಿಂಗಳುಗಟ್ಟಲೆ ಬದುಕುತ್ತವೆ. ಅದೇ ರೀತಿ ಒಂದು ಪ್ರಾಣಿ ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ಆಕಾಶ ನೋಡುವುದಿಲ್ಲ. ಅದರ ಕಣ್ಣುಗಳು ಯಾವಾಗಲೂ ನೆಲದ ಕಡೆಗೇ ಇರುತ್ತವೆ. ಇದೇನೋ ಕಾಡುಪ್ರಾಣಿ ಇರಬೇಕು ಅಂದುಕೊಂಡ್ರಾ? ಖಂಡಿತ ಅಲ್ಲ. ಇದು ನಮ್ಮ ಸುತ್ತಮುತ್ತಲೇ ಕಾಣಸಿಗುವ ಪ್ರಾಣಿ. ಅದು ಯಾವುದು ಮತ್ತು ಅದಕ್ಕೆ ಆಕಾಶ ನೋಡೋಕೆ ಯಾಕೆ ಆಗಲ್ಲ ಅಂತ ಇಲ್ಲಿ ತಿಳಿಯೋಣ.
24
ಹಂದಿ ಆಕಾಶ ನೋಡಲ್ವಾ..?
ಹಂದಿಗಳ ಬಗ್ಗೆ ನಮಗೆ ಬಾಲ್ಯದಿಂದಲೂ ಗೊತ್ತು. ಹಂದಿಗಳು ಸಾಮಾನ್ಯವಾಗಿ ನೆಲದ ಮೇಲೆ ಓಡಾಡಿಕೊಂಡು ಆಹಾರ ಹುಡುಕುತ್ತವೆ. ಅವು ಮೂಗಿನಿಂದ ನೆಲ ಅಗೆಯುತ್ತಾ, ವಾಸನೆ ಹಿಡಿಯುತ್ತಾ ಆಹಾರ ಪತ್ತೆ ಮಾಡುತ್ತವೆ. ಆದರೆ ಹಂದಿಗಳ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಚಾರ ಬಹಳ ಜನರಿಗೆ ಗೊತ್ತಿಲ್ಲ. ಹಂದಿಗಳು ನೇರವಾಗಿ ಆಕಾಶವನ್ನು ನೋಡಲು ಸಾಧ್ಯವೇ ಇಲ್ಲ. ಹಂದಿಗಳು ಕೇವಲ ನೆಲವನ್ನು ಮತ್ತು ನೇರವಾಗಿ ಮುಂದಿರುವ ವಸ್ತುಗಳನ್ನು ಮಾತ್ರ ನೋಡಬಲ್ಲವು. ಅವುಗಳ ತಲೆಯ ಎರಡೂ ಬದಿಯಲ್ಲಿ ಕಣ್ಣುಗಳಿರುವುದರಿಂದ ಸುತ್ತಮುತ್ತಲಿನ ದೃಶ್ಯಗಳನ್ನು ನೋಡುತ್ತವೆ. ಆದರೆ ಮನುಷ್ಯರ ಹಾಗೆ ತಲೆ ಎತ್ತಿ ಆಕಾಶ ನೋಡಲು ಅವುಗಳಿಗೆ ಆಗುವುದಿಲ್ಲ.
ಇದಕ್ಕೆ ಹಂದಿಗಳ ಕುತ್ತಿಗೆ ಮತ್ತು ಬೆನ್ನುಮೂಳೆಯ ರಚನೆಯೇ ಮುಖ್ಯ ಕಾರಣ. ಹಂದಿಗಳ ಕುತ್ತಿಗೆ ಮನುಷ್ಯರ ಕುತ್ತಿಗೆಯಂತೆ ಎಲ್ಲಾ ಕಡೆ ಸುಲಭವಾಗಿ ತಿರುಗುವುದಿಲ್ಲ. ಅವುಗಳ ಕುತ್ತಿಗೆಯ ಸ್ನಾಯುಗಳು ಮತ್ತು ಮೂಳೆಗಳು ತುಂಬಾ ಗಟ್ಟಿಯಾಗಿರುತ್ತವೆ. ತಲೆಯನ್ನು ಹಿಂದಕ್ಕೆ ಬಗ್ಗಿಸುವ ಸಾಮರ್ಥ್ಯ ಅವುಗಳಿಗೆ ಇರುವುದಿಲ್ಲ. ಹಾಗಾಗಿ ನೆಲದಲ್ಲಿ ಬೇರುಗಳು ಮತ್ತು ಗೆಡ್ಡೆಗಳನ್ನು ಹುಡುಕುವಾಗ ಅವುಗಳ ತಲೆ ಕೆಳಗಿರುವುದು ಸಹಜ. ಆದರೆ ತಲೆಯನ್ನು ಸಂಪೂರ್ಣವಾಗಿ ಮೇಲಕ್ಕೆತ್ತಿ ಆಕಾಶ ನೋಡುವುದು ಮಾತ್ರ ಅವುಗಳಿಗೆ ಸಾಧ್ಯವಿಲ್ಲ.
34
ಹಂದಿಗಳ ದೇಹ ರಚನೆ ವಿಶೇಷವಾಗಿರುತ್ತದೆ
ಹಂದಿಗಳ ದೇಹದ ಆಕಾರ ಗಮನಿಸಿದರೆ, ಅವುಗಳ ತಲೆ, ಕುತ್ತಿಗೆ ಮತ್ತು ಭುಜದ ರಚನೆ ಮನುಷ್ಯರಿಗಿಂತ ತುಂಬಾನೇ ಭಿನ್ನವಾಗಿರುತ್ತದೆ. ಅವುಗಳ ದೇಹ ಭಾರವಾಗಿರುವುದರಿಂದ ಮತ್ತು ಕುತ್ತಿಗೆಯ ಚಲನೆ ಸೀಮಿತವಾಗಿರುವುದರಿಂದ ತಲೆಯನ್ನು ಹಿಂದಕ್ಕೆ ಬಗ್ಗಿಸುವುದು ಕಷ್ಟ. ಹಂದಿಗಳು ಹೆಚ್ಚಾಗಿ ನೆಲದ ಮೇಲೆಯೇ ಆಹಾರ ಹುಡುಕುತ್ತವೆ. ಇವು ಗೆಡ್ಡೆಗಳು ಮತ್ತು ಬೇರುಗಳನ್ನು ಹೆಚ್ಚು ತಿನ್ನುತ್ತವೆ. ಅವುಗಳ ಮೂಗು ತುಂಬಾ ಸೂಕ್ಷ್ಮವಾಗಿರುವುದರಿಂದ, ನೆಲವನ್ನು ಮೂಸಿನೋಡುತ್ತಾ ಆಹಾರ ಪತ್ತೆ ಮಾಡುವುದು ಅವುಗಳ ಸಹಜ ಗುಣ. ಇದೇ ಕಾರಣಕ್ಕೆ ಅವುಗಳ ತಲೆ ಹೆಚ್ಚಿನ ಸಮಯ ನೆಲದ ಕಡೆಗೇ ಬಾಗಿರುತ್ತದೆ.
ಹಂದಿಗಳ ಜೀವನಶೈಲಿಯಲ್ಲಿ ನೆಲದ ಜೊತೆಗಿನ ನಂಟು ಬಹಳ ಹೆಚ್ಚು. ಆಹಾರಕ್ಕಾಗಿ ಮೂಗಿನಿಂದ ನೆಲ ಅಗೆಯುವುದು, ವಾಸನೆ ಮೂಲಕ ಆಹಾರ ಅಥವಾ ಇತರ ವಸ್ತುಗಳನ್ನು ಪತ್ತೆ ಮಾಡುವುದು ಅವುಗಳ ಸಹಜ ಲಕ್ಷಣ. ಹಾಗಾಗಿ ಅವುಗಳ ತಲೆ ಹೆಚ್ಚಾಗಿ ಕೆಳಗೆ ಬಾಗಿರುತ್ತದೆ. ಈ ಕಾರಣಕ್ಕಾಗಿಯೇ ಹಂದಿಗಳನ್ನು ನೋಡಿದಾಗ ಅವು ಯಾವಾಗಲೂ ನೆಲವನ್ನೇ ನೋಡುತ್ತಿರುವಂತೆ ನಮಗೆ ಅನಿಸುತ್ತದೆ.
ಪ್ರಕೃತಿಯಲ್ಲಿ ಪ್ರತಿಯೊಂದು ಪ್ರಾಣಿಯೂ ತನ್ನ ಜೀವನಶೈಲಿಗೆ ತಕ್ಕಂತೆ ವಿಶೇಷವಾದ ದೇಹ ರಚನೆ ಹೊಂದಿರುತ್ತದೆ. ಹಂದಿಗಳ ವಿಚಾರದಲ್ಲೂ ಅವುಗಳ ಬಲವಾದ ದೇಹ, ವಿಶೇಷವಾದ ಕುತ್ತಿಗೆಯ ರಚನೆ ಮತ್ತು ಮೂಗಿನಿಂದ ಆಹಾರ ಹುಡುಕುವ ಅಭ್ಯಾಸವು ಅವುಗಳ ಚಲನವಲನಗಳನ್ನು ನಿರ್ಧರಿಸುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.