Curd making hacks: ಮನೆಯಲ್ಲಿ ಹಳೆ ಮೊಸರು ಅಥವಾ ಹೆಪ್ಪು ಇಲ್ಲದಿದ್ದಾಗ, ಮೆಣಸಿನಕಾಯಿ ತೊಟ್ಟು ಅಥವಾ ಬೆಳ್ಳಿ ನಾಣ್ಯ ಬಳಸಿ ಗಟ್ಟಿ ಮೊಸರು ಮಾಡಬಹುದು ಎಂಬ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆದರೆ ಇವು ನಿಜಕ್ಕೂ ಕೆಲಸ ಮಾಡುತ್ತವೆಯೇ?
ಇವು ನಿಜಕ್ಕೂ ಕೆಲಸ ಮಾಡುತ್ತವೆಯೇ? ಮನೆಯಲ್ಲಿ ಮೊಸರು ಖಾಲಿಯಾದಾಗ ಅಥವಾ ಹೆಪ್ಪು (Starter/Jamun) ಇಲ್ಲದಿದ್ದಾಗ ಹೊಸದಾಗಿ ಮೊಸರು ಮಾಡುವುದು ಹೇಗೆ ಎಂಬ ಪ್ರಶ್ನೆ ಕಾಡುವುದು ಸಹಜ. ಇಂತಹ ಸಮಯದಲ್ಲಿ ಇಂಟರ್ನೆಟ್‌ನಲ್ಲಿ ಮೆಣಸಿನಕಾಯಿ ತೊಟ್ಟು ಅಥವಾ ಬೆಳ್ಳಿ ನಾಣ್ಯ ಬಳಸಿ ಮೊಸರು ಮಾಡುವ ವಿಡಿಯೋಗಳು ಸಖತ್ ವೈರಲ್ ಆಗುತ್ತವೆ. ಆದರೆ ಇವು ನಿಜಕ್ಕೂ ಕೆಲಸ ಮಾಡುತ್ತವೆಯೇ ಅಥವಾ ಹಾಲನ್ನು ವ್ಯರ್ಥ ಮಾಡುತ್ತವೆಯೇ? @CuminCurry ಯೂಟ್ಯೂಬ್ ಚಾನೆಲ್ ನಡೆಸಿದ ಈ ಕುತೂಹಲಕಾರಿ ಪ್ರಯೋಗದ ಫಲಿತಾಂಶ ಇಲ್ಲಿದೆ.
25
ಇಂಟರ್ನೆಟ್ ಹ್ಯಾಕ್ಸ್: ನಾಲ್ಕು ವಿಭಿನ್ನ ಪ್ರಯೋಗಗಳು
ಇಂಟರ್ನೆಟ್ ಹ್ಯಾಕ್ಸ್: ನಾಲ್ಕು ವಿಭಿನ್ನ ಪ್ರಯೋಗಗಳು ಹಳೆ ಮೊಸರು ಇಲ್ಲದೆ ಮೊಸರು ಮಾಡಲು ನಾಲ್ಕು ಸಾಮಾನ್ಯ ವಿಧಾನಗಳನ್ನು ಪರೀಕ್ಷಿಸಲಾಯಿತು.. ಹಸಿ ಮೆಣಸಿನಕಾಯಿ: ತೊಟ್ಟು ಇರುವ ಹಸಿ ಮೆಣಸಿನಕಾಯಿಯನ್ನು ಹಾಲಿನಲ್ಲಿ ಹಾಕುವುದು. ಒಣ ಮೆಣಸಿನಕಾಯಿ: ತೊಟ್ಟು ಇರುವ ಒಣ ಮೆಣಸಿನಕಾಯಿಯನ್ನು ಬಳಸುವುದು. ಬೆಳ್ಳಿ ನಾಣ್ಯ: ಹಾಲಿನಲ್ಲಿ ಬೆಳ್ಳಿಯ ನಾಣ್ಯವನ್ನು ಹಾಕುವುದು. ನಿಂಬೆ ರಸ: ಹಾಲಿಗೆ ಕೆಲವು ಹನಿ ನಿಂಬೆ ರಸ ಸೇರಿಸುವುದು. ವಿಧಾನ: ನಾಲ್ಕು ಬಟ್ಟಲುಗಳಲ್ಲಿ ಉಗುರುಬೆಚ್ಚಗಿನ ಹಾಲನ್ನು ತೆಗೆದುಕೊಂಡು, ಮೇಲಿನ ಪದಾರ್ಥಗಳನ್ನು ಸೇರಿಸಿ 15 ರಿಂದ 14 ಗಂಟೆಗಳ ಕಾಲ ಹಾಗೆಯೇ ಬಿಡಲಾಯಿತು.
35
ಬಂದಿದ್ದು ಶಾಕಿಂಗ್ ಫಲಿತಾಂಶ: ಕಥೆ ಏನಾಯ್ತು?
ಬಂದಿದ್ದು ಶಾಕಿಂಗ್ ಫಲಿತಾಂಶ: ಕಥೆ ಏನಾಯ್ತು? ಸುಮಾರು 15 ಗಂಟೆಗಳ ನಂತರ ಈ ಪ್ರಯೋಗಗಳ ಫಲಿತಾಂಶ ಹೀಗಿತ್ತು.. ಮೆಣಸಿನಕಾಯಿ (ಹಸಿ ಮತ್ತು ಒಣ): ಈ ಎರಡೂ ಬಟ್ಟಲುಗಳಲ್ಲಿ ಹಾಲು ಗಟ್ಟಿಯಾದಂತೆ ಕಂಡರೂ, ಅದರಿಂದ ಕೊಳೆತ ಅಥವಾ ಸೀದ ವಾಸನೆ ಬರುತ್ತಿತ್ತು. ಹಾಲು ಮೊಸರಾಗುವ ಬದಲಿಗೆ ಸಂಪೂರ್ಣವಾಗಿ ಹಾಳಾಗಿತ್ತು (Spoiled). ಬೆಳ್ಳಿ ನಾಣ್ಯ: ಇದರ ಕಥೆಯೂ ಅಷ್ಟೇ. ಹಾಲು ಗಟ್ಟಿಯಾಗಲಿಲ್ಲ, ಬದಲಿಗೆ ಕೆಟ್ಟ ವಾಸನೆ ಬರಲಾರಂಭಿಸಿತು. ತೀರ್ಮಾನ: ಮೆಣಸಿನಕಾಯಿ ತೊಟ್ಟು ಅಥವಾ ನಾಣ್ಯ ಬಳಸಿ ಮೊಸರು ಮಾಡುವ ಹ್ಯಾಕ್‌ಗಳು ಸಂಪೂರ್ಣ ಸುಳ್ಳು ಮತ್ತು ಇದರಿಂದ ಹಾಲು ವ್ಯರ್ಥವಾಗುತ್ತದೆ.
ಸಕ್ಸಸ್ ಆಗಿದ್ದು ಒಂದೇ..ನಿಂಬೆ ಹಣ್ಣಿನ ಟ್ರಿಕ್ ನಾಲ್ಕರಲ್ಲಿ ಕೇವಲ ನಿಂಬೆ ರಸ ಹಾಕಿದ ಬಟ್ಟಲಿನ ಹಾಲು ಮಾತ್ರ ಯಾವುದೇ ಕೆಟ್ಟ ವಾಸನೆ ಇಲ್ಲದೆ ಹೆಪ್ಪುಗಟ್ಟಿತ್ತು. ಆದರೆ ನೆನಪಿಡಿ, ಇದು ಪರ್ಫೆಕ್ಟ್ ಮೊಸರಲ್ಲ. ಇದು ಸ್ವಲ್ಪ ಮಟ್ಟಿಗೆ 'ಪನೀರ್' ಮಾಡುವ ಹದಕ್ಕೆ ಬಂದಿರುತ್ತದೆ.
ಬಳಸುವ ವಿಧಾನ: ಈ ನಿಂಬೆ ರಸದಿಂದ ಹೆಪ್ಪುಗಟ್ಟಿದ ಹಾಲನ್ನು 'ಜಾಮನ್' (ಹೆಪ್ಪು) ಆಗಿ ಬಳಸಿ, ಮತ್ತೆ ಹೊಸ ಉಗುರುಬೆಚ್ಚಗಿನ ಹಾಲಿಗೆ ಸೇರಿಸಿದರೆ, ಸುಮಾರು 5-6 ಗಂಟೆಗಳಲ್ಲಿ ನೈಸರ್ಗಿಕ ಮೊಸರು ಸಿದ್ಧವಾಗುತ್ತದೆ.
55
ಹಾಲನ್ನು ವೇಸ್ಟ್ ಮಾಡ್ಕೊಬೇಡಿ
ಹಾಲನ್ನು ವೇಸ್ಟ್ ಮಾಡ್ಕೊಬೇಡಿ ಇಂಟರ್ನೆಟ್ ವಿಡಿಯೋಗಳನ್ನು ನೋಡಿ ಅತಿಯಾದ ಹಾಲನ್ನು ಮೆಣಸಿನಕಾಯಿ ಹಾಕಿ ವ್ಯರ್ಥ ಮಾಡಬೇಡಿ. ಒಂದು ವೇಳೆ ಮನೆಯಲ್ಲಿ ಹೆಪ್ಪು ಇಲ್ಲದಿದ್ದರೆ ಕೇವಲ ನಿಂಬೆ ರಸದ ವಿಧಾನವನ್ನು ಮಾತ್ರ ಅನುಸರಿಸಿ. ಇದು ಮೊದಲ ಹಂತದಲ್ಲಿ ಸ್ವಲ್ಪ ವಿಚಿತ್ರ ಎನಿಸಿದರೂ, ಎರಡನೇ ಹಂತದಲ್ಲಿ ಉತ್ತಮ ಮೊಸರನ್ನು ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.