ನಮ್ಮೆಲ್ಲರಿಗೂ ಮೊದಲ ಹೀರೋ ಅಂದ್ರೆ ಅಪ್ಪನೇ. ಅಪ್ಪ ಯಾವಾಗಲೂ ನಮ್ಮ ಮೇಲೆ ಸಿಟ್ಟು, ಕಟ್ಟುನಿಟ್ಟಾಗಿ ನಡೆದುಕೊಂಡ್ರೂ, ನಮಗೆ ಒಳ್ಳೆ ಜೀವನ ಕೊಡಬೇಕು ಅಂತ ತನ್ನನ್ನೇ ತೊಂದರೆ ಮಾಡ್ಕೊಂಡು ಕಷ್ಟಪಡೋ ಜೀವ ಅವರೇ.
27
ಪ್ರತಿ ವರ್ಷ ಜೂನ್ ತಿಂಗಳಿನ ಮೂರನೇ ಭಾನುವಾರ ಅಪ್ಪಂದಿರ ದಿನ ಆಚರಿಸಲಾಗುತ್ತದೆ. ಈ ವರ್ಷ ಅಪ್ಪಂದಿರ ದಿನ ನಾಳೆ ಬಂದಿದೆ. ನಮ್ಮ ಬದುಕಿನ ದಾರಿದೀಪ ಅಪ್ಪನಿಗೆ ಕೆಲವು ಹೃದಯಸ್ಪರ್ಶಿ ಶುಭಾಶಯಗಳು ಇಲ್ಲಿವೆ.
37
1. ಅಪ್ಪ ಕೇವಲ ಹೆಸರಲ್ಲ, ಬದುಕಿಗೆ ದಾರಿದೀಪ. ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ!!
2. "ಅಪ್ಪ, ಅಪ್ಪಂದಿರ ದಿನದ ಶುಭಾಶಯಗಳು! ನಿಮ್ಮ ಪ್ರೀತಿ ಮತ್ತು ಮಾರ್ಗದರ್ಶನಕ್ಕೆ ಧನ್ಯವಾದಗಳು."
47
3. "ಅಪ್ಪ, ನೀವು ನನ್ನ ಮೊದಲ ಹೀರೋ! ನನ್ನ ಮಾರ್ಗದರ್ಶಕ, ನನ್ನ ಬೆಂಬಲ. ನಿಮಗೆ ಹೃತ್ಪೂರ್ವಕ ಅಪ್ಪಂದಿರ ದಿನದ ಶುಭಾಶಯಗಳು!"
4. "ಅಪ್ಪ, ನೀವು ನನಗೆ ತುಂಬಾ ಕಲಿಸಿಕೊಟ್ಟಿದ್ದೀರಿ, ನಾನು ಯಾವಾಗಲೂ ಕೃತಜ್ಞಳಾಗಿರುತ್ತೇನೆ!" ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ.
57
5. "ಅಪ್ಪ, ನಿಮ್ಮ ಪ್ರೀತಿ ಈ ಜಗತ್ತಿನಲ್ಲಿ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ." ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ!!
6. "ನಿಮ್ಮ ಜ್ಞಾನ ಮತ್ತು ಪ್ರೀತಿ ನನ್ನನ್ನು ಪ್ರತಿದಿನ ದಾರಿ ತೋರಿಸುತ್ತದೆ." ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ!!
67
7. "ಅಪ್ಪ, ನೀವು ನನ್ನ ಆದರ್ಶ." ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ!!
8. "ಅಪ್ಪ ನಿಮ್ಮ ಪ್ರೀತಿ ನನಗೆ ಸಿಕ್ಕ ಅತ್ಯುತ್ತಮ ಆಶೀರ್ವಾದ." ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ!!
77
9. "ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ, ಅದೂ ದೇವರಿಂದ ಬಂದದ್ದು. ಅವರನ್ನೇ ನಾನು ಅಪ್ಪ ಅಂತ ಕರೀತೀನಿ. ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ!!"
10. "ಅಪ್ಪ, ನಿಮ್ಮನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ತುಂಬಾ ಪ್ರೀತಿ ಅಪ್ಪ!"