ಬದುಕಿಗೊಂದು ಸ್ಪೂರ್ತಿ ಬೇಕಾ, ರತನ್‌ ಟಾಟಾ ಹೇಳಿರುವ ಟಾಪ್‌-10 ಮಾತುಗಳಿವು!

Published : Oct 10, 2024, 01:03 AM IST

ರತನ್ ಟಾಟಾ ಕೇವಲ ಒಬ್ಬ ಯಶಸ್ವಿ ಉದ್ಯಮಿ ಮಾತ್ರವಲ್ಲದೆ, ಯುವ ಪೀಳಿಗೆಗೆ ಸ್ಫೂರ್ತಿಯ ದಾರಿದೀಪ. ಅವರ ಮಾತುಗಳು ಜೀವನದಲ್ಲಿ ಏರಿಳಿತಗಳನ್ನು ಎದುರಿಸಲು, ಸವಾಲುಗಳನ್ನು ಮೆಟ್ಟಿ ನಿಲ್ಲಲು ಮತ್ತು ಯಶಸ್ಸಿನ ಹಾದಿಯಲ್ಲಿ ಸಾಗಲು ಪ್ರೇರೇಪಿಸುತ್ತವೆ.

PREV
112
ಬದುಕಿಗೊಂದು ಸ್ಪೂರ್ತಿ ಬೇಕಾ, ರತನ್‌ ಟಾಟಾ ಹೇಳಿರುವ ಟಾಪ್‌-10 ಮಾತುಗಳಿವು!
Modi

ರತನ್ ಟಾಟಾ ಮುಂದಿನ ಪೀಳಿಗೆಗೆ ಯುವಕರಿಗೆ ಸ್ಫೂರ್ತಿಯ ದಾರಿದೀಪವಾಗಿ ನಿಂತ ವ್ಯಕ್ತಿ. ಅಪ್ಪಟ ದೇಶಭಕ್ತ ಭಾರತೀಯ ಕೈಗಾರಿಕೋದ್ಯಮಿ ಮಾತ್ರವಲ್ಲ, ದೇಶದ ಬಡವರ ಬಗ್ಗೆ ಚಿಂತಿಸಿದ, ಅವರ ಬದುಕು ಹಸನಾಗಲಿ ಎಂದು ಹಾರೈಸಿದ ವ್ಯಕ್ತಿ.
 

212

ರತನ್‌ ಟಾಟಾ ಅವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಉದ್ಯಮಿ ಆದವರಿದ್ದಾರೆ. ಹಲವಾರು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದವರಿದ್ದಾರೆ. ಅವರಿಗಾಗಿ ರತನ್‌ ಟಾಟಾ ಹೇಳಿರುವ 10 ಪ್ರಮುಖ ಮಾತುಗಳು ಇಲ್ಲಿವೆ.
 

312

ಕಬ್ಬಿಣವನ್ನು ಯಾರೂ ಕೂಡ ನಾಶ ಮಾಡಲು ಸಾಧ್ಯವಿಲ್ಲ. ಆದರೆ, ಅದರಲ್ಲೇ ಹುಟ್ಟುವ ತುಕ್ಕು ಕಬ್ಬಿಣವನ್ನು ನಾಶ ಮಾಡುತ್ತದೆ. ಅದೇ ರೀತಿ ಯಾರೂ ಒಬ್ಬ ವ್ಯಕ್ತಿಯನ್ನು ನಾಶಮಾಡಲು ಸಾಧ್ಯವಿಲ್ಲ, ಆದರೆ ಅವರ ಸ್ವಂತ ಮನಸ್ಥಿತಿ ಅವರನ್ನು ನಾಶ ಮಾಡಬಹುದು.
 

412

ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನು ವಿನಮ್ರವಾಗಿ ತೆಗೆದುಕೊಳ್ಳಿ, ಮತ್ತು ಅದೇ ಕಲ್ಲಿನಿಂದ ನಿಮ್ಮ ಇಚ್ಛೆಯ ಸ್ಮಾರಕವನ್ನು ನಿರ್ಮಿಸಿ

512

ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಂತರ ಅವುಗಳನ್ನು ಸರಿಯಾಗಿ ಮಾಡುತ್ತೇನೆ.

612

'ಯಾವ ದಿನ ನನಗೆ ಹಾರಲು ಸಾಧ್ಯವಾಗೋದಿಲ್ಲವೋ, ಆ ದಿನ ನನಗೆ ದುಃಖದ ದಿನವಾಗಿರುತ್ತದೆ...' ವಿಮಾನ ಪ್ರಯಾಣದ ಕುರಿತಾಗಿ ರತನ್‌ ಟಾಟಾ ಹೇಳಿದ ಮಾತು

712

ಯಾವುದೇ ಅಪಾಯವನ್ನು ತೆಗೆದುಕೊಳ್ಳದಿರುವುದು ದೊಡ್ಡ ಅಪಾಯ. ಕ್ಷಿಪ್ರವಾಗಿ  ಬದಲಾಗುತ್ತಿರುವ ಜಗತ್ತಿನಲ್ಲಿ, ಸೋಲು ಕಾಣುವ ಏಕೈಕ ಮಾರ್ಗ ಎಂದರೆ ಅಪಾಯಗಳನ್ನು ತೆಗೆದುಕೊಳ್ಳದಿರುವುದು.

812

'ಬದುಕಿನ ಕೊನೆಯಲ್ಲಿ, ನಾವು ತೆಗೆದುಕೊಳ್ಳದ ಅವಕಾಶಗಳಿಗೆ ಮಾತ್ರ ನಾವು ವಿಷಾದಪಡುತ್ತೇವೆ..' ಸಂದರ್ಶನವೊಂದರಲ್ಲಿ ಬದುಕಿನ ಬಗ್ಗೆ ಹೇಳಿದ ಮಾತು..

912

ಜೀವನದಲ್ಲಿ ಏರಿಳಿತಗಳು ನಮ್ಮನ್ನು ಮುಂದುವರಿಸಲು ಬಹಳ ಮುಖ್ಯ ಏಕೆಂದರೆ ಇಸಿಜಿಯಲ್ಲಿಯೂ ಸಹ ಸರಳ ರೇಖೆಯು ನಾವು ಜೀವಂತವಾಗಿಲ್ಲ ಎಂದೇ ತೋರಿಸುತ್ತದೆ.
 

1012

ನಾನು ಯಾವಾಗಲೂ ಭಾರತದ ಭವಿಷ್ಯದ ಬಗ್ಗೆ ತುಂಬಾ ಆತ್ಮವಿಶ್ವಾಸ ಮತ್ತು ಲವಲವಿಕೆಯಿಂದ ಇದ್ದೇನೆ. ದೇಶದ ಶಕ್ತಿ ನನಗೆ ಗೊತ್ತು..

ಇದನ್ನೂ ಓದಿ: Breaking: ಭಾರತದ ಮಹಾಉದ್ಯಮಿ ರತನ್‌ ಟಾಟಾ ವಿಧಿವಶ

1112

ನಾನು ಕೆಲಸ-ಜೀವನದ ಸಮತೋಲನವನ್ನು ನಂಬುವುದಿಲ್ಲ. ನಾನು ಕೆಲಸ-ಜೀವನದ ಏಕೀಕರಣವನ್ನು ನಂಬುತ್ತೇನೆ. ನಿಮ್ಮ ಕೆಲಸ ಮತ್ತು ಜೀವನವನ್ನು ಅರ್ಥಪೂರ್ಣ ಮತ್ತು ಪೂರೈಸುವಂತೆ ಮಾಡಿ ಮತ್ತು ಅವು ಪರಸ್ಪರ ಪೂರಕವಾಗಿರುತ್ತವೆ.

ಇದನ್ನೂ ಓದಿ: Ratan Tata: ಅಪ್ಪಟ ದೇಶಪ್ರೇಮಿ, ಮಹಾಉದ್ಯಮಿಯ ಜೀವನದ ಪ್ರಮುಖ ಮೈಲಿಗಲ್ಲುಗಳು..

1212

ಸಮಗ್ರತೆ, ಬದ್ಧತೆ ಇರುವ  ವ್ಯಕ್ತಿಯಾಗಿ ಬದುಕಿ. ಜೀವನದಲ್ಲಿ ಯಾವಾಗಲೂ ಸರಿಯಾದದ್ದನ್ನು ಮಾಡಲು ಪ್ರಯತ್ನ ಮಾಡಿ ಅದು ಕಷ್ಟವಾಗಿದ್ದರೂ ಸಹ.

 

click me!

Recommended Stories