Published : Oct 18, 2024, 01:01 PM ISTUpdated : Oct 18, 2024, 01:15 PM IST
ಕೆಲವೊಮ್ಮೆ ಜಿರಳೆಗಳನ್ನುಓಡಿಸುವುದಕ್ಕೆ ಮಾಡುವ ಎಲ್ಲಾ ಪ್ರಯತ್ನಗಳು ವಿಫಲವಾಗಿ ಮನೆ ಗೃಹಿಣಿಯರ ತಲೆ ಕೆಟ್ಟು ಹೋದ ಹಾಗಾಗುತ್ತೆ. ತರಕಾರಿ, ಹಣ್ಣುಗಳ ಮೇಲೆ ಓಡಾಡುವ ಜಿರಳೆ ರೋಗ ಹರಡೋದು ಗ್ಯಾರಂಟಿ. ಹಾಗಿದ್ರೆ ಜಿರಳೆಗಳನ್ನ ಸುಲಭವಾಗಿ ಓಡಿಸಲು ಇನ್ನೊಂದು ವಿಧಾನವಿದೆ. ಟ್ರೈ ಮಾಡಿ ನೋಡಿ.
ಮನೆಯಲ್ಲಿ ಜಿರಳೆಗಳು ಓಡಾಡುತ್ತಿದ್ದರೂ ಕೆಲವರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಜಿರಳೆ ಬ್ಯಾಕ್ಟೀರಿಯಾ ಹರಡುತ್ತವೆ. ಪಾತ್ರೆ, ತರಕಾರಿ ಮತ್ತು ಹಣ್ಣುಗಳ ಮೇಲೆ ಓಡಾಡುವ ಮೂಲಕ ಹಲವು ರೋಗಗಳನ್ನು ಸುಲಭವಾಗಿ ಹರಡುತ್ತದೆ. ಆದ್ದರಿಂದ ಮನೆ ಆದಷ್ಟು ಜಿರಳೆ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು.
25
ಕೆಲವೊಮ್ಮೆ ನಾವು ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಜಿರಳೆ ಓಡಿಸೋದು ಕಷ್ಟ.ಇಂತಹ ಜಿರಳೆ ಸಮಸ್ಯೆಗೊಂದು ಸಿಂಪಲ್ ಪರಿಹಾರವಿದೆ.
35
ಬಿರಿಯಾನಿ ಎಲೆ. ಹೌದು ಜಿರಳೆಗಳು ಬಿರಿಯಾನಿ ಎಲೆ ವಾಸನೆಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಮನೆ ಒರೆಸುವಾಗ ನೀರಲ್ಲಿ ಬಿರಿಯಾನಿ ಎಲೆಗಳನ್ನು ಹಾಕಬೇಕು. ನೇರವಾಗಿ ಎಲೆಗಳನ್ನು ಹಾಕುವ ಬದಲು, ಎಲೆಗಳ ಪೇಸ್ಟ್ ಮಾಡಿಟ್ಟುಕೊಂಡು ಒರೆಸುವಾಗ ಹಾಕಿಕೊಂಡರೆ ಸಾಕು. ಹೀಗೆ ಮಾಡುವುದರಿಂದ ಮನೆ ಸ್ವಚ್ಛವಾಗಿರುವ ಜೊತೆಗೆ ಜಿರಳೆ ಕಾಟವೂ ಇರುವುದಿಲ್ಲ. ಅಲ್ಮೆರಾಗಳಿಂದ ಜಿರಳೆಗಳನ್ನು ಓಡಿಸಲು, ನೀವು ಎಲೆಯನ್ನು ನೇರವಾಗಿ ಅಲ್ಮೆರಾದಲ್ಲಿಯೂ ಇಡಬಹುದು.
45
ಹಾಗಲಕಾಯಿ ಅಡುಗೆ ಮಾಡುವಾಗ ಸಿಪ್ಪೆ ತೆಗೆದು ಎಸೆಯೋ ಬದಲು ಜಿರಲೆ ಓಡಿಸಲು ಬಳಸಬಹುದು. ಹಾಗಲ ಸಿಪ್ಪೆ ಪೇಸ್ಟ್ ಮಾಡಿ, ಒರೆಸುವ ನೀರಲ್ಲಿ ಬೆರೆಸಿ ಮನೆ ಸ್ವಚ್ಛಗೊಳಿಸಬೇಕು. ಇದು ಜಿರಳೆಗಳನ್ನು ಮಾತ್ರವಲ್ಲದೇ, ಬ್ಯಾಕ್ಟೀರಿಯಾವನ್ನೂ ನಾಶಪಡಿಸುತ್ತದೆ.
55
ಕೇವಲ ನೀರಿನಿಂದ ಮನೆ ಒರೆಸುವುದರಿಂದ ಮನೆ ಸರಿಯಾಗಿ ಸ್ವಚ್ಛವಾಗುವುದಿಲ್ಲ. ಇದಕ್ಕಾಗಿ, ನೀವು ಜಿರಳೆಗಳಿಗೆ ವಿಷಕಾರಿಯಾದ ಕೆಲವು ವಸ್ತುಗಳನ್ನು ಹಾಕಬೇಕು. ಉದಾಹರಣೆಗೆ, ಲವಂಗದ ವಾಸನೆ ಜಿರಳೆಗೆ ಆಗೋಲ್ಲ. ಲವಂಗವನ್ನು ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಿಕೊಂಡು, ಲೋಟ ನೀರಲ್ಲಿ ಹಾಕಿ ಕುದಿಸಬೇಕು. ನಂತರ, ಈ ನೀರನ್ನು ಒರೆಸುವ ಬಕೆಟಿನಲ್ಲಿ ಹಾಕಿದರೆ ಸಾಕು. ಲವಂಗ ತುಂಬಾ ಬಲವಾದ ವಾಸನೆಯನ್ನು ಹೊಂದಿರುತ್ತದೆ. ಇದನ್ನು ನೀರಿನಲ್ಲಿ ಕುದಿಸಿದಾಗ ಮತ್ತಷ್ಟೂ ಸ್ಮೆಲ್ ಹೆಚ್ಚುತ್ತೆ. ಇದರಿಂದ ಜಿರಳೆ ದೂರವಾಗುತ್ತದೆ. ನಿಮ್ಮ ಅಡುಗೆಮನೆಯಲ್ಲಿ ಅಥವಾ ಅಲ್ಮೆರಾದಲ್ಲಿ ಜಿರಳೆಗಳಿದ್ದರೆ, ಲವಂಗದ ಪುಡಿಯನ್ನು ಕಾಗದದಲ್ಲಿ ಹಾಕಿ ಒಂದು ಮೂಲೆಯಲ್ಲಿ ಇರಿಸಿ. ಇದು ಜಿರಳೆಗಳನ್ನು ದೂರವಿರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.