ವಿಭಕ್ತ ಕುಟುಂಬದಲ್ಲಿ ಬೆಳೆದವರಿಗೆ ಇದನ್ನು ನಂಬುವುದಕ್ಕೂ ಊಹೆ ಮಾಡುವುದಕ್ಕೂ ಕೂಡ ಕಷ್ಟವಾಗಬಹುದು. ಆದರೆ ಇಲ್ಲೊಂದು ಕುಟುಂಬದಲ್ಲಿ 199 (ಬಹುಶಃ ಈ ಸಂಖ್ಯೆಯಲ್ಲಿ ಹೆಚ್ಚಳ ಇರಬಹುದು) ಜನ ಒಟ್ಟಿಗೆ ವಾಸ ಮಾಡುತ್ತಾರೆ. ಕೆಲವು ಕುಟುಂಬಗಳಲ್ಲಿ ಶುಭ ಸಮಾರಂಭಗಳಲ್ಲಿ ಶುಭ ಸಮಾರಂಭಗಳಿಗೆ 150 ಜನ ಸೇರಿದರೆ ಅದೇ ಹೆಚ್ಚು ಆದರೆ ಇಲ್ಲಿ ಬರೀ ಕುಟುಂಬದವರೇ ಒಟ್ಟು 199 ಜನ ಇದ್ದಾರೆ.
ಇಷ್ಟೊಂದು ದೊಡ್ಡದಾದ ಅವಿಭಕ್ತ ಕುಟುಂಬವಿರುವುದು ಈಶಾನ್ಯ ಭಾರತದ ಪುಟ್ಟ ರಾಜ್ಯವಾದ ಮಿಜೋರಾಂನಲ್ಲಿ ಈ ಕುಟುಂಬದಲ್ಲಿ ಬಹುಪತ್ನಿತ್ವ ಚಾಲ್ತಿಯಲ್ಲಿದ್ದು, ಈ ಕುಟುಂಬದ ಹಿರಿಯನೆನಿಸಿದ ಜಿಯೋನಾ ಛನಾ ಅವರು 39 ಪತ್ನಿಯರನ್ನು ಹೊಂದಿದ್ದಾರೆ.
39 ಪತ್ನಿಯರಿಂದ ಒಟ್ಟು 94 ಮಕ್ಕಳನ್ನು ಪಡೆದಿರುವ ಜಿಯೋನಾ ಛನಾ ಅವರಿಗೆ 14 ಮಂದಿ ಸೊಸೆಯಂದಿರಿದ್ದಾರೆ. 33 ಮೊಮ್ಮಕ್ಕಳನ್ನು ಹೊಂದಿದ್ದು, 4 ಅಂತಸ್ತಿನ ಒಂದೇ ಕಟ್ಟಡದಲ್ಲಿ ವಾಸವಿದ್ದಾರೆ.
ಮಿಜೋರಾಂನ ಐಝಾಲ್‌ನಲ್ಲಿ ಈ ಕುಟುಂಬವಿದ್ದು, ಜಿಯೋನಾ ಛನಾ ಈ ಪಿತೃ ಪ್ರಧಾನ ಕುಟುಂಬದ ಮುಖ್ಯಸ್ಥನಾಗಿದ್ದು ಕ್ರಿಶ್ಚಿಯನ್ ಸಮುದಾಯದ ಉಪ ಪಂಗಡವಾದ ಛನಾ ಪಾಲ್‌ನ ಮುಖ್ಯಸ್ಥರೂ ಆಗಿದ್ದರು. ಛನಾ ಪಾಲ್ ಪಂಗಡವೂ ಬಹುಪತ್ನಿತ್ವ ಪದ್ಧತಿಯನ್ನು ಹೊಂದಿದೆ. ಇದರಿಂದ ಇವರು ವಿಶ್ವದ ಅತೀ ದೊಡ್ಡ ಕೂಡು ಕುಟುಂಬ ಎಂಬ ಹೆಗ್ಗಳಿಕೆ ಗಳಿಸಲು ಸಾಧ್ಯವಾಗಿದೆ.
ಐದು ಆರು ಜನರಿರುವ ಕುಟುಂಬವನ್ನೇ ಸಂಭಾಳಿಸುವುದು ಬಹಳ ಕಷ್ಟದ ಕೆಲಸ ಹಾಗಿರುವಾಗ ಈ ಕುಟುಂಬದಲ್ಲಿ 199 ಜನರಿದ್ದು, ಎಲ್ಲರನ್ನು ಎಲ್ಲವನ್ನು ಬಹಳ ವ್ಯವಸ್ಥಿತವಾಗಿ ಒಗ್ಗಟ್ಟಿನಿಂದ ನಿಭಾಯಿಸುತ್ತಿದೆ ಈ ಕುಟುಂಬ.
ದೊಡ್ಡದಾದ 4 ಅಂತಸ್ಥಿನ ಮನೆಯನ್ನು ಈ ಕುಟುಂಬ ಹೊಂದಿದ್ದು, ಇದರಲ್ಲಿ 100 ಬೆಡ್‌ರೂಮ್‌ಗಳಿವೆ. ಒಂದೇ ಸೂರಿನ ಕೆಳಗೆ ಎಲ್ಲರೂ ವಾಸ ಮಾಡುತ್ತಿದ್ದು ದಿನದ ಕೆಲಸಗಳಿಂದ ಹಿಡಿದು ಜೀವನ ನಿರ್ವಹಣೆವರೆಗೆ ಎಲ್ಲವನ್ನೂ ಹಂಚಿಕೊಂಡು ಮಾಡುತ್ತಾರೆ ಈ ಕುಟುಂಬದ ಸದಸ್ಯರು.
ಈ ಕುಟುಂಬದ ಎಲ್ಲರಿಗಾಗಿ 100 ಕೆಜಿ ಅಕ್ಕಿಯನ್ನು ದಿನವೂ ಬೇಯಿಸಲಾಗುತ್ತದೆಯಂತೆ. ಜೊತೆಗೆ 200 ಕೆಜಿ ಅಲೂಗಡ್ಡೆ, 39 ಕೆಜಿ ಕೋಳಿ ಮಾಂಸವನ್ನು ದಿನವೂ ಆಹಾರಕ್ಕಾಗಿ ಬಳಸಲಾಗುತ್ತದೆ.
ಕಾಲೇಜು ಹಾಸ್ಟೆಲ್‌ನಂತೆ ಬೆಡ್‌ರೂಮ್ ಕೋಣೆಗಳಿದ್ದು, ಹೆಂಡತಿ ಮಕ್ಕಳು ಈ ಡೋರ್ಮ್ಸ್‌ನಲ್ಲಿ ಮಲಗಿದರೆ ಛನಾಗೆ ಮಾತ್ರ ಪ್ರತ್ಯೇಕವಾದ ಕೋಣೆ ಇದೆ. ಈ ಛನಾ ಸ್ವಂತದ್ದಾದ ಶಾಲೆಯೊಂನ್ನು ಹೊಂದಿದ್ದು ಅಲ್ಲಿಯೇ ಈತನ ಮಕ್ಕಳು ಶಿಕ್ಷಣ ಪಡೆಯುತ್ತಾರೆ.
ಅಲ್ಲದೇ ಎಲ್ಲ ಪತ್ನಿಯರು ಛನಾ ಅವರನ್ನು ಸಮಾನವಾಗಿ ಪ್ರೀತಿ ಮಾಡುತ್ತಾರಂತೆ, ನಮ್ಮ ನಡುವೆ ಯಾವುದೇ ದ್ವೇಷವಿಲ್ಲ ಎನ್ನುತ್ತಾರೆ. ಛನಾ ಅವರ 38 ಪತ್ನಿಯರು. ಇಷ್ಟೊಂದು ಜನರಿದ್ದರು ಈ ಕುಟುಂಬದಲ್ಲಿ ಕಿತ್ತಾಟಗಳಿಲ್ಲ, ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಪರಸ್ಪರ ಪ್ರೀತಿ ಸಹಕಾರದಿಂದ ಜೀವನ ಮಾಡುತ್ತಿದೆ ಈ ಕುಟುಂಬ.
2018ರಲ್ಲಿ ಛನಾ ಅವರನ್ನು ಮಾಧ್ಯಮಗಳು ಮಾತನಾಡಿಸಿದಾಗ ನಾವು ಬಹಳ ಒಗ್ಗಟ್ಟಿನಿಂದ ಇದ್ದೇವೆ. ಇದೇ ಕಾರಣಕ್ಕೆ ಇಷ್ಟೊಂದು ದೊಡ್ಡ ಕುಟುಂಬ ಬೆಳೆಯಲು ಸಾಧ್ಯವಾಯ್ತು ದೇವರ ಆಶೀರ್ವಾದದಿಂದ ಇಷ್ಟೊಂದು ದೊಡ್ಡ ಕುಟುಂಬವನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದ್ದರು.
ಈ ಕುಟುಂಬದಲ್ಲಿರುವ ಪುರುಷರು ಕೃಷಿ, ಹೈನುಗಾರಿಕೆ (ಹಂದಿ, ಹಸು ಕೋಳಿಗಳ ಸಾಕಾಣೆ), ಪೀಠೋಪಕರಣಗಳ ತಯಾರಿ ಮುಂತಾದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕುಟುಂಬ ನಿರ್ವಹಣೆಗೆ ಆರ್ಥಿಕವಾಗಿ ನೆರವಾಗುತ್ತಾರೆ.
ಛನಾ ಅವರ ಮೊದಲ ಪತ್ನಿ ಈ ಮನೆಯೊಳಗಿನ ಎಲ್ಲಾ ಕೆಲಸಗಳ ಮೇಲುಸ್ತುವಾರಿ ವಹಿಸಿಕೊಳ್ಳುತ್ತಾರೆ. ಕುಟುಂಬದಲ್ಲಿರುವ ಛನಾ ಅವರ ಇತರ ಕಿರಿಯ ಪತ್ನಿಯರು ತಮ್ಮನ್ನು ಬಹಳ ಗೌರವದಿಂದ ನಡೆಸಿಕೊಳ್ಳುತ್ತಾರೆ ಎನ್ನುತ್ತಾರೆ ಛನಾ ಮೊದಲ ಪತ್ನಿ
ಮಹಿಳೆಯರು ಅಡುಗೆ ಹಾಗೂ ಸ್ವಚ್ಛತಾ ಕೆಲಸ ಹಾಗೂ ಮಕ್ಕಳ ಪಾಲನೆಯ ಕೆಲಸದಲ್ಲಿ ತೊಡಗಿದ್ದಾರೆ. 2021ರಲ್ಲಿ ತಮ್ಮ 76ನೇ ವರ್ಷದಲ್ಲಿ ಜಿಯೋನಾ ಛನಾ ಅವರು ತೀರಿಕೊಂಡಿದ್ದು, ಅವರ ಗೌರವಾರ್ಥವಾಗಿ ಇಡೀ ಕುಟುಂಬ ಇಂದಿಗೂ ಜೊತೆಯಾಗಿ ಜೀವನ ಮಾಡುತ್ತಿದ್ದಾರೆ.