ಹುಡುಗಿಯರಲ್ಲಿ ಹುಡುಗರು ನೋಡೋ ಮೊದಲ ವಿಷಯವೇ ಇದು! ಎಚ್ಚೆತ್ತುಕೊಳ್ಳಿ ಗರ್ಲ್ಸ್...!‌

Published : May 13, 2025, 04:13 PM ISTUpdated : May 13, 2025, 04:17 PM IST

ಆಕರ್ಷಣೆಯು ಎನ್ನೋದು ತುಂಬ ಮುಖ್ಯ. ಫಸ್ಟ್‌ ಇಂಪ್ರೆಶನ್‌ ಈಜ್‌ ದಿ ಬೆಸ್ಟ್‌ ಇಂಪ್ರೆಶನ್‌ ಎಂದು ಹೇಳುತ್ತಾರೆ. ಆಫೀಸ್‌ನಲ್ಲಿ ಬಾಸ್‌, ಸಹದ್ಯೋಗಿಗಳನ್ನು ಮೆಚ್ಚಿಸಲು ಅಥವಾ ಹುಡುಗ, ಹುಡುಗಿಯನ್ನು ಮೆಚ್ಚಿಸಲು ಒಂದಲ್ಲ ಒಂದು ಸರ್ಕಸ್‌ ಮಾಡೋದುಂಟು. ಇನ್ನು ಹುಡುಗರು ಹುಡುಗಿಯರ ಬಳಿ ಯಾವ ವಿಷಯವನ್ನು ಮೊದಲು ಗಮನಿಸ್ತಾರೆ ಎಂದು ಕೆಲವರಿಗೆ ಸಂದೇಹ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ. 

PREV
18
ಹುಡುಗಿಯರಲ್ಲಿ ಹುಡುಗರು ನೋಡೋ ಮೊದಲ ವಿಷಯವೇ ಇದು! ಎಚ್ಚೆತ್ತುಕೊಳ್ಳಿ ಗರ್ಲ್ಸ್...!‌
ಸಕಾರಾತ್ಮಕ ಶಕ್ತಿ

ವೈಬ್‌ ಚೆನ್ನಾಗಿರಬೇಕು ಎಂದು ಹೇಳುತ್ತಾರೆ. ಒಂದು ಹುಡುಗಿಯನ್ನು ಕಂಡಾಗ ಪಾಸಿಟಿವ್‌ ವೈಬ್‌ ಬಂದರೆ ಕಾಂಟ್ಯಾಕ್ಟ್‌, ಕಮ್ಯುನಿಕೇಶನ್‌ ಮಾಡಬಹುದು. 

28
ಸೌಂದರ್ಯ

ಹಾಕಿಕೊಂಡಿರುವ ಬಟ್ಟೆ ಹೇಗಿದೆ? ಡ್ರೆಸ್ಸಿಂಗ್‌ ಸೆನ್ಸ್‌ ಹೇಗಿದೆ? ಉಗುರುಗಳು ಕ್ಲೀನ್‌ ಆಗಿವೆಯೇ? ನೇಲ್‌ ಪಾಲಿಶ್‌ ನೀಟ್‌ ಆಗಿದೆಯೇ ಎಂದು ನೋಡುತ್ತಾರೆ.
 

38
ಕೂದಲು

ಕೂದಲು ಉದ್ದವಾಗಿದೆಯೇ? ಶಾರ್ಟ್‌ ಆಗಿದೆಯೇ? ಕೂದಲಿಗೆ ಕಲರಿಂಗ್‌ ಮಾಡಲಾಗಿದೆಯೇ? ಕೂದಲು ಹೊಳಿಪಿನಿಂದ ಕೂಡಿದೆಯೇ ಎಂದು ಹುಡುಗರು ಗಮನಿಸುತ್ತಾರೆ. ಕೂದಲು ಎಷ್ಟು ಚೆನ್ನಾಗಿ ಕಾಣತ್ತೋ ಅಷ್ಟು ಡಿಗ್ನಿಡಿಯಿಂದ ಕಾಣ್ತಾರಂತೆ. 

48
ಬಾಡಿ ಲ್ಯಾಂಗ್ವೇಜ್‌

ಆತ್ಮವಿಶ್ವಾಸವು ಆಕರ್ಷಣೆ ಕೊಡುತ್ತದೆ. ಓರ್ವ ಮಹಿಳೆಯ ನೇರವಾದ ಭಂಗಿ, ಶಾಂತವಾದ ಭುಜಗಳು, ಉದ್ದೇಶಪೂರ್ವಕವಾದ ನಡಿಗೆ ಪುರುಷರ ಗಮನವನ್ನು ಸೆಳೆಯುತ್ತದೆ. ಇದು ಸೌಂದರ್ಯವನ್ನು ಹೆಚ್ಚಿಸುತ್ತದೆ.
 

58
ಕಣ್ಣುಗಳು

ಕಣ್ಣುಗಳನ್ನು ಆತ್ಮದ ಕಿಟಕಿಗಳೆಂದು ಕರೆಯಲಾಗುತ್ತದೆ. ಹುಡುಗರು ಕಣ್ಣಿಗೆ ಬೀಳ್ತಾರೆ ಎಂದು ಹೇಳಲಾಗುವುದು. ಇವು ಭಾವನೆ ಮತ್ತು ವ್ಯಕ್ತಿತ್ವವನ್ನು ತಿಳಿಸುತ್ತವೆ. ಮೊದಲ ಭೇಟಿಯಲ್ಲಿ ಐ ಕಾಂಟ್ಯಾಕ್ಟ್ ತಕ್ಷಣವೇ ಒಂದು ಸ್ಪಾರ್ಕ್ ಉಂಟುಮಾಡಬಹುದು.‌
 

68
ಮೇಕಪ್‌

ಮೇಕಪ್‌ ಹೆಚ್ಚಾದಂತೆ, ಬೆಳಗ್ಗೆ ಕಂಡಕೂಡಲೇ ನಾವು ಚೆನ್ನಾಗಿ ಕಾಣ್ತೀವಿ ಎಂದು ಕೆಲವರು ಅಂದುಕೊಂಡಿದ್ದಾರೆ. ಇದು ತಪ್ಪು. ಎಷ್ಟು ಮೇಕಪ್‌ ಕಡಿಮೆ ಇರುತ್ತದೆಯೋ? ಎಷ್ಟು ಸಿಂಪಲ್‌ ಆಗಿರುತ್ತಾರೋ ಅವರ ಕಂಡರೆ ಹುಡುಗರಿಗೆ ತುಂಬ ಇಷ್ಟ. ನ್ಯಾಚುಲರ್‌ ಬ್ಯೂಟಿಗೆ ಅವರು ಗಮನ ಕೊಡ್ತಾರೆ. 
 

78
ಮುದ್ದಾದ ನಗು

ನಿಜವಾದ ನಗು ಒಂದು ಸೌಹಾರ್ದಯುತ ಸಂಕೇತವಾಗಿದೆ. ಪುರುಷರು ಸಾಮಾನ್ಯವಾಗಿ ಮಹಿಳೆಯ ನಗುವನ್ನು ಮೊದಲಿಗೆ ಗಮನಿಸುತ್ತಾರೆ, ಏಕೆಂದರೆ ಅದು ಸ್ನೇಹಪರತೆ, ಮುಕ್ತತೆಯನ್ನು ಸೂಚಿಸುತ್ತದೆ. ಹೊಳೆಯುವ, ಆತ್ಮವಿಶ್ವಾಸ ಇರುವ ಈ ನಗು ಉತ್ತಮ ಸಂಭಾಷಣೆ ಮತ್ತು ಸಂಪರ್ಕವನ್ನು ಆಹ್ವಾನಿಸುತ್ತದೆ. 
 

88
ವರ್ತನೆ

ಓರ್ವ ಹುಡುಗಿ ಎಷ್ಟು ಮಾತಾಡ್ತಾಳೆ? ಯಾವ ರೀತಿ ಮಾತಾಡ್ತಾಳೆ? ಬೇರೆಯವರ ಜೊತೆ ಅವಳು ಹೇಗೆ ವರ್ತಿಸುತ್ತಾಳೆ ಎನ್ನೋದು ಕೂಡ ಮುಖ್ಯ ಆಗುತ್ತದೆ. 

Read more Photos on
click me!

Recommended Stories