ಈ 3 ಬಣ್ಣ ಬಳಸುವ ಜನರಿಗೆ ಆತ್ಮವಿಶ್ವಾಸವೇ ಕಡಿಮೆ, ಏನೋ ಒಂಥರಾ ಭಯ

Published : Mar 06, 2026, 12:59 PM IST

Color Psychology: ಬಣ್ಣಗಳು ಒಬ್ಬ ವ್ಯಕ್ತಿಯ ಸಂಪೂರ್ಣ ಗುಣ ನಿರ್ಧರಿಸುವುದಿಲ್ಲ. ಆದರೆ, ನಾವು ಪದೇ ಪದೇ ಮಾಡುವ ಬಣ್ಣದ ಆಯ್ಕೆಗಳು ನಮ್ಮ ಆ ಕ್ಷಣದ ಮನಸ್ಥಿತಿ ಮತ್ತು ಅಭ್ಯಾಸಗಳನ್ನು ತೋರ್ಪಡಿಸುತ್ತವೆ. ಈ ಬದಲಾವಣೆಗಳನ್ನು ಗಮನಿಸುವುದು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಮೊದಲ ಹೆಜ್ಜೆಯಾಗಿದೆ.      

PREV
15
ವ್ಯಕ್ತಿಯ ಭಾವನೆ ಅರ್ಥಮಾಡಿಕೊಳ್ಳಲು ಸುಳಿವು

ಮನೋವಿಜ್ಞಾನದ ಪ್ರಕಾರ, ಕಡಿಮೆ ಆತ್ಮವಿಶ್ವಾಸ ಹೊಂದಿರುವವರು ಹೆಚ್ಚಾಗಿ ಕೆಲವು ನಿರ್ದಿಷ್ಟ ಬಣ್ಣಗಳನ್ನು ಆರಿಸಿಕೊಳ್ಳುತ್ತಾರೆ. ಈ ಬಣ್ಣಗಳು ಅವರಲ್ಲಿರುವ ಅಭದ್ರತೆ (Insecurity), ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವ ಹಂಬಲ ಮತ್ತು ಭಾವನಾತ್ಮಕವಾಗಿ ಸುರಕ್ಷಿತವಾಗಿರಬೇಕು ಎಂಬ ಮನಸ್ಥಿತಿಯನ್ನು ತೋರಿಸುತ್ತವೆ. ಬಣ್ಣಗಳು ನಮ್ಮ ಮೂಡ್ ಮತ್ತು ಇತರರು ನಮ್ಮನ್ನು ನೋಡುವ ರೀತಿಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬ ಬಗ್ಗೆ ನಡೆಸಿದ ಸಂಶೋಧನೆಗಳು ಈ ಕೆಳಗಿನ ಮಾದರಿಗಳನ್ನ ಗುರುತಿಸಿವೆ. ಇದು ಎಲ್ಲರಿಗೂ ಅನ್ವಯಿಸದಿದ್ದರೂ, ಒಬ್ಬ ವ್ಯಕ್ತಿಯ ಒಳಗಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಒಂದು ಸುಳಿವು ನೀಡುತ್ತದೆ.

25
1. ಮಸುಕಾದ ಬೂದು ಬಣ್ಣ (Pale Gray)

ಬೂದು ಬಣ್ಣವು ಹೆಚ್ಚಾಗಿ ತಮ್ಮ ಭಾವನೆಗಳನ್ನು ಹತ್ತಿಕ್ಕುವ ಮತ್ತು ಇತರರ ಗಮನ ಸೆಳೆಯಲು ಇಷ್ಟಪಡದ ಮನಸ್ಥಿತಿಯನ್ನು ತೋರಿಸುತ್ತದೆ. ಟೀಕೆ ಎದುರಿಸಲು ಅಥವಾ ಇತರರು ತಮ್ಮ ಬಗ್ಗೆ ತೀರ್ಪು ನೀಡುತ್ತಾರೆ ಎಂಬ ಭಯ ಇರುವವರು ಸದಾ ಬ್ಯಾಕಲ್ಲಿ ಇರಲು ಬಯಸುತ್ತಾರೆ. ಇಂತಹವರು ಹೆಚ್ಚಾಗಿ ಈ ಬಣ್ಣವನ್ನು ಆರಿಸಿಕೊಳ್ಳುತ್ತಾರೆ. ತಿಳಿ ಬೂದು ಬಣ್ಣವು ಅವರಿಗೆ ಒಂದು ರೀತಿಯ ಸುರಕ್ಷತೆಯ ಭಾವನೆ ನೀಡುತ್ತದೆ. ಆದರೆ, ಇದು ಅವರ ವ್ಯಕ್ತಿತ್ವ ಮತ್ತು ಕ್ರಿಯಾಶೀಲತೆಯನ್ನು ಹೊರಹಾಕಲು ಅಡ್ಡಿಯಾಗಬಹುದು.

35
2. ಮಂದ ಕಂದು ಬಣ್ಣ (Muted Brown)

ಕಪ್ಪು ಅಥವಾ ಕಡು ಬಣ್ಣಗಳಲ್ಲದ ಮಂದವಾದ ಕಂದು ಬಣ್ಣಗಳು, ವ್ಯಕ್ತಿಯಲ್ಲಿರುವ ಜಾಗರೂಕತೆ ಮತ್ತು ಭಾವನಾತ್ಮಕ ಸ್ಥಿರತೆಯ ಅಗತ್ಯವನ್ನು ತೋರಿಸುತ್ತವೆ. ಮನೋವಿಜ್ಞಾನದ ಪ್ರಕಾರ, ತಮ್ಮನ್ನು ತಾವು ಕೀಳಾಗಿ ಕಾಣುವ ಅಥವಾ ಹೆಚ್ಚು ಸ್ವಯಂ-ಟೀಕೆ ಮಾಡಿಕೊಳ್ಳುವವರು ಈ ಬಣ್ಣವನ್ನು ಇಷ್ಟಪಡುತ್ತಾರೆ. ಕಂದು ಬಣ್ಣವು ಭೂಮಿಯ ಸಂಕೇತವಾಗಿರುವುದರಿಂದ, ಇದನ್ನು ಪದೇ ಪದೇ ಆರಿಸುವವರು ತಮ್ಮ ಜೀವನದಲ್ಲಿ ಒಂದು ಭದ್ರತೆ ಅಥವಾ ನೆಲೆಯನ್ನು ಹುಡುಕುತ್ತಿರುತ್ತಾರೆ ಎಂದು ಅರ್ಥ.

45
3. ಪೂರ್ತಿ ಕಪ್ಪು ಬಣ್ಣ (All Black)

ಕಪ್ಪು ಬಣ್ಣವು ಶಕ್ತಿ ಮತ್ತು ಗಾಂಭೀರ್ಯದ ಸಂಕೇತ ಹೌದು. ಆದರೆ, ಯಾರಾದರೂ ಸದಾ ಕಪ್ಪು ಬಟ್ಟೆಗಳನ್ನೇ ಧರಿಸುತ್ತಿದ್ದರೆ, ಅದು ಅವರ ಸುತ್ತ ಒಂದು "ಭಾವನಾತ್ಮಕ ಗೋಡೆ"ಯನ್ನು ಕಟ್ಟಿಕೊಂಡಿದ್ದಾರೆ ಎಂದರ್ಥ. ಕಡಿಮೆ ಆತ್ಮವಿಶ್ವಾಸವಿರುವಾಗ, ತಮ್ಮ ದೌರ್ಬಲ್ಯಗಳನ್ನು ಮರೆಮಾಡಲು ಮತ್ತು ಇತರರಿಂದ ದೂರವಿರಲು ಕಪ್ಪು ಬಣ್ಣವನ್ನು ಒಂದು ಕವಚದಂತೆ ಬಳಸುತ್ತಾರೆ. ಯಾವಾಗಲೂ ಕಪ್ಪು ಬಟ್ಟೆ ಧರಿಸುವುದು ತಮ್ಮ ಭಾವನೆಗಳನ್ನು ಹೊರಹಾಕದಿರಲು ಮತ್ತು ಹೊರಜಗತ್ತಿಗೆ ತಮ್ಮ ಬಗ್ಗೆ ಹೆಚ್ಚು ತಿಳಿಯದಂತೆ ತಡೆಯಲು ಮಾಡುವ ಒಂದು ತಂತ್ರವಾಗಿರಬಹುದು.

55
ಪ್ರಮುಖ ಅಂಶ

ಬಣ್ಣಗಳು ಒಬ್ಬ ವ್ಯಕ್ತಿಯ ಸಂಪೂರ್ಣ ಗುಣವನ್ನು ನಿರ್ಧರಿಸುವುದಿಲ್ಲ. ಆದರೆ, ನಾವು ಪದೇ ಪದೇ ಮಾಡುವ ಬಣ್ಣದ ಆಯ್ಕೆಗಳು ನಮ್ಮ ಆ ಕ್ಷಣದ ಮನಸ್ಥಿತಿ ಮತ್ತು ಅಭ್ಯಾಸಗಳನ್ನು ತೋರ್ಪಡಿಸುತ್ತವೆ. ಈ ಬದಲಾವಣೆಗಳನ್ನು ಗಮನಿಸುವುದು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಮೊದಲ ಹೆಜ್ಜೆಯಾಗಿದೆ.

ಗಮನಿಸಿ: ಈ ಅಧ್ಯಯನವು 'ಸಪಿಯೆನ್ಜಾ ಇಂಟರ್ನ್ಯಾಷನಲ್ ಜರ್ನಲ್ ಆಫ್ ಇಂಟರ್ ಡಿಸಿಪ್ಲಿನರಿ ಸ್ಟಡೀಸ್'ನಲ್ಲಿ ಪ್ರಕಟವಾಗಿದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories