ಹಾಲು ಉಕ್ಕದಂತೆ ತಡೆಯಲು ಒಂದು ಮರದ ಚಮಚವನ್ನು ಹಾಲಿನ ಪಾತ್ರೆಯ ಮೇಲೆ ಇರಿಸಬೇಕು. ಈ ವೇಳೆ ಬಿಸಿಯಾದ ಹಾಲು ಚಮಚಕ್ಕೆ ತಾಗೋದರಿಂದ ಉಕ್ಕು ಕಡಿಮೆಯಾಗುತ್ತದೆ.
25
ಈರುಳ್ಳಿ ಹೆಚ್ಚುವ ಮುನ್ನ 15 ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿಡಿ ಅಥವಾ ನೀರಿನಲ್ಲಿ ನೆನೆಸಿ. ಕಣ್ಣೀರು ಬರುವುದಿಲ್ಲ. ಈ ರೀತಿ ಮಾಡೋದರಿಂದ ಸುಲಭವಾಗಿ ಈರುಳ್ಳಿಯನ್ನು ಕತ್ತರಿಸಬಹುದು.
35
ಅನ್ನ ಅಥವಾ ಬೇಳೆ ಬೇಯಿಸುವಾಗ 4 ರಿಂದ 5 ಹನಿ ನಿಂಬೆರಸ ಹಾಕಬೇಲು. ಇದರಿಂದ ಅನ್ನದ ಕಾಳು, ಬೇಳೆ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ನಿಂಬೆ ರಸ ಸೇರಿಸೋದರಿಂದ ಅಡುಗೆ ರುಚಿಯೂ ಹೆಚ್ಚುತ್ತದೆ.
45
ಕೆಲವೊಮ್ಮೆ ಉಪ್ಪಿನ ಡಬ್ಬದಲ್ಲಿ ಒಂದು ಹನಿ ನೀರು ಬಂದ್ರೂ ಇಡೀ ಡಬ್ಬ ಒದ್ದೆಯಾಗುತ್ತದೆ. ಹಾಗಾಗಿ ಉಪ್ಪಿನ ಡಬ್ಬದಲ್ಲಿ ಸ್ವಲ್ಪ ಅಕ್ಕಿ ಹಾಕಿಡಬೇಕು. ಉಪ್ಪು ಒದ್ದೆಯಾಗುವುದಿಲ್ಲ. ಅಕ್ಕಿ ಉಪ್ಪಿನಲ್ಲಿರುವ ನೀರಿನಂಶವನ್ನು ಹೀರಿಕೊಳ್ಳುತ್ತದೆ.
55
ವಿನೆಗರ್ ಮತ್ತು ಅಡಿಗೆ ಸೋಡಾ ಮಿಶ್ರಣವನ್ನು ಗ್ಯಾಸ್ ಸ್ಟವ್ ಮೇಲೆ ಹಚ್ಚಿ 10 ನಿಮಿಷ ಬಿಟ್ಟು ಉಜ್ಜಬೇಕು. ಇದರಿಂದ ನಿಮ್ಮ ಗ್ಯಾಸ್ ಸ್ಟವ್ ಫಳಫಳ ಎಂದು ಹೊಳೆಯುತ್ತದೆ.