ಕಾಟನ್, ಸಿಲ್ಕ್ ಸೀರೆ ಹಾಳಾಗದಂತೆ ಐರನ್ ಮಾಡೋದು ಹೇಗೆ?

First Published | Oct 14, 2024, 3:34 PM IST

ಸಿಲ್ಕ್ ಸೀರೆಗಳು ಮಾತ್ರವಲ್ಲ, ಕಾಟನ್ ಸೀರೆಗಳಿಗೆ ಇಸ್ತ್ರಿ ಹಾಕೋದು ಬಹಳ ಅಗತ್ಯ. ಮನೆಯಲ್ಲಿ ಈ ಬಟ್ಟೆಗಳನ್ನು ಇಸ್ತ್ರಿ ಮಾಡೋದಕ್ಕೆ ಹಲವರು ಹೆದರ್ತಾರೆ. ಕಾರಣ ಎಲ್ಲಿ ಸುಟ್ಟುಹೋಗುತ್ತೆ ಅನ್ನೋ ಭಯ. ಆದರೆ ಕೆಲ ಟ್ರಿಕ್ಸ್‌ ಬಳಸಿ ನಾವು ಮನೆಯಲ್ಲೇ ಸುರಕ್ಷಿತವಾಗಿ ಬಟ್ಟೆಗಳಿಗೆ ಐರನ್ ಮಾಡ್ಬಹುದು. ಅದೇಗೆ? 

ಇವಾಗ ಹಬ್ಬದ ಸೀಸನ್. ಹಬ್ಬಗಳಲ್ಲಿ ಹೊಸ ಬಟ್ಟೆ ಹಾಕಿಕೊಳ್ಳಲು ಎಲ್ಲರಿಗೂ ಇಷ್ಟ. ಹೆಚ್ಚಾಗಿ ಹೆಂಗಸರು ಹಬ್ಬಗಳಲ್ಲಿ ಸಿಲ್ಕ್ ಸೀರೆ ಉಡಲು ಬಯಸ್ತಾರೆ.ಇಸ್ತ್ರಿ ಹಾಕದೇ ಈ ಸೀರೆಗಳ ಉಡೋದು ಕಷ್ಟ ಹಾಗೆಯೇ ಕಾಟನ್ ಸೀರೆಗಳಿಗೂ  ಇಸ್ತ್ರಿ ಅಗತ್ಯ. ಮನೆಯಲ್ಲಿ ಇಸ್ತ್ರಿ ಮಾಡೋಕೆ ಹಲವರು ಹೆದರುತ್ತಾರೆ. ನಮಗೆ ಸರಿಯಾಗಿ ಬರಲ್ಲ, ಹೊರಗೆ ಇಸ್ತ್ರಿಗೆ ಕೊಡೋಣ ಅಂತ ಅಂದುಕೊಳ್ಳುತ್ತಾರೆ. ಆದ್ರೆ ಮನೆಯಲ್ಲೇ ಸುಲಭವಾಗಿ ಇಸ್ತ್ರಿ ಮಾಡೋದು ಹೇಗೆ ಈಗ ನೋಡೋಣ.

ಕಾಟನ್ ಬಟ್ಟೆಗಳನ್ನು ಇಸ್ತ್ರಿ ಮಾಡೋದು ಹೇಗೆ?

ಹಬ್ಬಗಳಲ್ಲಿ ಹೆಚ್ಚಾಗಿ ಹುಡುಗಿಯರು ಕಾಟನ್ ಡ್ರೆಸ್, ಕುರ್ತಾಗಳನ್ನು ಹಾಕಿಕೊಳ್ಳಲು ಇಷ್ಟಪಡುತ್ತಾರೆ. ನೀವು ದೀಪಾವಳಿಗೆ ಕಾಟನ್ ಡ್ರೆಸ್ ಹಾಕಿಕೊಳ್ಳೋದಾದ್ರೆ, ಇಸ್ತ್ರಿ ಮಾಡುವ ಮುನ್ನ ನೀರು ಚಿಮುಕಿಸಿ. ಹೀಗೆ ಮಾಡಿದ್ರೆ ಬಟ್ಟೆ ಮೃದುವಾಗುತ್ತೆ. ಇಸ್ತ್ರಿ ಮಾಡೋದು ಸುಲಭ ಆಗುತ್ತೆ. ಕಾಟನ್ ಬಟ್ಟೆಗಳಿಗೆ ಜಾಸ್ತಿ ಹೀಟ್ ಇಡಬಾರದು. ಹೀಟ್ ಜಾಸ್ತಿ ಆದ್ರೆ ಬಟ್ಟೆ ಸುಟ್ಟು ಹೋಗುತ್ತೆ. ಇಲ್ಲಾಂದ್ರೆ ಡ್ರೆಸ್ ಹಾಳಾಗುತ್ತೆ. ಬಟ್ಟೆಯನ್ನು ತಿರುವಿ ಹಾಕಿ ಇಸ್ತ್ರಿ ಮಾಡೋದು ಒಳ್ಳೆಯದು.

Latest Videos


ಸಿಲ್ಕ್ ಸೀರೆಗಳನ್ನುಇಸ್ತ್ರಿ ಮಾಡೋದು ಹೇಗೆ?

ಸಿಲ್ಕ್ ಸೀರೆಗಳನ್ನು ಇಸ್ತ್ರಿ ಮಾಡುವಾಗ ತುಂಬಾ ಜಾಗ್ರತೆ ಇರಬೇಕು. ಜಾಗ್ರತೆ ವಹಿಸದಿದ್ದರೆ ದುಬಾರಿ ಸೀರೆ ಹಾಳಾಗುವ ಸಾಧ್ಯತೆ ಇದೆ. ಸೀರೆಗೆ ನೇರವಾಗಿ ಇಸ್ತ್ರಿ ಪೆಟ್ಟಿಗೆ ತಾಗಿಸಬೇಡಿ. ತೆಳುವಾದ ಬಟ್ಟೆ ಅಥವಾ ಟಿಶ್ಯೂ ಪೇಪರ್ ಮೇಲಿಟ್ಟು ಇಸ್ತ್ರಿ ಮಾಡಿ. ಸಿಲ್ಕ್ ಸೀರೆಗೆ ಕಡಿಮೆ ಹೀಟ್ ಇಡಿ. ಸ್ಟೀಮ್ ಸಹಾಯದಿಂದಲೂ ಇಸ್ತ್ರಿ ಮಾಡಬಹುದು. ಹೀಗೆ ಮಾಡಿದ್ರೆ ಸಿಲ್ಕ್ ಮೃದುವಾಗಿ ಹೊಳೆಯುತ್ತೆ.

ಯಾವುದೇ ಬಟ್ಟೆ ಇಸ್ತ್ರಿ ಮಾಡುವ ಮುನ್ನ ಅದರ ಮೇಲಿರುವ ಲೇಬಲ್ ಓದಿ. ಅಲ್ಲಿ ಬಟ್ಟೆ ತೊಳೆಯುವ, ಇಸ್ತ್ರಿ ಮಾಡುವ ವಿಧಾನಗಳ ಬಗ್ಗೆ ಮಾಹಿತಿ ಇರುತ್ತೆ. ಇಸ್ತ್ರಿ ಮಾಡುವ ಮುನ್ನ ಬಟ್ಟೆ ಸ್ವಚ್ಛವಾಗಿರಬೇಕು. ಇಸ್ತ್ರಿ ಪೆಟ್ಟಿಗೆಯೂ ಸ್ವಚ್ಛವಾಗಿರಬೇಕು. ಮೊದಲ ಬಾರಿಗೆ ಸೀರೆ ಇಸ್ತ್ರಿ ಮಾಡುವವರಾದರೆ ಮೊದಲು ಸ್ವಲ್ಪ ಭಾಗ ಇಸ್ತ್ರಿ ಮಾಡಿ ನೋಡಿ. ಸೀರೆಗೆ ಏನೂ ಆಗಲ್ಲ ಅಂತಾದ್ಮೇಲೆ ಇಡೀ ಸೀರೆಗೆ ಇಸ್ತ್ರಿ ಮಾಡಿ.

click me!