How to get rid of lizards: ಮನೆಯಲ್ಲಿ ಹಲ್ಲಿಗಳ ಕಾಟ ತಡೆಯೋಕೆ ಆಗ್ತಿಲ್ವಾ? ಹಾಗಿದ್ರೆ ಯಾವುದೇ ದುಬಾರಿ ಕೆಮಿಕಲ್ ಸ್ಪ್ರೇ ಬಳಸದೆ, ನಮ್ಮ ಅಡುಗೆ ಮನೆಯಲ್ಲೇ ಸಿಗುವ ಕೆಲವೇ ವಸ್ತುಗಳಿಂದ ಹಲ್ಲಿಗಳನ್ನು ಸುಲಭವಾಗಿ ಹೇಗೆ ಓಡಿಸಬಹುದು ಅಂತ ಈ ಲೇಖನದಲ್ಲಿ ತಿಳಿಯೋಣ...
ಸುಲಭ ನೈಸರ್ಗಿಕ ವಿಧಾನ ಮನೆಯ ಮೂಲೆ ಮೂಲೆಗಳಲ್ಲಿ, ಗೋಡೆಗಳ ಮೇಲೆ ಹರಿದಾಡುವ ಹಲ್ಲಿಗಳನ್ನು ಕಂಡರೆ ಸಾಕು, ಹಲವರಿಗೆ ಅಸಹ್ಯ ಅಥವಾ ಭಯವಾಗುತ್ತದೆ. ಆಹಾರ ಪದಾರ್ಥಗಳ ಮೇಲೆ ಬಿದ್ದು ವಿಷವಾಗುವ ಅಪಾಯವೂ ಇರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಹಾಗೂ ಅಪಾಯಕಾರಿ ಕೆಮಿಕಲ್‌ಗಳ ಬದಲು, ನಮ್ಮ ಅಡುಗೆ ಮನೆಯಲ್ಲೇ ಸಿಗುವ ಕೆಲವೇ ವಸ್ತುಗಳನ್ನು ಬಳಸಿ ಹಲ್ಲಿಗಳನ್ನು ಸುಲಭವಾಗಿ ಮನೆಯಿಂದ ಓಡಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಕೆಲವು ಸುಲಭ ನೈಸರ್ಗಿಕ ವಿಧಾನಗಳು.
24
ಸ್ಪ್ರೇ ಮಾಡದೆ ಹಲ್ಲಿ ಓಡಿಸುವ ಪರ್ಯಾಯ ಮಾರ್ಗಗಳು
ಸ್ಪ್ರೇ ಮಾಡದೆ ಹಲ್ಲಿ ಓಡಿಸುವ ಪರ್ಯಾಯ ಮಾರ್ಗಗಳು ಒಂದು ವೇಳೆ ಸ್ಪ್ರೇ ಮಾಡಲು ಸಮಯವಿಲ್ಲದಿದ್ದರೆ ಈ ಕೆಳಗಿನ ವಸ್ತುಗಳನ್ನು ಬಳಸಬಹುದು
ಈರುಳ್ಳಿ ಚೂರುಗಳು: ಹಲ್ಲಿಗಳು ಬರುವ ಜಾಗದಲ್ಲಿ ಈರುಳ್ಳಿಯ ತುಂಡುಗಳನ್ನು ಇಡಿ.
ನವಿಲುಗರಿ (Peacock Feathers): ಗೋಡೆಗಳ ಮೇಲೆ ಅಥವಾ ಹಲ್ಲಿ ಬರುವ ಜಾಗದಲ್ಲಿ ನವಿಲುಗರಿಗಳನ್ನು ಸಿಕ್ಕಿಸಿ ಇಡಬಹುದು.
ನ್ಯಾಫ್ತಾಲಿನ್ ಬಾಲ್ (Naphthalene Balls): ವಾರ್ಡ್‌ರೋಬ್, ಕಪಾಟು ಮತ್ತು ಸಿಂಕ್ ಬಳಿ ಇವುಗಳನ್ನು ಇಡುವುದರಿಂದ ಹಲ್ಲಿಗಳು ಹತ್ತಿರ ಸುಳಿಯುವುದಿಲ್ಲ.
34
ಪ್ರಮುಖವಾಗಿ ಗಮನಿಸಬೇಕಾದ ಅಂಶಗಳು
ಪ್ರಮುಖವಾಗಿ ಗಮನಿಸಬೇಕಾದ ಅಂಶಗಳು ಈರುಳ್ಳಿ ಚೂರುಗಳು ಮತ್ತು ಮೊಟ್ಟೆಯ ಸಿಪ್ಪೆಗಳನ್ನು ಬಳಸುತ್ತಿದ್ದರೆ, ಅವುಗಳನ್ನು ಪ್ರತಿ 3 ರಿಂದ 4 ದಿನಗಳಿಗೊಮ್ಮೆ ಬದಲಾಯಿಸಬೇಕು. ಇಲ್ಲದಿದ್ದರೆ ಅವು ಕೊಳೆತು ವಾಸನೆ ಬರಬಹುದು ಹಾಗೂ ಪರಿಣಾಮ ಕಡಿಮೆಯಾಗುತ್ತದೆ.
ನವಿಲುಗರಿಗಳನ್ನು ಬಳಸುವುದಾದರೆ ಪ್ರತಿ 3 ರಿಂದ 4 ತಿಂಗಳಿಗೊಮ್ಮೆ ಹೊಸದನ್ನು ಬದಲಾಯಿಸುವುದು ಉತ್ತಮ.
ಯಾವುದೇ ರಾಸಾಯನಿಕಗಳ ಭಯವಿಲ್ಲದೆ, ಈ ಸರಳ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಹಲ್ಲಿಗಳನ್ನು ಶಾಶ್ವತವಾಗಿ ಮನೆಯಿಂದ ದೂರವಿಡಬಹುದು.
ನೈಸರ್ಗಿಕ ಸ್ಪ್ರೇ ವಿಧಾನ (Natural Spray) ಒಂದು ವೇಳೆ ಸ್ಪ್ರೇ ಬಳಸುವುದಾದರೆ ಹಲ್ಲಿಗಳಿಗೆ ಕೆಲವು ತೀಕ್ಷ್ಣವಾದ ವಾಸನೆ ಇಷ್ಟವಾಗುವುದಿಲ್ಲ. ಹೀಗಾಗಿ ಸುಲಭವಾಗಿ ಮನೆಯಲ್ಲೇ ಸ್ಪ್ರೇ ತಯಾರಿಸಬಹುದು..
ಬೇಕಾಗುವ ವಸ್ತುಗಳು: ಕಪ್ಪು ಮೆಣಸು (Black Pepper), ಈರುಳ್ಳಿ ಅಥವಾ ಬೆಳ್ಳುಳ್ಳಿ.
ಮಾಡುವ ವಿಧಾನ: ಇವುಗಳಲ್ಲಿ ಯಾವುದಾದರೂ ಒಂದನ್ನು ಚೆನ್ನಾಗಿ ಜಜ್ಜಿ ಅಥವಾ ರಸ ತೆಗೆದು ನೀರಿನಲ್ಲಿ ಬೆರೆಸಿ ಸ್ಪ್ರೇ ಬಾಟಲಿಗೆ ತುಂಬಿಕೊಳ್ಳಿ.
ಬಳಕೆ: ಹಲ್ಲಿಗಳು ಹೆಚ್ಚಾಗಿ ಓಡಾಡುವ ಗೋಡೆ, ಕಿಟಕಿ ಹಾಗೂ ಬಾಗಿಲುಗಳ ಮೂಲೆಗಳಿಗೆ ಈ ನೀರನ್ನು ಸ್ಪ್ರೇ ಮಾಡಿ. ಮೆಣಸು, ಬೆಳ್ಳುಳ್ಳಿ ಮತ್ತು ಈರುಳ್ಳಿಯ ಘಾಟು ವಾಸನೆಗೆ ಹಲ್ಲಿಗಳು ಆ ಜಾಗಕ್ಕೆ ಬರುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.