ಸಣ್ಣ ತುಳಸಿ ಗಿಡವೂ ಹೆಮ್ಮರದಂತೆ ದಟ್ಟವಾಗಿ ಬೆಳೆಯಬೇಕಾ? ಗಾರ್ಡನರ್ ಹೇಳುವ ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡ್ರಿ

Published : Oct 09, 2026, 09:23 PM IST

How to grow tulsi plant bushy: ತುಳಸಿ ಗಿಡ ಕಾಡಿನಂತೆ ದಟ್ಟವಾಗಿ, ದೊಡ್ಡ ದೊಡ್ಡ ಎಲೆಗಳೊಂದಿಗೆ ಬೆಳೆಯಬೇಕಾ? ಯಾವುದೇ ಕೆಮಿಕಲ್ ಗೊಬ್ಬರವಿಲ್ಲದೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಗಿಡವನ್ನು ಸೊಂಪಾಗಿಡುವ ಸೀಕ್ರೆಟ್ ಹ್ಯಾಕ್ಸ್ ನಿಮಗಾಗಿ ಇಲ್ಲಿದೆ..

PREV
17
ಗಾರ್ಡನಿಂಗ್ ತಜ್ಞರು ಹೇಳುವ ಆ ಟ್ರಿಕ್

ಗಾರ್ಡನಿಂಗ್ ತಜ್ಞರು ಹೇಳುವ ಆ ಟ್ರಿಕ್
ಮನೆಯಂಗಳದಲ್ಲಿ ತುಳಸಿ ಗಿಡ ನೆಟ್ಟರೂ ಅದು ಎತ್ತರಕ್ಕೆ ಬೆಳೆಯದೆ, ಎಲೆಗಳು ಸಣ್ಣದಾಗಿ ಒಣಗಿ ಹೋಗುತ್ತಿದೆಯೇ? ಸಣ್ಣ ಗಿಡವನ್ನು ಕಾಡಿನಂತೆ ಬುಷಿಯಾಗಿ (ದಟ್ಟವಾಗಿ) ಹಾಗೂ ದೊಡ್ಡ ದೊಡ್ಡ ಎಲೆಗಳೊಂದಿಗೆ ಹಚ್ಚಹಸಿರಾಗಿ ಬೆಳೆಸುವುದು ಹೇಗೆ? ಗಾರ್ಡನಿಂಗ್ ತಜ್ಞರು ಹೇಳುವ ಆ ಸರಳ ಪಿಂಚಿಂಗ್ ಟ್ರಿಕ್ ಮತ್ತು ನೈಸರ್ಗಿಕ ಗೊಬ್ಬರದ ಮಾಹಿತಿ ಇಲ್ಲಿದೆ ನೋಡಿ.

27
ತುಳಸಿ ಗಿಡ ದಟ್ಟವಾಗಿ ಬೆಳೆಯಲು ತಜ್ಞರ 6 ಮುಖ್ಯ ಟಿಪ್ಸ್

ತುಳಸಿ ಗಿಡ ದಟ್ಟವಾಗಿ ಬೆಳೆಯಲು ತಜ್ಞರ 6 ಮುಖ್ಯ ಟಿಪ್ಸ್
1. ‘ಪಿಂಚಿಂಗ್’ ಮ್ಯಾಜಿಕ್ ಟ್ರಿಕ್ (Pinching)
ಗಿಡ ಕೇವಲ ಒಂದೇ ಕಡ್ಡಿಯಂತೆ ಮೇಲಕ್ಕೆ ಬೆಳೆಯಲು ಬಿಡಬೇಡಿ. ಗಿಡದ ಮೇಲ್ಭಾಗದ ತುದಿಯಲ್ಲಿರುವ ಸಣ್ಣ ಚಿಗುರು ಎಲೆಗಳನ್ನು ಉಗುರಿನಿಂದ ಅಥವಾ ಕತ್ತರಿಯಿಂದ ಕತ್ತರಿಸಿ (ಪಿಂಚ್ ಮಾಡಿ). ಹೀಗೆ ಒಂದು ತುದಿಯನ್ನು ಕತ್ತರಿಸಿದರೆ, ಅದರ ಪಕ್ಕದಿಂದ 2 ಹೊಸ ಕೊಂಬೆಗಳು ಬರುತ್ತವೆ. ಆ ಹೊಸ ಕೊಂಬೆಗಳನ್ನು ಮತ್ತೆ ಪಿಂಚ್ ಮಾಡಿದರೆ 4, ನಂತರ 8 ಕೊಂಬೆಗಳು ಬಂದು ಗಿಡವು ಕೆಲವೇ ದಿನಗಳಲ್ಲಿ ದುಂಡಗೆ, ದಟ್ಟವಾಗಿ (Bushy) ಬೆಳೆಯುತ್ತದೆ.

37
2. ಮಣ್ಣಿಗೆ ತಾಗುವ ಎಲೆಗಳನ್ನು ತೆಗೆದುಹಾಕಿ

2. ಮಣ್ಣಿಗೆ ತಾಗುವ ಎಲೆಗಳನ್ನು ತೆಗೆದುಹಾಕಿ
ಕುಂಡದ ಮಣ್ಣಿಗೆ ತಾಗುವ ಕೆಳಭಾಗದ ಎಲೆಗಳನ್ನು ತಕ್ಷಣ ಕಿತ್ತುಹಾಕಿ. ಮಣ್ಣಿನ ತೇವಾಂಶ ಎಲೆಗಳಿಗೆ ತಾಗಿದರೆ ಗಿಡಕ್ಕೆ ಶಿಲೀಂಧ್ರ (ಫಂಗಸ್) ರೋಗ ಬಂದು ಬೇರುಗಳು ಕೊಳೆಯುತ್ತವೆ. (ತೆಗೆದ ಉತ್ತಮ ಎಲೆಗಳನ್ನು ಬಿಸಾಕದೆ ಟೀ ಅಥವಾ ಕಷಾಯಕ್ಕೆ ಬಳಸಬಹುದು).

47
3. ಹೂವು/ಕದುರು (ಮಂಜರಿ) ಕತ್ತರಿಸಿ

3. ಹೂವು/ಕದುರು (ಮಂಜರಿ) ಕತ್ತರಿಸಿ
ತುಳಸಿ ಗಿಡದಲ್ಲಿ ಹೂವು ಅಥವಾ ಬೀಜದ ಕದುರು (ಮಂಜರಿ) ಬಂದ ತಕ್ಷಣ ಅದನ್ನು ಕತ್ತರಿಸಿ ತೆಗೆಯಬೇಕು. ಹೂವು ಹಾಗೆಯೇ ಉಳಿದರೆ ಗಿಡವು ತನ್ನ ಆಯಸ್ಸು ಮುಗಿಯಿತು ಎಂದು ಭಾವಿಸಿ ಒಣಗಲು ಶುರುವಾಗುತ್ತದೆ. ಹೂವುಗಳನ್ನು ಕತ್ತರಿಸುತ್ತಿದ್ದರೆ ಗಿಡ ಸದಾ ಹಸಿರಾಗಿರುತ್ತದೆ.

57
4. ಮಣ್ಣನ್ನು ಆಗಾಗ ಸಡಿಲಗೊಳಿಸಿ (Aeration)

4. ಮಣ್ಣನ್ನು ಆಗಾಗ ಸಡಿಲಗೊಳಿಸಿ (Aeration)
ಮಳೆ ಬಂದಾಗ ಅಥವಾ ಪದೇಪದೇ ನೀರು ಹಾಕಿದಾಗ ಕುಂಡದ ಮಣ್ಣು ಗಟ್ಟಿಯಾಗುತ್ತದೆ. ಮಣ್ಣು ಬಿಗಿಯಾದರೆ ಬೇರುಗಳಿಗೆ ಆಕ್ಸಿಜನ್ ಸಿಗುವುದಿಲ್ಲ. ತಿಂಗಳಿಗೊಮ್ಮೆ ಚಮಚ ಅಥವಾ ಸ್ಕ್ರೂಡ್ರೈವರ್‌ನಿಂದ ಮಣ್ಣನ್ನು ಮೇಲಿಂದ ಕೆಳಕ್ಕೆ ಲಘುವಾಗಿ ಕೆದಕಿ (ಸಡಿಲಗೊಳಿಸಿ). ಇದರಿಂದ ನೀರು ಮತ್ತು ಆಕ್ಸಿಜನ್ ಬೇರುಗಳಿಗೆ ಸರಾಗವಾಗಿ ತಲುಪುತ್ತದೆ.

67
5. ರಾಸಾಯನಿಕ ಬೇಡ, ಟೀ/ಕಾಫಿ ಪುಡಿ ಗೊಬ್ಬರ ಬೆಸ್ಟ್

5. ರಾಸಾಯನಿಕ ಬೇಡ, ಟೀ/ಕಾಫಿ ಪುಡಿ ಗೊಬ್ಬರ ಬೆಸ್ಟ್
ತುಳಸಿ ಗಿಡಕ್ಕೆ ಎಂದಿಗೂ ಯಾವುದೇ ರಾಸಾಯನಿಕ (Chemical) ಗೊಬ್ಬರ ಹಾಕಬೇಡಿ, ತುಳಸಿ ತುಂಬಾ ನಾಜೂಕಾಗಿದ್ದು ತಕ್ಷಣ ಒಣಗಿಹೋಗುತ್ತದೆ. ನೈಸರ್ಗಿಕವಾಗಿ ಬೆಳೆಯಲು, ಒಮ್ಮೆ ಬಳಸಿದ ಟೀ ಪುಡಿ ಅಥವಾ ಕಾಫಿ ಪುಡಿಯನ್ನು (ಹಾಲು ಮತ್ತು ಸಕ್ಕರೆ ಅಂಶ ಹೋಗುವಂತೆ ನೀರಿನಲ್ಲಿ ತೊಳೆದು ಒಣಗಿಸಿ) ತಿಂಗಳಿಗೊಮ್ಮೆ ಮಣ್ಣಿಗೆ ಹಾಕಿದರೆ ಗಿಡಕ್ಕೆ ಉತ್ತಮ ಸಾರಜನಕ ಸಿಕ್ಕು ಎಲೆಗಳು ದೊಡ್ಡದಾಗಿ ಬೆಳೆಯುತ್ತವೆ.

77
6. ನೇರ ಸೂರ್ಯನ ಬೆಳಕು ಅತಿ ಮುಖ್ಯ

6. ನೇರ ಸೂರ್ಯನ ಬೆಳಕು ಅತಿ ಮುಖ್ಯ
ತುಳಸಿ ಗಿಡವನ್ನು ನೆರಳಿನಲ್ಲಿ ಅಥವಾ ಇತರ ದೊಡ್ಡ ಗಿಡಗಳ ಕೆಳಗೆ ಇಡಬೇಡಿ. ದಿನಕ್ಕೆ ಕನಿಷ್ಠ 4 ರಿಂದ 5 ಗಂಟೆಗಳ ಕಾಲ ನೇರ ಬಿಸಿಲು ಬೀಳುವ ಜಾಗದಲ್ಲಿ ಇಟ್ಟರೆ ಮಾತ್ರ ಗಿಡ ರೋಗಮುಕ್ತವಾಗಿ, ಹಸಿರಾಗಿ ಬೆಳೆಯುತ್ತದೆ.

ಕುಂಡದಲ್ಲಿ ಎರೆಹುಳು ಕಂಡರೆ ಹೆದರಬೇಡಿ
ಮಣ್ಣಿನಲ್ಲಿ ಎರೆಹುಳುಗಳು (Earthworms) ಕಂಡರೆ ಅವು ಗಿಡದ ಬೇರನ್ನು ತಿನ್ನುವುದಿಲ್ಲ. ಬದಲಾಗಿ ಒಣ ಎಲೆಗಳನ್ನು ತಿಂದು ಮಣ್ಣನ್ನು ಫಲವತ್ತಾಗಿಸುತ್ತವೆ. ಎರೆಹುಳು ಇರುವುದು ನಿಮ್ಮ ಮಣ್ಣು ಆರೋಗ್ಯಕರವಾಗಿದೆ ಎಂಬುದರ ಸಂಕೇತ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories