ಮಲ್ಲಿಗೆ ಹೂವು 12 ದಿನವಾದ್ರೂ ಬಾಡಲ್ಲ, ಬಣ್ಣ ಬದಲಾಗಲ್ಲ.. ಫ್ರೆಶ್ ಆಗಿರಲು ನೀವು ಮಾಡಬೇಕಾದ್ದು ಇಷ್ಟೇ

Published : Apr 22, 2026, 04:06 PM IST

Keep jasmine flowers fresh: ಹಬ್ಬ ಹರಿದಿನಗಳಲ್ಲಿ ಹೂವುಗಳನ್ನು ಮುಂಚಿತವಾಗಿ ತಂದಿಟ್ಟಾಗ ಅವು ಬಾಡದಂತೆ ನೋಡಿಕೊಳ್ಳುವುದು ಒಂದು ದೊಡ್ಡ ಸವಾಲು. ಅಂತಹ ಸಮಯದಲ್ಲಿ ಮಲ್ಲಿಗೆಯನ್ನು ದೀರ್ಘಕಾಲ ತಾಜಾವಾಗಿರಿಸುವ ಈ ಸುಲಭ ಮನೆಮದ್ದುಗಳು ನಿಮಗೆ ಖಂಡಿತ ಸಹಾಯ ಮಾಡುತ್ತವೆ.

PREV
16
ದೀರ್ಘಕಾಲ ತಾಜಾವಾಗಿರಲು ಇಲ್ಲಿವೆ ಕೆಲವು ಸುಲಭ ಉಪಾಯಗಳು

ಮಲ್ಲಿಗೆ ಹೂವಿನ ಘಮ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಮಲ್ಲಿಗೆ ಹೂವುಗಳು ತುಂಬಾ ಸೂಕ್ಷ್ಮವಾಗಿದ್ದು, ಗಿಡದಿಂದ ಕಿತ್ತ ಅಥವಾ ಮಾರುಕಟ್ಟೆಯಿಂದ ತಂದ ಕೆಲವೇ ಗಂಟೆಗಳಲ್ಲಿ ಬಾಡಿ ಹೋಗುತ್ತವೆ ಅಥವಾ ಬಣ್ಣ ಬದಲಾಗುತ್ತವೆ. ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಮಲ್ಲಿಗೆ ಹೂವುಗಳು ದೀರ್ಘಕಾಲ ತಾಜಾವಾಗಿರಲು ಇಲ್ಲಿವೆ ಕೆಲವು ಸುಲಭ ಉಪಾಯಗಳು. 

26
ನೀರಿನ ಪ್ರೋಕ್ಷಣೆ (Water Mist)

ಹೂವುಗಳನ್ನು ತಂದ ತಕ್ಷಣ ಅವುಗಳ ಮೇಲೆ ಸ್ವಲ್ಪ ತಣ್ಣೀರನ್ನು ಚಿಮುಕಿಸಿ. ನೆನಪಿರಲಿ, ನೀರು ಅತಿಯಾಗಬಾರದು, ಕೇವಲ ತೇವಾಂಶವಿದ್ದರೆ ಸಾಕು. ಇದು ಹೂವುಗಳು ಒಣಗದಂತೆ ತಡೆಯುತ್ತದೆ.

36
ಏರ್-ಟೈಟ್ ಡಬ್ಬಿಗಳ ಬಳಕೆ (Air-tight Containers)

ಹೂವುಗಳನ್ನು ಪ್ಲಾಸ್ಟಿಕ್ ಅಥವಾ ಗಾಜಿನ ಡಬ್ಬಿಯಲ್ಲಿ ಹಾಕಿ, ಗಾಳಿ ಆಡದಂತೆ ಮುಚ್ಚಳ ಮುಚ್ಚಿ ಫ್ರಿಜ್‌ನಲ್ಲಿ ಇರಿಸಿ. ಇದರಿಂದ ಹೊರಗಿನ ಗಾಳಿ ತಗಲದೆ ಹೂವುಗಳು ಬೇಗನೆ ಬಣ್ಣ ಬದಲಾಗುವುದಿಲ್ಲ ಮತ್ತು ಸುವಾಸನೆ ಹಾಗೆಯೇ ಇರುತ್ತದೆ.

46
ಜಿಪ್‌ಲಾಕ್ ಬ್ಯಾಗ್‌ಗಳು

ನಿಮ್ಮ ಬಳಿ ಡಬ್ಬಿಗಳಿಲ್ಲದಿದ್ದರೆ ಜಿಪ್‌ಲಾಕ್ ಬ್ಯಾಗ್‌ಗಳನ್ನು ಬಳಸಬಹುದು. ಹೂವುಗಳನ್ನು ಬ್ಯಾಗ್‌ನಲ್ಲಿ ಹಾಕಿದ ನಂತರ, ಸ್ವಲ್ಪ ಗಾಳಿ ಇರುವಂತೆ ನೋಡಿಕೊಂಡು ಸೀಲ್ ಮಾಡಿ. ಇದರಿಂದ ಹೂವಿನ ಎಸಳುಗಳು ನಲುಗಿ ಹೋಗುವುದಿಲ್ಲ.

56
ಬಿಸಿಲು ಮತ್ತು ಶಾಖದಿಂದ ದೂರವಿಡಿ

ಮಲ್ಲಿಗೆ ಹೂವುಗಳನ್ನು ನೇರ ಸೂರ್ಯನ ಬೆಳಕು ಅಥವಾ ಶಾಖ ಇರುವ ಜಾಗದಲ್ಲಿ ಇಡಬೇಡಿ. ಯಾವಾಗಲೂ ತಂಪಾದ ಮತ್ತು ನೆರಳಿರುವ ಜಾಗದಲ್ಲಿ ಇಟ್ಟರೆ ಅವು ಹೆಚ್ಚು ಕಾಲ ಅರಳಿದ ಸ್ಥಿತಿಯಲ್ಲಿ ಇರುತ್ತವೆ.

66
ಬಾಳೆ ಎಲೆ ಅಥವಾ ಒದ್ದೆ ಬಟ್ಟೆ

ಒಂದು ವೇಳೆ ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ದರೆ, ಒಂದು ಕಾಟನ್ ಬಟ್ಟೆಯನ್ನು ಒದ್ದೆ ಮಾಡಿ (ನೀರನ್ನು ಪೂರ್ತಿ ಹಿಂಡಿ) ಅದರಲ್ಲಿ ಹೂವುಗಳನ್ನು ಸುತ್ತಿಡಿ. ಅಥವಾ ಹಳೆಯ ಕಾಲದ ಪದ್ಧತಿಯಂತೆ ಬಾಳೆ ಎಲೆಯಲ್ಲಿ ಸುತ್ತಿಟ್ಟರೂ ಮಲ್ಲಿಗೆ ಹೂವುಗಳು ತಾಜಾವಾಗಿರುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories