How to clean mixer grinder: ಮಿಕ್ಸಿ ಮೇಲ್ಭಾಗದಲ್ಲಿ ಜಿಡ್ಡು, ಕಪ್ಪು ಕೊಳೆ ತುಂಬಿಕೊಂಡಿದ್ಯಾ? ಬೇಕಿಂಗ್ ಸೋಡಾ, ಬಿಸಿ ನೀರು ಹಾಕಿ ಉಜ್ಜೋ ಕಷ್ಟ ಇನ್ಮೇಲೆ ಬೇಡ! ಕೇವಲ ಒಂದು ವಸ್ತು ಬಳಸಿ ಮಿಕ್ಸಿಯನ್ನು ಹೊಸದರಂತೆ ಕ್ಲೀನ್ ಮಾಡುವ ಸೂಪರ್ ವೈರಲ್ ಹ್ಯಾಕ್ ಇಲ್ಲಿದೆ ನೋಡಿ..
ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಮಿಕ್ಸಿ ಬಳಕೆ ಅನಿವಾರ್ಯ. ಆದರೆ, ಬಹುತೇಕರು ಮಿಕ್ಸಿಯ ಮೇಲ್ಭಾಗವನ್ನು ಒರೆಸಿ ಸ್ವಚ್ಛಗೊಳಿಸುತ್ತಾರೆಯೇ ವಿನಃ, ಅದರ ಸಣ್ಣ ಸಣ್ಣ ಮೂಲೆಗಳನ್ನು ಕ್ಲೀನ್ ಮಾಡುವುದನ್ನೇ ಮರೆತುಬಿಡುತ್ತಾರೆ. ದಿನ ಕಳೆದಂತೆ ಅಲ್ಲಿ ಎಣ್ಣೆ ಜಿಡ್ಡು, ಧೂಳು ಮತ್ತು ಕಪ್ಪು ಕೊಳೆ ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ.
25
ಇಲ್ಲಿದೆ ಸಿಂಪಲ್ ಹ್ಯಾಕ್
ಇಲ್ಲಿದೆ ಸಿಂಪಲ್ ಹ್ಯಾಕ್ ಸಾಮಾನ್ಯವಾಗಿ ಇಂತಹ ಹಠಮಾರಿ ಕೊಳೆಯನ್ನು ತೆಗೆಯಲು ಹೆಣ್ಮಕ್ಕಳು ಬೇಕಿಂಗ್ ಸೋಡಾ, ವಿನೆಗರ್, ಬಿಸಿ ನೀರು ಅಥವಾ ಡಿಟರ್ಜೆಂಟ್ ಬಳಸಿ ಹೈರಾಣಾಗುತ್ತಾರೆ. ಆದರೂ ಮೂಲೆ ಮೂಲೆಯಲ್ಲಿರುವ ಕೊಳೆ ಕೈಗೆ ಸಿಗುವುದೇ ಇಲ್ಲ. ಆದರೆ, ಇನ್ನು ಮುಂದೆ ಈ ಯಾವುದೇ ತಾಪತ್ರಯವಿಲ್ಲದೆ ಮಿಕ್ಸಿಯನ್ನು ಕೇವಲ ಎರಡೇ ನಿಮಿಷದಲ್ಲಿ ಫಳಫಳನೆ ಹೊಳೆಯುವಂತೆ ಮಾಡುವ ‘ಸಿಂಪಲ್ ಹ್ಯಾಕ್’ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
35
ಏನಿದು ಹೊಸ ಟ್ರಿಕ್? ಕ್ಲೀನ್ ಮಾಡುವುದು ಹೇಗೆ?
ಏನಿದು ಹೊಸ ಟ್ರಿಕ್? ಕ್ಲೀನ್ ಮಾಡುವುದು ಹೇಗೆ? ವೈರಲ್ ಆಗಿರುವ ವಿಡಿಯೋ ಪ್ರಕಾರ, ಈ ಕ್ಲೀನಿಂಗ್‌ಗೆ ದುಬಾರಿ ಕೆಮಿಕಲ್‌ಗಳ ಅಗತ್ಯವಿಲ್ಲ. ಅಡುಗೆ ಮನೆಯಲ್ಲಿರುವ ಒಂದು ಫೋರ್ಕ್ ಚಮಚ (Fork spoon) ಮತ್ತು ಸ್ವಲ್ಪ ಹತ್ತಿ (Cotton) ಇದ್ದರೆ ಸಾಕು.
ಮಾಡುವ ವಿಧಾನ ಮೊದಲಿಗೆ ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಉಂಡೆಯಂತೆ ಮಾಡಿ, ಅದನ್ನು ಫೋರ್ಕ್ ಸ್ಪೂನ್‌ನ ಮುಳ್ಳುಗಳ ನಡುವೆ ಗಟ್ಟಿಯಾಗಿ ಸಿಕ್ಕಿಸಬೇಕು.
ನಂತರ, ಮಿಕ್ಸಿಯ ಹಿಂಭಾಗದಲ್ಲಿರುವ ಸಣ್ಣ ಸಂದುಗಳು ಮತ್ತು ರಂಧ್ರಗಳ ಒಳಗೆ ಈ ಫೋರ್ಕ್ ಅನ್ನು ಇಟ್ಟು ನಿಧಾನವಾಗಿ ತಿರುಗಿಸಬೇಕು.
ಹತ್ತಿಯು ಆ ಕಿರಿದಾದ ಜಾಗಕ್ಕೆ ಸುಲಭವಾಗಿ ತಲುಪುವುದರಿಂದ, ಅಲ್ಲಿ ಜಮೆಯಾಗಿದ್ದ ಎಣ್ಣೆಯ ಜಿಡ್ಡು ಮತ್ತು ಹಠಮಾರಿ ಕೊಳೆ ಕ್ಷಣಾರ್ಧದಲ್ಲಿ ಹತ್ತಿಗೆ ಅಂಟಿಕೊಂಡು ಹೊರಬರುತ್ತದೆ.
55
ಒಮ್ಮೆ ಈ ಸೂಪರ್ ಹ್ಯಾಕ್ ಟ್ರೈ ಮಾಡಿ ನೋಡಿ!
ಒಮ್ಮೆ ಈ ಸೂಪರ್ ಹ್ಯಾಕ್ ಟ್ರೈ ಮಾಡಿ ನೋಡಿ! ಯಾವುದೇ ಶ್ರಮವಿಲ್ಲದೆ, ಮಿಕ್ಸಿಯ ಮೋಟಾರ್‌ಗೆ ನೀರು ತಾಗದಂತೆ ಸುರಕ್ಷಿತವಾಗಿ ಸ್ವಚ್ಛಗೊಳಿಸುವ ಈ ಸುಲಭ ಉಪಾಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವೂ ಕೂಡ ನಿಮ್ಮ ಮನೆಯ ಮಿಕ್ಸಿ ಕ್ಲೀನ್ ಮಾಡಲು ಕಷ್ಟಪಡುತ್ತಿದ್ದರೆ, ಒಮ್ಮೆ ಈ ಸೂಪರ್ ಹ್ಯಾಕ್ ಟ್ರೈ ಮಾಡಿ ನೋಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.