ಪ್ರವಾಸಕ್ಕೆ ಹೋಗೋ ಮುನ್ನ ಮರಿದೆ ಈ ಉಪಕರಣಗಳನ್ನ ಅನ್‌ಪ್ಲಗ್ ಮಾಡಿ, ಇಲ್ಲದಿದ್ರೆ ಅನಾಹುತ ತಪ್ಪಿದ್ದಲ್ಲ!

Published : Apr 21, 2026, 04:07 PM IST

Travel checklist for homeowners: ಪ್ರವಾಸಕ್ಕೆ ಹೊರಡುವ ಮುನ್ನ ನಿಮ್ಮ ಚೆಕ್‌ಲಿಸ್ಟ್‌ನಲ್ಲಿ ವಾಷಿಂಗ್ ಮಷಿನ್ ಪ್ಲಗ್ ತೆಗೆಯುವುದನ್ನು ಸೇರಿಸಿದ್ದೀರಾ? ಮನೆಯ ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯಂತ ಮುಖ್ಯವಾದ ಕೆಲಸ. ಸ್ವಿಚ್ ಆಫ್ ಮಾಡಿದ್ದರೂ ಪ್ಲಗ್ ಯಾಕೆ ತೆಗೆಯಬೇಕೆಂದು ತಿಳಿಯಲು ಮುಂದೆ ಓದಿ.. 

PREV
16
ಎಲೆಕ್ಟ್ರೀಷಿಯನ್‌ಗಳಿಂದ ಎಚ್ಚರಿಕೆ

ಸಾಮಾನ್ಯವಾಗಿ ನಾವು ಪ್ರವಾಸಕ್ಕೆ ಹೋಗುವ ಮುನ್ನ ಮನೆ ಕ್ಲೀನ್ ಮಾಡುವುದು, ಗಿಡಗಳಿಗೆ ನೀರು ಹಾಕಲು ಹೇಳುವುದು ಅಥವಾ ಸಾಕುಪ್ರಾಣಿಗಳ ಆರೈಕೆಗೆ ವ್ಯವಸ್ಥೆ ಮಾಡುವುದನ್ನು ಮರೆಯುವುದಿಲ್ಲ. ಆದರೆ ನಮ್ಮ ಲಾಂಡ್ರಿ ರೂಮ್‌ನಲ್ಲಿರುವ ವಾಷಿಂಗ್ ಮಷಿನ್ ಬಗ್ಗೆ ಎಂದಾದರೂ ಯೋಚಿಸಿದ್ದೇವಾ? ಆದರೆ ಪ್ರವಾಸಕ್ಕೆ ಹೋಗುವ ಮುನ್ನ ವಾಷಿಂಗ್ ಮಷಿನ್ ಅನ್ನು ಅನ್‌ಪ್ಲಗ್ ಮಾಡುವುದು ಅತ್ಯಗತ್ಯ ಎಂದು ಎಲೆಕ್ಟ್ರೀಷಿಯನ್‌ಗಳು ಮತ್ತು ತಜ್ಞರು ಎಚ್ಚರಿಸುತ್ತಾರೆ.

26
ತಜ್ಞರು ಏನೆನ್ನುತ್ತಾರೆ?

ಪ್ರವಾಸಕ್ಕೆ ಹೋಗುವಾಗ ಡ್ರೈಯರ್ ಅಥವಾ ವಾಷಿಂಗ್ ಮಷಿನ್ ಅನ್ನು ಅನ್‌ಪ್ಲಗ್ ಮಾಡುವುದು ಅಥವಾ ಅದರ ಮೇನ್ ಸ್ವಿಚ್ (Breaker) ಆಫ್ ಮಾಡುವುದು ಉತ್ತಮ ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಇದಕ್ಕೆ ಕಾರಣಗಳು ಇಲ್ಲಿವೆ:
ಸೆನ್ಸಿಟಿವ್ ಕಂಟ್ರೋಲ್ ಬೋರ್ಡ್
ಆಧುನಿಕ ವಾಷಿಂಗ್ ಮಷಿನ್‌ಗಳಲ್ಲಿ ಕಂಪ್ಯೂಟರ್ ಚಿಪ್‌ಗಳಿರುವ ಕಂಟ್ರೋಲ್ ಬೋರ್ಡ್‌ಗಳಿರುತ್ತವೆ. ಇವು ಕರೆಂಟ್ ವ್ಯತ್ಯಾಸಕ್ಕೆ (Voltage Fluctuations) ಬೇಗನೆ ಹಾಳಾಗುತ್ತವೆ. ಪ್ರವಾಸಕ್ಕೆ ಹೋದಾಗ ಮಿಂಚು ಹೊಡೆದರೆ ಅಥವಾ ಪವರ್ ಲೈನ್‌ನಲ್ಲಿ ದೋಷ ಉಂಟಾದರೆ ಇದು ಸುಟ್ಟು ಹೋಗಬಹುದು.

36
ನೀರು ಮತ್ತು ವಿದ್ಯುತ್

ವಾಷಿಂಗ್ ಮಷಿನ್ ಒಳಗೆ ನೀರಿನ ಪೈಪ್‌ಗಳ ಸಂಪರ್ಕ ಇರುತ್ತದೆ. ಒಂದು ವೇಳೆ ನೀವು ಇಲ್ಲದ ಸಮಯದಲ್ಲಿ ಪೈಪ್ ಲೀಕ್ ಆಗಿ ನೀರು ಎಲೆಕ್ಟ್ರಿಕಲ್ ಪಾರ್ಟ್ಸ್‌ಗಳ ಮೇಲೆ ಬಿದ್ದರೆ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಇರುತ್ತದೆ.

46
ಇನ್-ಬಿಲ್ಟ್ ಹೀಟರ್

ಇತ್ತೀಚಿನ ಅನೇಕ ವಾಷಿಂಗ್ ಮಷಿನ್‌ಗಳಲ್ಲಿ ಬಟ್ಟೆ ಒಗೆಯಲು ನೀರು ಬಿಸಿ ಮಾಡುವ 'ಹೀಟರ್' ಇರುತ್ತದೆ. ಇದು ಡ್ರೈಯರ್‌ನಷ್ಟೇ ವಿದ್ಯುತ್ ಬಳಸುವುದರಿಂದ, ತಾಂತ್ರಿಕ ದೋಷವಾದಾಗ ಬೆಂಕಿಯ ಅಪಾಯವನ್ನು ಹೊಂದಿರುತ್ತದೆ.

56
ಇತರ ಯಾವ ಸಾಧನಗಳನ್ನು ಅನ್‌ಪ್ಲಗ್ ಮಾಡಬೇಕು?

ಕೇವಲ ವಾಷಿಂಗ್ ಮಷಿನ್ ಮಾತ್ರವಲ್ಲ, ಪ್ರವಾಸಕ್ಕೆ ಹೋಗುವಾಗ ಈ ಕೆಳಗಿನ ವಸ್ತುಗಳನ್ನು ಅನ್‌ಪ್ಲಗ್ ಮಾಡುವುದು ನಿಮ್ಮ ಮನೆಯನ್ನು ರಕ್ಷಿಸುತ್ತದೆ ಮತ್ತು ಕರೆಂಟ್ ಬಿಲ್ ಉಳಿಸುತ್ತದೆ:
ಸಣ್ಣ ಉಪಕರಣಗಳು: ಕಾಫಿ ಮೇಕರ್, ಟೋಸ್ಟರ್ ಮತ್ತು ಸ್ಪೇಸ್ ಹೀಟರ್‌ಗಳು.
ಎಲೆಕ್ಟ್ರಾನಿಕ್ಸ್: ಟಿವಿ ಮತ್ತು ಕಂಪ್ಯೂಟರ್‌ಗಳನ್ನು ಪವರ್ ಸರ್ಜ್‌ನಿಂದ ರಕ್ಷಿಸಲು ಪ್ಲಗ್ ತೆಗೆಯಿರಿ.

66
ಪ್ರವಾಸಕ್ಕೆ ಹೋಗುವ ಮುನ್ನ ತೆಗೆದುಕೊಳ್ಳಬೇಕಾದ ಹೆಚ್ಚುವರಿ ಮುನ್ನೆಚ್ಚರಿಕೆಗಳು

ಥರ್ಮೋಸ್ಟಾಟ್: ಎನರ್ಜಿ ಸೇವಿಂಗ್ ಮೋಡ್‌ಗೆ ಹೊಂದಿಸಿ.
ಶುಚಿಗೊಳಿಸುವಿಕೆ: ಫ್ರಿಡ್ಜ್‌ನಲ್ಲಿ ಹಾಳಾಗುವ ವಸ್ತುಗಳನ್ನು ಖಾಲಿ ಮಾಡಿ ಮತ್ತು ಕಸದ ಬುಟ್ಟಿ ಸ್ವಚ್ಛಗೊಳಿಸಿ (ವಾಸನೆ ಬರದಂತೆ ತಡೆಯಲು).
ನೀರನ್ನು ಆಫ್ ಮಾಡಿ: ದೀರ್ಘ ಕಾಲದ ಪ್ರವಾಸವಾಗಿದ್ದರೆ ನೀರಿನ ಮೇನ್ ವಾಲ್ವ್ ಆಫ್ ಮಾಡಿ.
ಸುರಕ್ಷತೆ: ಕಿಟಕಿ, ಬಾಗಿಲುಗಳನ್ನು ಸರಿಯಾಗಿ ಲಾಕ್ ಮಾಡಿ ಮತ್ತು ಸೆಕ್ಯೂರಿಟಿ ಸಿಸ್ಟಮ್ ಕೆಲಸ ಮಾಡುತ್ತಿದೆಯೇ ಎಂದು ಪರಿಶೀಲಿಸಿ.
ಈ ಸಣ್ಣ ಕೆಲಸಗಳು ನಿಮ್ಮ ರಜಾದಿನಗಳನ್ನು ನೆಮ್ಮದಿಯಿಂದ ಕಳೆಯಲು ಸಹಾಯ ಮಾಡುತ್ತವೆ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories