ಅಂಬಾನಿ ಕುಟುಂಬವು ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದೆ. 9,24,339 ಕೋಟಿ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಕೇಶ್ ಅಂಬಾನಿ ಗುರುತಿಸಿಕೊಂಡಿದ್ದಾರೆ.
ಯಾವಾಗ್ಲೂ ಗ್ರ್ಯಾಂಡ್ ಪಾರ್ಟಿ, ಸಮಾರಂಭಗಳನ್ನು ಆಯೋಜಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಬಿಲಿಯನೇರ್ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಲೈಫ್‌ಸ್ಟೈಲ್ ಸಹ ಲಕ್ಸುರಿಯಸ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತದೆ.
ಬಿಲಿಯನೇರ್ ಕುಟುಂಬ ಲಕ್ಸುರಿಯಸ್ ಗಿಫ್ಟ್ಸ್‌ಗಳನ್ನು ನೀಡೋದ್ರಲ್ಲಿ ಎತ್ತಿದ ಕೈ. ವಿಶೇಷ ಸಂದರ್ಭಗಳಲ್ಲಿ ಕುಟುಂಬ ಸದಸ್ಯರಿಗೆ ಪರಸ್ಪರ ದುಬಾರಿ ಉಡುಗೊರೆಗಳನ್ನು ನೀಡಿ ಎಲ್ಲರ ಗಮನ ಸೆಳೆಯುತ್ತಾರೆ.
2007ರಲ್ಲಿ, ಮುಖೇಶ್ ಅಂಬಾನಿಯವರು ದೀಪಾವಳಿಯಂದು 10 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್‌ನ್ನು ಪತ್ನಿ ನೀತಾ ಅಂಬಾನಿಗೆ ಗಿಫ್ಟ್ ಮಾಡಿದರು. ಇದು ಭಾರತದಲ್ಲಿನ ಅತ್ಯಂತ ದುಬಾರಿ SUV ಕಾರು ಆಗಿದೆ. ಕಸ್ಟಮೈಸ್ ಮಾಡಿದ ಐಷಾರಾಮಿ ಕಾರು ಕಿತ್ತಳೆ ಬಣ್ಣದ ಟಸ್ಕನ್ ಸನ್ ಶೇಡ್ ಆಗಿದ್ದು, ಐಷಾರಾಮಿ ಫೀಚರ್‌ಗಳನ್ನು ಒಳಗೊಂಡಿದೆ.
ನೀತಾ ಅಂಬಾನಿ ಹುಟ್ಟುಹಬ್ಬದಂದು ಮುಕೇಶ್ ಅಂಬಾನಿ, 240 ಕೋಟಿ ರೂಪಾಯಿ ಮೌಲ್ಯದ ಏರ್‌ಬಸ್ (A319) ಐಷಾರಾಮಿ ಜೆಟ್ ಅನ್ನು ಉಡುಗೊರೆಯಾಗಿ ನೀಡಿದರು. ಖಾಸಗಿ ಜೆಟ್ ಕಸ್ಟಮ್-ನಿರ್ಮಿತ ಕಚೇರಿ, ಕ್ಯಾಬಿನ್ ಸೌಕರ್ಯಗಳು, ಮಾಸ್ಟರ್ ಬೆಡ್‌ರೂಮ್, ಸ್ನಾನಗೃಹ ಮತ್ತು ಮೂಡ್ ಲೈಟಿಂಗ್‌ನೊಂದಿಗೆ ಸ್ಕೈ ಬಾರ್‌ನ್ನು ಹೊಂದಿತ್ತು.
ಉಡುಗೊರೆ ನೀಡುವ ವಿಚಾರದಲ್ಲಿ ನೀತಾ ಅಂಬಾನಿ ಕಡಿಮೆಯೇನಲ್ಲ. ಆಕಾಶ್ ಅಂಬಾನಿಯವರ ವಿವಾಹದ ಸಂದರ್ಭದಲ್ಲಿ, ನೀತಾ ತನ್ನ ಸೊಸೆ ಶ್ಲೋಕಾ ಮೆಹ್ತಾಗೆ ಲಕ್ಸುರಿಯಸ್ ಹಾರವನ್ನು ಉಡುಗೊರೆಯಾಗಿ ನೀಡಿದರು.
18 ಕ್ಯಾರೆಟ್ ಗುಲಾಬಿ ಚಿನ್ನದ ಕಲ್ಲು, 229.52-ಕ್ಯಾರೆಟ್ ಬಿಳಿ ವಜ್ರ, 407.48-ಕ್ಯಾರೆಟ್ ಹಳದಿ ವಜ್ರವನ್ನು ಒಳಗೊಂಡ ಈ ನೆಕ್ಲೇಸ್ 451 ಕೋಟಿ ಮೌಲ್ಯದ್ದಾಗಿತ್ತು.
ಇನ್ನು ಅಂಬಾನಿ ಮಕ್ಕಳು ಸಹ ಗಿಫ್ಟ್ ಕೊಡೋದ್ರಲ್ಲಿ ಹಿಂದೆ ಬಿದ್ದಿಲ್ಲ. ಆಕಾಶ್ ಅಂಬಾನಿ, ಕಿರಿಯ ಸಹೋದರ ಅನಂತ್ ಅಂಬಾನಿಗೆ ರಾಧಿಕಾ ಮರ್ಚೆಂಟ್ ಜೊತೆಗಿನ ನಿಶ್ಚಿತಾರ್ಥದಲ್ಲಿ 18k ಪ್ಯಾಂಥೆರೆ ಡಿ ಕಾರ್ಟಿಯರ್ ಬ್ರೂಚ್ ಅನ್ನು ಉಡುಗೊರೆಯಾಗಿ ನೀಡಿದರು. ಈ ವಿಶಿಷ್ಟ ಬ್ರೂಚ್ 1.32 ಕೋಟಿ ರೂ. ಬೆಲೆ ಬಾಳುತ್ತದೆ.