ವೈದ್ಯೆಯಾಗಿರುವ Sarah Gray, 31 ವರ್ಷದ ಈಕೆ ಆಸ್ಟ್ರೇಲಿಯಾ ನಿವಾಸಿ. ಸದ್ಯ ಎಡಿಲೇಡ್ ನ ಹಾಸ್ಪಿಟಲ್ ಒಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ದೇಹದಲ್ಲಿ ಅತಿ ಹೆಚ್ಚು ಟ್ಯಾಟೂ ಹಾಕಿಸಿಕೊಂಡಿರುವ ವೈದ್ಯೆ ಎಂಬ ಹೆಗ್ಗಳಿಕೆ Sarah ಅವರಿಗಿದೆ.
Sarah ತಮ್ಮ 16ನೇ ವಯಸ್ಸಿನಲ್ಲಿ ಮೊದಲ ಟ್ಯಾಟೂ ಹಾಕಿಸಿಕೊಂಡಿದ್ದರು.
ಸದ್ಯ 31 ವರ್ಷದ ವಯಸ್ಸಿನ Sarahಗೆ ಆರ್ಟ್ ವರ್ಕ್ ಹಾಗೂ ವೈದ್ಯ ವೃತ್ತಿ ಇವೆರಡು ಬಹಳ ಅಚ್ಚುಮೆಚ್ಚು
ಆಸ್ಟ್ರೇಲಿಯಾದ Royal Adelaide Hospitalನಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ Sarah ಎಲ್ಲರಿಗೂ ಅಚ್ಚುಮೆಚ್ಚು.
ಈ ಹಾಸ್ಪಿಟಲ್ ನಲ್ಲಿ ಅವರನ್ನು The Most Colourful Doctor ಎಂದೇ ಕರೆಯಲಾಗುತ್ತದೆ.
ಈಕೆ ಓರ್ವ ಡಾಕ್ಟರ್ ಮಾತ್ರವಲ್ಲ, ಖುದ್ದು ಟ್ಯಾಟೂ ಪಾರ್ಲರ್ ಕೂಡಾ ನಡೆಸುತ್ತಾರೆ.
Sarah ಹಾಗೂ ಆಕೆಯ ಪತಿ ಟ್ಯಾಟೂ ಪಾರ್ಲರ್ ಹೊಂದಿದ್ದಾರೆ. ಪತಿ ಮ್ಯಾಟ್ ಫುಲ್ ಟೈಂ ಟ್ಯಾಟೂ ಆರ್ಟಿಸ್ಟ್ ಆಗಿದ್ದಾರೆ.
Sarah ದೇಹದ ಮೇಲೆಲ್ಲಾ ವಿವಿಧ ಶೈಲಿಯ ಟ್ಯಾಟೂಗಳಿವೆ. ಸದ್ಯ ಅವರ ಮುಖ ಮಾತ್ರ ಟ್ಯಾಟೂಗಳಿಂದ ಮುಕ್ತವಾಗಿದೆಯಷ್ಟೇ.
ಯುವಜನರ ಮನಸ್ಥಿತಿ ಬದಲಾಗುತ್ತಿದೆ. ವೈದ್ಯರೂ ಈಗ ಮೊದಲಿನಂತಿಲ್ಲ. ಜನರು ಕೂಡಾ ಈ ಬದಲಾವಣೆಯನ್ನು ಸ್ವೀಕರಿಸುತ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲೂ ಈಕೆ ಮಿಂಚುತ್ತಿದ್ದಾರೆ. ಈಕೆ ಓರ್ವ ಮಾಡೆಲ್ ಕೂಡಾ ಹೌದು