ಝಗಮಗಿಸುತ್ತಿದೆ ಅಂಬಾನಿ ನಿವಾಸ ಆಂಟಿಲಿಯಾ; ಜೈ ಶ್ರೀರಾಮ್ ಕಲಾಕೃತಿಯ ವೈಭವದ ಫೋಟೋಸ್ ನೋಡಿ

First Published | Jan 22, 2024, 9:15 AM IST

ಬಹು ನಿರೀಕ್ಷಿತ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಇಂದು ನಡೆಯಲಿದೆ. ಭಾರತದ ಎಲ್ಲಾ ರಾಜ್ಯಗಳು, ಗ್ರಾಮಗಳು ರಾಮನ ಆರಾಧನೆಯಿಂದ ಝಗಮಗಿಸುತ್ತಿದೆ. ಬಿಲಿಯನೇರ್ ಮುಕೇಶ್ ಅಂಬಾನಿ ಲಕ್ಸುರಿಯಸ್‌ ಬಂಗಲೆ ಸಹ ಅದ್ಧೂರಿಯಾಗಿ ಅಲಂಕಾರಗೊಂಡಿದೆ.

ಬಹು ನಿರೀಕ್ಷಿತ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಇಂದು ನಡೆಯಲಿದೆ. ಕೋಟ್ಯಂತರ ಭಾರತೀಯರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ಭಾರತದ ಎಲ್ಲಾ ರಾಜ್ಯಗಳು, ಗ್ರಾಮಗಳು ರಾಮನ ಆರಾಧನೆಯಿಂದ ಝಗಮಗಿಸುತ್ತಿದೆ. ಬಿಲಿಯನೇರ್ ಮುಕೇಶ್ ಅಂಬಾನಿ ಬಂಗಲೆ ಸಹ ಅದ್ಧೂರಿಯಾಗಿ ಅಲಂಕಾರಗೊಂಡಿದೆ.

ಅಯೋಧ್ಯೆಯ ನೂತನ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ದೇಶಾದ್ಯಂತ ದೇವಾಲಯಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಇಂದು ನಡೆಯುವ ಕಾರ್ಯಕ್ರಮಕ್ಕೆ ಮುಂಚಿತವಾಗಿ, ದೇಶಾದ್ಯಂತ ವಿವಿಧ ದೇವಾಲಯಗಳು ದೀಪೋತ್ಸವವನ್ನು ಆಚರಿಸಲು, ಭಜನೆ-ಕೀರ್ತನೆಯಲ್ಲಿ ತೊಡಗಿಸಿಕೊಂಡಿವೆ.

Tap to resize

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸವು 'ಜೈ ಶ್ರೀ ರಾಮ್' ಕಲಾಕೃತಿಗಳಿಂದ ಬೆಳಗಿದೆ. ಸಂಪೂರ್ಣ ಬಂಗಲೆ ಬೆಳಕಿನಿಂದ ಝಗಮಗಿಸುತ್ತಿದೆ. ಲಕ್ಸುರಿಯಸ್‌ ಬಂಗಲೆ ಆಂಟಿಲಿಯಾ ಅಯೋಧ್ಯೆಯ ಸಂಭ್ರಮಕ್ಕೆ ಸಾಥ್ ನೀಡಿದೆ.

ಆಂಟಿಲಿಯಾ ಆವರಣದ ಒಳಗೂ ಹೊರಗೂ ದೀಪಗಳಿಂದ ಅಲಂಕರಿಸಲ್ಪಟ್ಟಿದೆ. ದೀಪಗಳು ಮತ್ತು ಭಗವಾನ್ ರಾಮನನ್ನು ಸ್ತುತಿಸುವ ಪಠಣಗಳ ಚಿತ್ರಣಗಳನ್ನು ಒಳಗೊಂಡಿದೆ.

ಮುಕೇಶ್ ಅಂಬಾನಿ, ನೀತಾ ಅಂಬಾನಿ, ಇಶಾ-ಅನಂತ್, ಆಕಾಶ್-ಶ್ಲೋಕಾ ಮತ್ತು ಅನಂತ್-ರಾಧಿಕಾ ಅವರು ಜನವರಿ 22ರಂದು ಅಯೋಧ್ಯೆಯಲ್ಲಿ ಹೊಸ ರಾಮಮಂದಿರದಲ್ಲಿ 'ಪ್ರಾಣ-ಪ್ರತಿಷ್ಠಾ' ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಮಮಂದಿರದ ಉದ್ಘಾಟನೆಯನ್ನು ಆಚರಿಸಲು ರಿಲಯನ್ಸ್‌ ಮೊದಲಿನಿಂದಲೂ ಕೈ ಜೋಡಿಸಿದೆ. ಬೃಹತ್ ಭಂಡಾರ ಅಥವಾ ಅನ್ನ ಸೇವೆಯನ್ನು ಕೂಡ ಆಯೋಜಿಸಲಾಗಿತ್ತು.

ಅಯೋಧ್ಯೆಯ ರಾಮಮಂದಿರ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧಿಕೃತ ನಿವಾಸದಲ್ಲಿ ದೀಪಾಲಂಕಾರ ಮಾಡಲಾಗಿತ್ತು

Latest Videos

click me!