ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಂಬಾನಿ ಫ್ಯಾಮಿಲಿ ಸದಸ್ಯರು ಬರೋಬ್ಬರಿ 15,000 ಕೋಟಿ ಮೌಲ್ಯದ ಬಹುಮಹಡಿ ಬಂಗಲೆ ಆಂಟಿಲಿಯಾದಲ್ಲಿ ವಾಸಿಸುತ್ತಾರೆ. ಆಂಟಿಲಿಯಾ ಭೂಮಿಯ ಮೇಲಿರುವ ಅತ್ಯಂತ ದುಬಾರಿ ಖಾಸಗಿ ನಿವಾಸವಾಗಿದೆ.
ಮುಕೇಶ್ ಅಂಬಾನಿ-ನೀತಾ ಅಂಬಾನಿ, ಅನಂತ್, ಆಕಾಶ್, ಶ್ಲೋಕಾ, ಪೃಥ್ವಿ ಮತ್ತು ವೇದಾ ಅಂಬಾನಿ ಅವರನ್ನು ಒಳಗೊಂಡಿರುವ ಅಂಬಾನಿ ಕುಟುಂಬವು ಈ 27 ಅಂತಸ್ತಿನ ಕಟ್ಟಡದಲ್ಲಿ ವಾಸಿಸುತ್ತಿದೆ. ಬರೋಬ್ಬರಿ 4 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಭವ್ಯವಾದ 27 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ 15000 ಕೋಟಿ ರೂ. ಖರ್ಚು ಮಾಡಲಾಗಿದೆ.
ಪರ್ಕಿನ್ಸ್ & ವಿಲ್ ಮತ್ತು ಹಿರ್ಷ್ ಬೆಡ್ನಾರ್ ಅಸೋಸಿಯೇಟ್ಸ್ ಎಂದಬ ಎರಡು ಅಮೇರಿಕನ್ ಸಂಸ್ಥೆಗಳು ಆಂಟಿಲಿಯಾ ವಿನ್ಯಾಸ ಮತ್ತು ನಿರ್ಮಾಣವನ್ನು ನೋಡಿಕೊಂಡವು. ಇದರೊಳಗೆ ಸ್ವಿಮ್ಮಿಂಗ್ ಪೂಲ್, ಸ್ಪಾ, ಮಂದಿರ, ಹಾಸ್ಪಿಟಲ್, ಬಾಲ್ ರೂಂ, ಥಿಯೇಟರ್, ಬಾರ್ ಹೀಗೆ ಎಲ್ಲಾ ವ್ಯವಸ್ಥೆಯೂ ಇದೆ.
ಆಂಟಿಲಿಯ 6ನೇ ಮಹಡಿಯಲ್ಲಿ ಗ್ಯಾರೇಜ್ ಇದ್ದು, ಇದರಲ್ಲಿ ಸುಮಾರು 168 ಕಾರುಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದಾಗಿದೆ. ಈ ಕಾರುಗಳನ್ನು ಸರ್ವೀಸ್ ಮಾಡಲು 7ನೇ ಮಹಡಿಯಲ್ಲಿ ಸರ್ವೀಸ್ ಸ್ಟೇಷನ್ ಕೂಡ ಸ್ಥಾಪಿಸಲಾಗಿದೆ.
ಮುಖೇಶ್ ಅಂಬಾನಿ ಮನೆಯಲ್ಲಿ 9 ಲಿಫ್ಟ್‌ಗಳನ್ನು ಹೊಂದಿದೆ
ಆಂಟಿಲಿಯಾದ ಸಂಪೂರ್ಣ ಕೆಲಸ ನಿರ್ವಹಿಸಲು ಅಂಬಾನಿ ಸುಮಾರು 600 ಜನ ಸಿಬ್ಬಂದಿಯನ್ನು ನೇಮಿಸಿದ್ದಾರೆ.
ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ 828 ಮೀಟರ್ ಎತ್ತರದಲ್ಲಿ 163 ಮಹಡಿಗಳನ್ನು ಹೊಂದಿದೆ ಮತ್ತು $1.5 ಬಿಲಿಯನ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 12500 ಕೋಟಿ ರೂ. ಆಗಿದೆ. ಅಂದರೆ ಆಂಟಿಲಿಯಾ, ವೆಚ್ಚದಲ್ಲಿ ಬುರ್ಜ್ ಖಲೀಫಾವನ್ನು ಮೀರಿಸಿದೆ ಎಂಬುದು ಕುತೂಹಲಕಾರಿಯಾಗಿದೆ.
ಬುರ್ಜ್ ಖಲೀಫಾವನ್ನು ಪ್ರಸಿದ್ಧ ನಿರ್ಮಾಣ ಎಂಜಿನಿಯರಿಂಗ್ ಕಂಪನಿ 'ಸ್ಕಿಡ್‌ಮೋರ್, ಓವಿಂಗ್ಸ್ ಮತ್ತು ಮೆರಿಲ್' ನಿರ್ಮಿಸಿದೆ ಮತ್ತು ಆಡ್ರಿಯನ್ ಸ್ಮಿತ್ ನೇತೃತ್ವದ ತಂಡವು ವಿನ್ಯಾಸಗೊಳಿಸಿದೆ. ಆಂಟಿಲಿಯಾ ನಿರ್ಮಾಣವು 2004ರಲ್ಲಿ ಪ್ರಾರಂಭವಾಯಿತು ಮತ್ತು ಆರು ವರ್ಷಗಳ ನಂತರ ಪೂರ್ಣಗೊಂಡಿತು.
ಬರೋಬ್ಬರಿ 15000 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆಂಟಿಲಿಯಾ 8 ರಿಕ್ಟರ್ ಮಾಪಕ ಭೂಕಂಪವನ್ನು ಸುಲಭವಾಗಿ ತಡೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. 2011 ರಲ್ಲಿ, ಮುಖೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ 'ಆಂಟಿಲಿಯಾ'ಕ್ಕೆ ಸ್ಥಳಾಂತರಗೊಂಡರು, ಅಂದಿನಿಂದ ಅವರು ಇಲ್ಲಿಯೇ ವಾಸಿಸುತ್ತಿದ್ದಾರೆ.