ಸೀತಾರಾಮ್ ಸೀರಿಯಲ್‌ನ ಬಬ್ಲೀ ಹುಡುಗಿ, ಮಾತಿನ ಮಲ್ಲಿ ಪ್ರಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಧಾರಾವಾಹಿಯಲ್ಲಿ ಮಾಡರ್ನ್ ಆಗಿರೋ ಮೇಘನಾ ಶಂಕರಪ್ಪ ಇತ್ತೀಚಿಗೆ ರಿಯಲ್ ಲೈಫ್‌ನಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ್ದಾರೆ.
ಸೀತಾರಾಮ್ ಸೀರಿಯಲ್‌ನಲ್ಲಿ ಹೀರೋಯಿನ್ ಸೀತಾಳಂತೆ ಎಲ್ಲರ ಗಮನ ಸೆಳೆದಿರುವ ಪಾತ್ರ ಆಕೆಯ ಗೆಳತಿ ಪ್ರಿಯಾಳದ್ದು. ಈ ಪಾತ್ರವನ್ನು ನಿರ್ವಹಿಸುತ್ತಿರುವ ಮೇಘನಾ ಶಂಕರಪ್ಪ ಅಭಿನಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಾರೆ.
ಹಳದಿ ಸೀರೆ ಮತ್ತು ನೀಲಿ ಬ್ಲೌಸ್ ತೊಟ್ಟ ಮೇಘನಾ ಶಂಕರಪ್ಪ ಮುದ್ದಾಗಿ ಫೋಟೋಗೆ ಫೋಸ್ ನೀಡಿದ್ದಾರೆ. ಇದಕ್ಕೆ ಸಾಂಪ್ರದಾಯಿಕ ಆಭರಣಗಳನ್ನು ಸಹ ಧರಿಸಿದ್ದಾರೆ.
ಮೇಘನಾ ಶಂಕರಪ್ಪ ಮುದ್ದಾದ ಫೋಟೋಸ್‌ಗೆ ನೆಟ್ಟಿಗರು ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಓರ್ವ ಬಳಕೆದಾರರು, ನೈಸ್ ಲುಕ್ಕಿಂಗ್, ಬ್ಯೂಟಿಫುಲ್ ಎಂದೆಲ್ಲಾ ಕಮೆಂಟ್‌ನಲ್ಲಿ ತಿಳಿಸಿದ್ದಾರೆ.
'ನಿನ್ನ ಕಂಗಳು ನೂರು ಕವಿತೆ ಬರೆಸಿವೆ ...ನಿನ್ನ ನಗುವದು ಮನದ ನೋವ ಮರೆಸಿವೆ ...ನಿನ್ನ ಚೆಲುವದು ಕಲ್ಲು ಮನಸ್ಸನ್ನು ಕರಗಿಸಿವೆ' ಎಂದು ಅಭಿಮಾನಿಯೊಬ್ಬರು ಹೊಗಳಿದ್ದಾರೆ.
ಮೇಘನಾ ಶಂಕರಪ್ಪ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ಸೀರೆ, ಗೌನ್‌ನಲ್ಲಿ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೀರಿಯಲ್ ಟೀಂ ಜೊತೆ ರೀಲ್ಸ್ ಸಹ ಮಾಡಿ ಶೇರ್ ಮಾಡುತ್ತಾರೆ.
ಕನ್ನಡ ಕಿರುತೆರೆಯ ಚಾಯಾ ಎಂದೇ ಜನಪ್ರಿಯತೆ ಪಡೆದಿದ್ದ ಮೇಘನಾ ಶಂಕರಪ್ಪ ಸೀತಾರಾಮ ಧಾರಾವಾಹಿಯಿಂದ ಎಲ್ಲರ ನೆಚ್ಚಿನ ಪ್ರಿಯಾ ಆಗಿದ್ದಾರೆ.
ಸೀರಿಯಲ್‌ನಲ್ಲಿ ಮಾಡರ್ನ್ ಹುಡುಕಿ ಪ್ರಿಯಾ ಪಾತ್ರ ಮಾಡುತ್ತಿದ್ದರೂ ಧರಿಸುವ ಪ್ರತಿಯೊಂದು ಬಟ್ಟೆನೂ ಸಿಂಪಲ್ ಆಂಡ್ ಬ್ಯೂಟಿಫುಲ್ ಆಗಿರುತ್ತದೆ
ಮೇಘನಾ, ಈ ಹಿಂದೆ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದಲ್ಲಿ ನಟಿಸಿದ್ದರು. ಪಾಸಿಟಿವ್ ಆಗಲಿ ನೆಗೆಟಿವ್ ಆಗಲಿ ಎಲ್ಲ ಪಾತ್ರಕ್ಕೂ ಮೇಘನಾ ಶಂಕರಪ್ಪ ಸೈ ಅನ್ನುತ್ತಾರೆ. ಕಿನ್ನರಿ, ಕೃಷ್ಣ ತುಳಸಿ, ರತ್ನಗಿರಿ ರಹಸ್ಯ, ದೇವಯಾನಿ ಮತ್ತು ಸಿಂಧೂರಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮೇಘನಾ ಶಂಕರಪ್ಪ.