ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿಯ ಕುಟುಂಬ ವಾಸಿಸೋದು 15000 ಕೋಟಿ ರೂಪಾಯಿಯ ಐಷಾರಾಮಿ ಬಂಗಲೆಯಲ್ಲಿ. ಅಂಟಿಲಿಯಾ ಎಂದು ಕರೆಯಲ್ಪಡುವ ಈ ಮನೆ ಹಲವು ವಿಶೇಷತೆಗಳಿಂದ ಕೂಡಿದೆ. ಇಲ್ಲಿನ ಡೋರ್ ಸೇಫ್ಟಿ, ಮನೆಯೊಳಗಿರುವ ವ್ಯವಸ್ಥೆ, ಸ್ವಿಮ್ಮಿಂಗ್ ಪೂಲ್, ಕೆಲಸಗಾರರ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ.
ಅಂಟಿಲಿಯಾ ಅಲ್ಲದೆಯೂ ಮುಕೇಶ್ ಅಂಬಾನಿ ಐಷಾರಾಮಿ ವಿಲ್ಲಾವನ್ನು ಹೊಂದಿದ್ದಾರೆ ಅನ್ನೋದು ನಿಮ್ಗೊತ್ತಾ? ಹೌದು, ದುಬೈನಲ್ಲಿಯೂ ಮುಕೇಶ್ ಅಂಬಾನಿ ಐಷಾರಾಮಿ ಬಂಗಲೆಯೊಂದನ್ನು ಹೊಂದಿದ್ದಾರೆ. ಈ ಆ ಬಗ್ಗೆ ಇಲ್ಲಿದೆ ಮಾಹಿತಿ.
ಮುಕೇಶ್ ಅಂಬಾನಿಯವರ ದುಬೈ ವಿಲ್ಲಾ ಉತ್ತರ ಪಾಮ್ ಜುಮೇರಾದಲ್ಲಿದೆ. ಈ ಐಷಾರಾಮಿ ಬಂಗಲೆಯಲ್ಲಿ 10 ಮಲಗುವ ಕೋಣೆಗಳು, ಖಾಸಗಿ ಸ್ಪಾ ಮತ್ತು ಎರಡು ಈಜುಕೊಳಗಳಿವೆ ಎಂದು ತಿಳಿದುಬಂದಿದೆ. ಮುಕೇಶ್ ಅಂಬಾನಿಯವರ ದುಬೈ ವಿಲ್ಲಾವು ಇಟಾಲಿಯನ್ ಮಾರ್ಬಲ್‌ನಿಂದ ಸುಸಜ್ಜಿತವಾಗಿದೆ ಮತ್ತು ಇದು ರಾಜಮನೆತನದ ಮೇರುಕೃತಿಗಳನ್ನು ಹೊಂದಿದೆ.
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಕುಟುಂಬವು ಅವರ ಸಂಪತ್ತು ಮತ್ತು ಐಷಾರಾಮಿ ಜೀವನಶೈಲಿಗೆ ಹೆಸುರವಾಸಿಯಾಗಿದೆ. ಮುಕೇಶ್ ಅಂಬಾನಿ ಪ್ರಪಂಚದಾದ್ಯಂತ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ. ಈ ಆಸ್ತಿಗಳಲ್ಲಿ ಒಂದು ದುಬೈನಲ್ಲಿರುವ 650 ಕೋಟಿ ಮೌಲ್ಯದ ವಿಲ್ಲಾ.
2022ರಲ್ಲಿ, ಮುಖೇಶ್ ಅಂಬಾನಿ ದುಬೈನ ಪಾಮ್ ಜುಮೇರಾದಲ್ಲಿ ಐಷಾರಾಮಿ ಆಸ್ತಿಯನ್ನು ಖರೀದಿಸಿದರು. ಇದು ಸುಮಾರು 650 ಕೋಟಿ ಮೌಲ್ಯದ ಆಸ್ತಿ ಇದು ಎಂದು ವರದಿಯಾಗಿದೆ.
ಈ ಐಷಾರಾಮಿ ಆಸ್ತಿಯು 26,033 ಚದರ ಅಡಿ ಪ್ರದೇಶದಲ್ಲಿ ಹರಡಿದೆ. ಅಂಬಾನಿ ಕುಟುಂಬ ಇದನ್ನು ಒಂದು ರೀತಿಯ ರಜೆಯನ್ನು ಕಳೆಯುವ ಬಂಗಲೆಯಾಗಿ ಬಳಸುತ್ತಾರೆ ಎಂದು ತಿಳಿದುಬಂದಿದೆ.
ಇನ್ನು ಅಂಟಿಲಿಯಾ 15000 ಕೋಟಿ ರೂಪಾಯಿ ಬೆಲೆ ಬಾಳುವ 27 ಅಂತಸ್ತಿನ ಕಟ್ಟಡವಾಗಿದೆ. ಇದರಲ್ಲಿ ಮುಕೇಶ್ ಅಂಬಾನಿ ಕುಟುಂಬವು ವಾಸಿಸುತ್ತದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ಇದ್ದಾರೆ. ಅಂಬಾನಿ ಕುಟುಂಬವು 2012 ರಲ್ಲಿ ಆಂಟಿಲಿಯಾಕ್ಕೆ ಸ್ಥಳಾಂತರಗೊಂಡಿತು.
ಐಷಾರಾಮಿ ಮನೆಯು 173 ಮೀಟರ್ ಎತ್ತರ ಮತ್ತು 37,000 ಚದರ ಮೀಟರ್‌ಗಳಲ್ಲಿ ಹರಡಿಕೊಂಡಿದೆ. ಎತ್ತರದ ಕಟ್ಟಡವು ಬಹು ಅಂತಸ್ತಿನ ಕಾರ್ ಪಾರ್ಕಿಂಗ್, 9 ಹೈ ಸ್ಪೀಡ್ ಎಲಿವೇಟರ್‌ಗಳು ಮತ್ತು ಸಿಬ್ಬಂದಿಗೆ ವಿಶೇಷ ಸೂಟ್‌ಗಳನ್ನು ಹೊಂದಿದೆ. 2012ರಿಂದ ಈವರೆಗೂ ಕೂಡಾ ಈ ಅಂಟಿಲಿಯಾ ಮನೆಯು ತನ್ನ ಐಷಾರಾಮಿ ವ್ಯವಸ್ಥೆಯಿಂದಲೇ ಅತೀ ಜನಪ್ರಿಯವಾಗಿದೆ.