300 ಮಹಡಿ ಏರಿ ಆ್ಯನಿವರ್ಸರಿ ಸೆಲೆಬ್ರೆಟ್ ಮಾಡಿಕೊಂಡ ಕಪಲ್
First Published | Apr 24, 2020, 12:35 PM IST90ರ ಟಿವಿ ಶೋ 'ಕ್ಯಾಪ್ಟನ್ ವ್ಯೋಮ್' ಮೂಲಕ ಜನಪ್ರಿಯರಾದ ಮಿಲಿಂದ್ ಸೋಮನ್ ಭಾರತದ ಸೂಪರ್ ಮಾಡೆಲ್. 54 ವರ್ಷದ ಮಿಲಿಂದ್ ಅವರು ತಮಗಿಂತ 25 ವರ್ಷ ಚಿಕ್ಕವರಾದ ಅಂಕಿತಾ ಕೊನ್ವಾರ್ ಮದುವೆಯಾದಾಗ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದು ಹಳೆ ವಿಷಯ. 22 ಏಪ್ರಿಲ್ 2018 ರಂದು ಅಲಿಬಾಗ್‌ನಲ್ಲಿ ಕುಟುಂಬದ ಸದಸ್ಯರು ಮತ್ತು ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ಮುದುವೆಯಾಗಿದ್ದ ಈ ಮ್ಯಾರಾಥನ್ ಜೋಡಿ ಸೋಶಿಯಲ್ ಮೀಡಿಯಾದ ಫೆವರೇಟ್ ಕಪಲ್. ಮಿಲಿಂದ್ ಮತ್ತು ಅಂಕಿತಾ ಕೊನ್ವರ್ ಮದುವೆಯಾಗಿ ಎರಡು ವರ್ಷಗಳಾಗಿದ್ದು, 300 ಮಹಡಿ ಮೆಟ್ಟಿಲುಗಳನ್ನು ಜೊತೆಯಾಗಿ ಹತ್ತುವ ಮೂಲಕ ವಿಶಿಷ್ಟವಾಗಿ ಆನಿವರ್ಸರಿ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ.