150 ಇಂಟರ್‌ವ್ಯೂನಲ್ಲಿ ಫೇಲ್ ಆಗಿದ್ದ ವ್ಯಕ್ತಿ, ಈಗ ಬರೋಬ್ಬರಿ 65000 ಕೋಟಿ ಆಸ್ತಿಯ ಮಾಲೀಕ!

Published : Oct 23, 2023, 02:34 PM ISTUpdated : Oct 23, 2023, 02:56 PM IST

ಮನಸ್ಸು ಮಾಡಿದರೆ ಯಾವುದು ಸಹ ಅಸಾಧ್ಯವಲ್ಲ ಅನ್ನೋದಕ್ಕೆ ಈ ಬಿಸಿನೆಸ್‌ ಮ್ಯಾನ್‌ ಸ್ಪಷ್ಟ ಉದಾಹರಣೆ. ಸ್ವಂತ ಬಿಸಿನೆಸ್ ಆರಂಭಿಸೋ ಪ್ಲಾನ್ ಮಾಡಿದಾಗ ಬರೋಬ್ಬರಿ 150 ಮಂದಿ ಇವರ ಆಫರ್‌ನ್ನು ರಿಜೆಕ್ಟ್ ಮಾಡಿದ್ದರು. ಆದರೆ ಸದ್ಯ ಅವರು ಭರ್ತಿ 65000 ಕೋಟಿ ಆಸ್ತಿಯ ಮಾಲೀಕರಾಗಿದ್ದಾರೆ.

PREV
18
150 ಇಂಟರ್‌ವ್ಯೂನಲ್ಲಿ ಫೇಲ್ ಆಗಿದ್ದ ವ್ಯಕ್ತಿ, ಈಗ ಬರೋಬ್ಬರಿ 65000 ಕೋಟಿ ಆಸ್ತಿಯ ಮಾಲೀಕ!

ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್, ಡ್ರೀಮ್ 11, ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಈ ಫ್ಲಾಟ್‌ಫಾರ್ಮ್‌ನ್ನು ಫ್ಯಾಂಟಸಿ ಕ್ರಿಕೆಟ್, ಹಾಕಿ, ಫುಟ್‌ಬಾಲ್ ಮತ್ತು ಇತರ ಕ್ರೀಡೆಗಳನ್ನು ಆಡಲು ಬಯಸುವ ಲಕ್ಷಾಂತರ ಭಾರತೀಯರು ಬಳಸುತ್ತಾರೆ. 2019ರಲ್ಲಿ ಸ್ಥಾಪಿತವಾದ Dream11 150 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ.

28

Dream11 ಈಗ ಜನಪ್ರಿಯ ಹೆಸರಾಗಿದ್ದರೂ, 150 ವ್ಯಾಪಾರ ಉದ್ಯಮಗಳು Dream 11ನ ವ್ಯವಹಾರ ಕಲ್ಪನೆಗೆ ಹಣವನ್ನು ನೀಡಲು ನಿರಾಕರಿಸಿದ್ದರು ಎಂದು ನಿಮಗೆ ಗೊತ್ತಿದೆಯಾ. ಉದ್ಯಮಿ ಆನಂದ್ ಜೈನ್ ಅವರ ಪುತ್ರ ಹರ್ಷ್ ಜೈನ್ ಡ್ರೀಮ್ 11 ರ ಸಹ-ಸಂಸ್ಥಾಪಕರಲ್ಲಿ ಒಬ್ಬರು.

38

ಹರ್ಷ್ ಜೈನ್ ಅವರ ತಂದೆ ಆನಂದ್ ಜೈನ್ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಆತ್ಮೀಯ ಸ್ನೇಹಿತರಾಗಿದ್ದಾರೆ ಮತ್ತು ಅವರನ್ನು ಮುಕೇಶ್ ಅಂಬಾನಿಯ 'ಎರಡನೇ ಸಹೋದರ' ಎಂದು ಕರೆಯಲಾಗುತ್ತದೆ.

48

ಆದರೆ ಆರಂಭದಲ್ಲಿ ಹರ್ಷ್ ಜೈನ್ ಬಿಸಿನೆಸ್ ಆರಂಭಿಸಲು ಪ್ಲಾನ್ ಮಾಡಿದಾಗ ಬರೋಬ್ಬರಿ 150 ಮಂದಿ ಆಫರ್‌ನ್ನು ರಿಜೆಕ್ಟ್ ಮಾಡಿದರು. ಆದರೆ ಸದ್ಯ ಹರ್ಷ ಜೈನ್ ಭರ್ತಿ 65000 ಕೋಟಿ ಆಸ್ತಿಯ ಮಾಲೀಕರಾಗಿದ್ದಾರೆ.

58

ಹರ್ಷ್ ಜೈನ್, ಮುಂಬೈನಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಗೇಮಿಂಗ್ ಮತ್ತು ಕ್ರೀಡಾ ಉತ್ಸಾಹಿಯಾಗಿದ್ದರು. ಹರ್ಷ್ ಜೈನ್ ಲಂಡನ್‌ನ ಸೆವೆನೋಕ್ಸ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಹರ್ಷ್ ಜೈನ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದ್ದಾರೆ.

68

ಹರ್ಷ್ ಜೈನ್ ಪದವಿಯನ್ನು ಮಾಡುತ್ತಿದ್ದಾಗ ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್‌ಶಿಪ್ ಮಾಡಲು ನಿರ್ಧರಿಸಿದರು. ಇದು ಅವರನ್ನು ಫ್ಯಾಂಟಸಿ ಕ್ರೀಡೆಗಳ ಮತ್ತಷ್ಟು ಅಭಿಮಾನಿಯನ್ನಾಗಿ ಮಾಡಿತು. 2008 ರಲ್ಲಿ, IPLನ್ನು ಪ್ರಾರಂಭಿಸಲಾಯಿತು. ಈ ಸಮಯದಲ್ಲಿ ಹರ್ಷ್ ಮತ್ತು ಅವರ ಸ್ನೇಹಿತ ಭವಿತ್ ಅವರು ಡ್ರೀಮ್ 11ರ ಪ್ಲಾನ್‌ನೊಂದಿಗೆ ಬಂದರು. ಹರ್ಷ್ ಜೈನ್ ಕಂಪನಿಯ ಉತ್ಪನ್ನ, ವಿನ್ಯಾಸ, ತಂತ್ರಜ್ಞಾನ ಮತ್ತು ಮಾರ್ಕೆಟಿಂಗ್‌ನ್ನು ನಿರ್ವಹಿಸುತ್ತಾರೆ. ಭವಿತ್ ಸಂಸ್ಥೆಯ ಪಾರ್ಟ್‌ನರ್‌ ಆಗಿ ಕೆಲಸ ಮಾಡುತ್ತಾರೆ.

78

2014ರಲ್ಲಿ, ಡ್ರೀಮ್ 11 1 ಮಿಲಿಯನ್ ಬಳಕೆದಾರರನ್ನು ತಲುಪಿತು. 2018ರಲ್ಲಿ ಈ ಸಂಖ್ಯೆ 45 ಮಿಲಿಯನ್ ಬಳಕೆದಾರರಿಗೆ ಏರಿತು. 2020ರಲ್ಲಿ, IPL 2020 ರ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು Dream 11 ಪಡೆದುಕೊಂಡಿತು. Dream11 ಈಗ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಜರ್ಸಿ ಪ್ರಾಯೋಜಕತ್ವವಾಗಿದೆ. Dream11 ಈಗ 65,000 ಕೋಟಿ. ರೂ. ಬೆಲೆ ಬಾಳುತ್ತದೆ.

88

ಹರ್ಷ್‌ ಜೈನ್, ರಚನಾ ಶಾ ಅವರನ್ನು ವಿವಾಹವಾದರು. ದಂಪತಿಗಳು ಕ್ರಿಶ್ ಎಂಬ ಮಗನನ್ನು ಹೊಂದಿದ್ದಾರೆ. 2021 ರಲ್ಲಿ, ಹರ್ಷ ಮತ್ತು ರಚನಾ ಅವರು ದುಬಾರಿ ಅಪಾರ್ಟ್‌ಮೆಂಟ್‌ ಖರೀದಿಸಿದಾಗ ಹೆಚ್ಚು ಸುದ್ದಿಯಾದರು. 72 ಕೋಟಿ ರೂ. ಬೆಲೆ ಬಾಳುವ ಈ ಐಷಾರಾಮಿ ಮನೆ, ಮುಕೇಶ್ ಅಂಬಾನಿಯ ಆಂಟಿಲಿಯಾ ಬಂಗಲೆಯ ಬಳಿಯಿದೆ.
 

Read more Photos on
click me!

Recommended Stories