ಅಡುಗೆಮನೆಯಲ್ಲಿರುವ ಎಣ್ಣೆಯ ಅಂಶ, ತೇವಾಂಶ ಮತ್ತು ಧೂಳು ಸ್ಟ್ಯಾಂಡ್ ಮೇಲೆ ಸೇರಿಕೊಂಡಾಗ ಅದು ಜಿಡ್ಡಾಗುತ್ತೆ. ಒದ್ದೆಯಾದ ಪಾತ್ರೆಗಳನ್ನು ಸ್ಟ್ಯಾಂಡ್ನಲ್ಲಿ ಇಡುವುದರಿಂದ ನೀರಿನ ಹನಿಗಳು ಒಣಗಿ ಬಿಳಿ ಕಲೆಗಳಾಗಿ ಉಳಿಯಬಹುದು. ಸಮಯಕ್ಕೆ ಸರಿಯಾಗಿ ಸ್ಟ್ಯಾಂಡ್ ಸ್ವಚ್ಛ ಮಾಡದಿದ್ದರೆ ಕೊಳೆ ಮತ್ತಷ್ಟು ಜಮೆಯಾಗುತ್ತದೆ.
23
ನಿಂಬೆ ಮತ್ತು ಉಪ್ಪಿನಿಂದ ಸ್ವಚ್ಛಗೊಳಿಸಿ
ಮೊದಲಿಗೆ ಸ್ಟ್ಯಾಂಡ್ನಲ್ಲಿರುವ ಎಲ್ಲಾ ಪಾತ್ರೆಗಳನ್ನು ತೆಗೆದು ಖಾಲಿ ಮಾಡಿಕೊಳ್ಳಿ. ನಂತರ ಒಂದು ಬೌಲ್ನಲ್ಲಿ ಸ್ವಲ್ಪ ಉಪ್ಪು ಮತ್ತು ಅರ್ಧ ನಿಂಬೆಯ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಬ್ರಷ್ ಸಹಾಯದಿಂದ ಸ್ಟ್ಯಾಂಡ್ ಮೇಲೆ ಹಚ್ಚಿ ಉಜ್ಜಿ. ತುಕ್ಕು ಹಿಡಿದಿರುವ ಜಾಗಗಳಿಗೂ ಇದನ್ನು ಬಳಸಬಹುದು. ಸುಮಾರು ಐದು ನಿಮಿಷ ಹಾಗೆಯೇ ಬಿಟ್ಟು, ನಂತರ ಸ್ಕ್ರಬ್ಬರ್ಗೆ ಸ್ವಲ್ಪ ಲಿಕ್ವಿಡ್ ಡಿಶ್ವಾಶ್ ಹಾಕಿ ಸ್ಟ್ಯಾಂಡ್ನ್ನು ಚೆನ್ನಾಗಿ ಉಜ್ಜಿ. ಕೊನೆಗೆ ನೀರಿನಿಂದ ತೊಳೆದು ಸ್ವಚ್ಛಗೊಳಿಸಿ.
33
ಬೇಕಿಂಗ್ ಸೋಡಾ
ಸ್ಟ್ಯಾಂಡ್ ಮೇಲೆ ಜಿಡ್ಡು, ಧೂಳು ಅಥವಾ ನೀರಿನ ಕಲೆಗಳು ಹೆಚ್ಚಾಗಿದ್ದರೆ ಬೇಕಿಂಗ್ ಸೋಡಾ ಮತ್ತು ಲಿಕ್ವಿಡ್ ಡಿಶ್ವಾಶ್ ಬಳಸಿ ಪೇಸ್ಟ್ ತಯಾರಿಸಬಹುದು. ಇದನ್ನು ಸ್ಟ್ಯಾಂಡ್ನ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಡಿ. ನಂತರ ಬ್ರಷ್ನಿಂದ ಉಜ್ಜಿ ನೀರಿನಿಂದ ತೊಳೆಯಿರಿ. ಕೊನೆಯಲ್ಲಿ ಒಣ ಬಟ್ಟೆಯಿಂದ ಸ್ಟ್ಯಾಂಡ್ನ್ನು ಸಂಪೂರ್ಣವಾಗಿ ಒರೆಸಿ. ತೇವಾಂಶ ಉಳಿದರೆ ತುಕ್ಕು ಹಿಡಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಹೀಗೆ ಸರಳವಾಗಿ ಸ್ವಚ್ಛಗೊಳಿಸಿದರೆ ನಿಮ್ಮ ಪಾತ್ರೆ ಸ್ಟ್ಯಾಂಡ್ ಮತ್ತೆ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಕಾಣುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.