ರೈಸ್​ಬಾತ್ ಸೀದು ವಾಸ್ನೆ ಬಂತಾ? ಅನ್ನ ಮೆತ್ತಗಾಗಿ ಗಂಜಿ ಆಗೋಯ್ತಾ? ಬ್ರೆಡ್​ ಪೀಸ್​ನ ಕಮಾಲ್​​ ನೋಡಿ

Published : Aug 24, 2026, 06:50 PM IST

ಬ್ರೆಡ್ ಕೇವಲ ತಿಂಡಿಗೆ ಮಾತ್ರ ಸೀಮಿತವಲ್ಲ, ಅಡುಗೆಮನೆಯಲ್ಲಿ ಆಗುವ ಎಡವಟ್ಟುಗಳನ್ನು ಸರಿಪಡಿಸಲೂ ಸಹಕಾರಿ. ರೈಸ್​ಬಾತ್​ ಸೀದು ಹೋದಾಗ ಅದರ ಕೆಟ್ಟ ವಾಸನೆ ತೆಗೆಯಲು ಮತ್ತು ಅನ್ನಕ್ಕೆ ನೀರು ಹೆಚ್ಚಾದಾಗ ಹೆಚ್ಚುವರಿ ನೀರನ್ನು ಹೀರಿಕೊಳ್ಳಲು ಬ್ರೆಡ್ ಅನ್ನು ಬಳಸಬಹುದು.

PREV
16
ಬ್ರೆಡ್​ನಿಂದ ರುಚಿಕಟ್ಟಾದ ತಿನಿಸು

ಬ್ರೆಡ್​ನಿಂದ ಹಲವು ರೀತಿಯ ರುಚಿಕಟ್ಟಾದ ತಿನಿಸು ಮಾಡಬಹುದು. ಈಗಿನ ಮಕ್ಕಳಿಗಂತೂ ಬ್ರೆಡ್​ನಿಂದ ಮಾಡಿರುವ ತಿನಿಸುಗಳೇ ಸಿಕ್ಕಾಪಟ್ಟೆ ಇಷ್ಟ ಆಗುವುದು ಇದೆ. ಇದೇ ಕಾರಣಕ್ಕೆ ಥಹರೇವಾರಿ ತಿನಿಸುಗಳನ್ನು ಬ್ರೆಡ್​ನಿಂದ ಮಾಡಲಾಗುತ್ತದೆ.

26
ಬೇರೆಯೂ ಪ್ರಯೋಜನಗಳಿವೆ

ಆದರೆ, ನಿಮಗೆ ಗೊತ್ತಾ? ಬ್ರೆಡ್​ ಕೇವಲ ತಿನಿಸು ಮಾಡಲು ಮಾತ್ರವಲ್ಲ, ಇದರಿಂದ ಬೇರೆ ಪ್ರಯೋಜನಗಳೂ ಇವೆ ಎಂದು. ಹೌದು. ಅಡುಗೆ ಮಾಡುವಾಗ ಆಗುವ ಎಡವಟ್ಟು ಸರಿ ಮಾಡುವಲ್ಲಿ ಬ್ರೆಡ್​ ಪಾತ್ರ ಬಹು ಮಹತ್ವದ್ದಾಗಿದೆ.

36
ರೈಸ್​​ಬಾತ್​ ಸೀದು ಹೋದರೆ

ರೈಸ್​ಬಾತ್​ ಮಾಡುವ ಸಮಯದಲ್ಲಿ ಕೆಲವೊಮ್ಮೆ ಸೀದುಹೋಗಿ ಅನ್ನ ತಳ ಹಿಡಿಯುತ್ತದೆ. ಆಗ ಕೆಟ್ಟ ವಾಸನೆ ಬರುತ್ತದೆ. ಇಂಥ ಸಂದರ್ಭದಲ್ಲಿ ಮಾಡಿದ ರೈಸ್​ ಬಾತ್​ ಎಲ್ಲವೂ ವೇಸ್ಟ್​ ಆಗಿಬಿಡುವ ಛಾನ್ಸ್​ ಕೂಡ ಇರುತ್ತದೆ. ಅದರ ವಾಸನೆಯಿಂದಾಗಿ ಅನ್ನವನ್ನು ಯಾರೂ ತಿನ್ನದೆಯೂ ಇರಬಹುದು.

46
ರೈಸ್​ಬಾತ್​ ಘಮಲು

ಇದಕ್ಕೆ ಉಪಾಯ ಒಂದು ಸ್ಲೈಸ್​ ಬ್ರೆಡ್​. ಒಂದು ತುಂಡು ಬ್ರೆಡ್​ ಅನ್ನು ಸೀದುಹೋದ ರೈಸ್​​ಬಾತ್​ ಮೇಲೆ ಇಟ್ಟು, ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿಡಿ. ಹೀಗೆ ಮಾಡಿದರೆ ಸೀದು ಹೋದ ವಾಸನೆ ಎಲ್ಲವೂ ಹೋಗಿ, ರೈಸ್​ಬಾತ್​ ಘಮಘಮಿಸುತ್ತದೆ.

56
ಅನ್ನಕ್ಕೆ ಹೆಚ್ಚು ನೀರು

ಸಾಮಾನ್ಯವಾಗಿ ಅನ್ನ ಮಾಡುವಾಗ ನೀರನ್ನು ಸರಿಯಾಗಿಯೇ ಸೇರಿಸುತ್ತೇವೆ. ಆದರೆ ಅಕ್ಕಿಯ ಬದಲಾವಣೆಯಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ಅನ್ನಕ್ಕೆ ನೀರು ಹೆಚ್ಚಾಗಿ ಪಿಚಿಪಿಚಿ ಆಗುವುದು ಇದೆ. ನೀರು ಹೆಚ್ಚಾಗಿ ಗಂಜಿಯ ರೂಪ ತಾಳುವುದು ಇದೆ.

66
ಸಿಂಪಲ್​ ಸಲ್ಯೂಷನ್​

ಆದರೆ ಇದಕ್ಕೆ ಸಿಂಪಲ್​ ಸಲ್ಯೂಷನ್​ ಇದೆ. ಅದೇನೆಂದರೆ, ಅನ್ನವೇನಾದರೂ ಹೀಗೆ ಆದರೆ, ಅದರ ಮೇಲೆ ಒಂದು ಪೀಸ್​ ಬ್ರೆಡ್​ ಇಟ್ಟು ಸ್ವಲ್ಪ ಹೊತ್ತು ಮುಚ್ಚಿಡಿ. ಹೆಚ್ಚು ನೀರನ್ನೆಲ್ಲಾ ಬ್ರೆಡ್​ ಹೀರಿಕೊಂಡು ಅನ್ನ ಮೃದುವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories