ಗಿಫ್ಟ್ ಬಾಕ್ಸ್ ಹಾಳಾಗದಂತೆ ಪ್ರೈಸ್ ಟ್ಯಾಗ್ ತೆಗೆಯುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

Published : Sep 13, 2026, 12:29 PM IST

How to remove stickers with iron box: ಗಿಫ್ಟ್ ಬಾಕ್ಸ್ ಅಥವಾ ಹೊಸ ಪುಸ್ತಕದ ಮೇಲಿರೋ ಪ್ರೈಸ್ ಸ್ಟಿಕ್ಕರ್ ಕಿತ್ತರೆ ಕಾಗದ ಹರಿದು ಹಾಳಾಗುತ್ತಾ? ಇನ್ಮುಂದೆ ಉಗುರಿನಲ್ಲಿ ಕೆರೆಯುವ ತಾಪತ್ರಯವೇ ಬೇಡ! ಕೇವಲ 5 ಸೆಕೆಂಡ್‌ನಲ್ಲಿ ಸ್ಟಿಕ್ಕರ್ ತೆಗೆಯುವ ಸೂಪರ್ ಟ್ರಿಕ್ ಇಲ್ಲಿದೆ ನೋಡಿ...

PREV
15
ಕೈಯಿಂದ ತೆಗಿಬೇಡಿ

ಕೈಯಿಂದ ತೆಗಿಬೇಡಿ
ರಕ್ಷಾಬಂಧನ, ಹುಟ್ಟುಹಬ್ಬ, ಮದುವೆ ಅಥವಾ ಯಾವುದೇ ಹಬ್ಬದ ಸಮಯದಲ್ಲಿ ನಾವು ಅಣ್ಣ-ತಮ್ಮಂದಿರಿಗಾಗಲಿ ಅಥವಾ ಸ್ನೇಹಿತರಿಗಾಗಲಿ ಗಿಫ್ಟ್, ಸ್ವೀಟ್ಸ್ ಅಥವಾ ರಾಖಿ ಬಾಕ್ಸ್ ಕಳುಹಿಸುವುದು ವಾಡಿಕೆ. ಆದರೆ, ಆ ಗಿಫ್ಟ್ ಪ್ಯಾಕ್ ಮೇಲೆ ಬೆಲೆ (Price Tag / MRP) ಎದ್ದು ಕಾಣುತ್ತಿದ್ದರೆ ಕೊಡುವಾಗ ಮುಜುಗರವಾಗುವುದು ಸಹಜ. ಕೈಯಿಂದ ಆ ಸ್ಟಿಕ್ಕರ್ ಅಥವಾ ಪ್ರಿಂಟ್ ಕೆರೆದು ತೆಗೆಯಲು ಹೋದರೆ ಬಾಕ್ಸ್ ಹಾಳಾಗುತ್ತದೆ. ಆದರೆ, ಇನ್ಮುಂದೆ ಯಾವುದೇ ಗಿಫ್ಟ್ ಬಾಕ್ಸ್ ಹಾಳಾಗದಂತೆ ಕೇವಲ 5 ಸೆಕೆಂಡುಗಳಲ್ಲಿ ಬೆಲೆಯ ಪ್ರಿಂಟ್ ಅಥವಾ ಸ್ಟಿಕ್ಕರ್ ಅನ್ನು ಸಂಪೂರ್ಣವಾಗಿ ಅಳಿಸಿಹಾಕುವ 2 ಸೂಪರ್ ಸಿಂಪಲ್ ಟ್ರಿಕ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

25
1. ನೇಲ್ ಪಾಲಿಶ್ ರಿಮೂವರ್ (Nail Polish Remover)

1. ನೇಲ್ ಪಾಲಿಶ್ ರಿಮೂವರ್ (Nail Polish Remover)
ಹೆಣ್ಣುಮಕ್ಕಳ ಬಳಿ ಸಾಮಾನ್ಯವಾಗಿ ನೇಲ್ ಪಾಲಿಶ್ ರಿಮೂವರ್ ಅಥವಾ ರಿಮೂವರ್ ವೈಪ್ಸ್ (Wipes) ಇದ್ದೇ ಇರುತ್ತದೆ. ಸ್ವಲ್ಪ ಹತ್ತಿಯ ಮೇಲೆ ನೇಲ್ ಪಾಲಿಶ್ ರಿಮೂವರ್ ದ್ರಾವಣವನ್ನು ಹಾಕಿ. ನಂತರ ಬೆಲೆ ಪ್ರಿಂಟ್ ಆಗಿರುವ ಜಾಗದ ಮೇಲೆ ಲಘುವಾಗಿ ಉಜ್ಜಿ (ವೈಪ್ ಮಾಡಿ). ಕ್ಷಣಾರ್ಧದಲ್ಲಿ ಆ ಪ್ರಿಂಟ್ ಅಥವಾ ಜಿಗುಟಾದ ಅಂಟು ಸ್ವಲ್ಪವೂ ಕಲೆ ಉಳಿಯದಂತೆ ಕ್ಲೀನ್ ಆಗಿ ಮಾಯವಾಗುತ್ತದೆ!

35
2. ಪರ್ಫ್ಯೂಮ್ (Perfume / Body Spray)

2. ಪರ್ಫ್ಯೂಮ್ (Perfume / Body Spray)
ಮನೆಯಲ್ಲಿ ನೇಲ್ ಪಾಲಿಶ್ ರಿಮೂವರ್ ಇಲ್ಲದಿದ್ದರೆ ಪರ್ಫ್ಯೂಮ್ ಬಳಸಿ ಈ ಕೆಲಸ ಮಾಡಬಹುದು. ಬೆಲೆ ಬರೆದಿರುವ ಜಾಗಕ್ಕೆ ಸ್ವಲ್ಪ ಪರ್ಫ್ಯೂಮ್ ಅಥವಾ ಬಾಡಿ ಸ್ಪ್ರೇ ಸಿಂಪಡಿಸಿ. ನಂತರ ಒಂದು ಒಣ ಟಿಶ್ಯೂ ಪೇಪರ್ ಅಥವಾ ಕಾಟನ್ ಬಟ್ಟೆಯಿಂದ ಒರೆಸಿದರೆ ಸಾಕು, ಬೆಲೆಯ ಅಕ್ಷರಗಳು ಸುಲಭವಾಗಿ ಅಳಿಸಿಹೋಗುತ್ತವೆ.

45
3. ಇಸ್ತ್ರಿ ಪೆಟ್ಟಿಗೆ

3. ಇಸ್ತ್ರಿ ಪೆಟ್ಟಿಗೆ
ಐರನ್ ಬಾಕ್ಸ್ ಸಹಾಯದಿಂದ ಗಿಫ್ಟ್ ಬಾಕ್ಸ್ ಅಥವಾ ಪುಸ್ತಕಗಳ ಮೇಲಿನ ಪ್ರೈಸ್ ಸ್ಟಿಕ್ಕರ್ ತೆಗೆಯುವ ಅತ್ಯಂತ ಸುಲಭ ವಿಧಾನ ಇಲ್ಲಿದೆ. ಸ್ಟಿಕ್ಕರ್ ಇರುವ ಜಾಗದ ಮೇಲೆ ಒಂದು ತೆಳುವಾದ ಬಿಳಿ ಕಾಗದ (Paper) ಅಥವಾ ಹತ್ತಿ ಬಟ್ಟೆಯನ್ನು ಇಡಿ (ಇದು ಬಾಕ್ಸ್ ಸೀದುಹೋಗದಂತೆ ರಕ್ಷಿಸುತ್ತದೆ). ಹಗುರವಾಗಿ ಬಿಸಿ ಮಾಡಿದ ಇಸ್ತ್ರಿ ಪೆಟ್ಟಿಗೆಯನ್ನು ಆ ಕಾಗದದ ಮೇಲೆ ಇಟ್ಟು ಕೇವಲ 5 ರಿಂದ 10 ಸೆಕೆಂಡುಗಳ ಕಾಲ ಪ್ರೆಸ್ ಮಾಡಿ. ತಕ್ಷಣ ಇಸ್ತ್ರಿ ಪೆಟ್ಟಿಗೆಯನ್ನು ತೆಗೆದು ನೋಡಿ; ಶಾಖಕ್ಕೆ ಒಳಗಿನ ಅಂಟು (ಗಮ್) ಕರಗಿರುತ್ತದೆ, ಈಗ ಬೆರಳಿನಿಂದ ನಿಧಾನವಾಗಿ ಎಳೆದರೆ ಸ್ಟಿಕ್ಕರ್ ಯಾವುದೇ ಕಲೆ ಉಳಿಯದೆ ಬೆಣ್ಣೆಯಂತೆ ಸುಲಭವಾಗಿ ಕಿತ್ತು ಬರುತ್ತದೆ.

55
ಇನ್ಮೇಲೆ ಟೆನ್ಷನ್ ಪಡುವ ಅಗತ್ಯವೇ ಇಲ್ಲ

ಇನ್ಮೇಲೆ ಟೆನ್ಷನ್ ಪಡುವ ಅಗತ್ಯವೇ ಇಲ್ಲ
ಇದು ಕೇವಲ ರಾಖಿ ಅಥವಾ ಸ್ವೀಟ್ ಬಾಕ್ಸ್‌ಗೆ ಮಾತ್ರವಲ್ಲ, ನೀವು ಯಾವುದೇ ವಸ್ತುವನ್ನು ಗಿಫ್ಟ್ ನೀಡುವ ಮುನ್ನ ಅದರ ಮೇಲಿರುವ ಪ್ರೈಸ್ ಟ್ಯಾಗ್ ಅಳಿಸಲು ಈ ಟ್ರಿಕ್ ಬಳಸಬಹುದು. ಇನ್ಮುಂದೆ ಯಾರಿಗಾದರೂ ಉಡುಗೊರೆ ನೀಡುವಾಗ ಬೆಲೆ ಕಾಣುತ್ತೆ ಅನ್ನೋ ಟೆನ್ಷನ್ ಪಡುವ ಅಗತ್ಯವೇ ಇಲ್ಲ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories