Pashmina Shawls: ಸೆಲೆಬ್ರಿಟಿಗಳು, ಸ್ಟಾರ್ ನಟರು, ರಾಜಕಾರಣಿಗಳು ಲಕ್ಷಾಂತರ ರೂಪಾಯಿ ಕೊಟ್ಟು ಈ ಶಾಲು ಖರೀದಿಸುವುದೇಕೆ?

Published : Nov 28, 2026, 11:00 AM IST

Pashmina Shawls cost ಚಳಿಗಾಲ ಆರಂಭವಾಗುತ್ತಿದ್ದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ನಟ-ನಟಿಯರು, ಮಾಡೆಲ್‌ಗಳು ಓಡಾಡುವಾಗ ಅವರ ಮೈಮೇಲೆ ದೊಡ್ಡದಾದ ಉಣ್ಣೆಯ ಶಾಲು ಕಂಡುಬರುತ್ತದೆ. ಇದು ಸಾಮಾನ್ಯ ಶಾಲು ಅಲ್ಲ, ಪಶ್ಮಿನಾ ಶಾಲು! ಇದು ಹೇಗೆ ತಯಾರಿಸಲಾಗುತ್ತೆ, ವಿಶೇಷತೆಗಳೇನು ತಿಳಿಯೋಣ.

PREV
14
Pashmina Shawls: ಚಳಿಗಾಲದಲ್ಲಿ ಇದೊಂದು ಶಾಲು ಸಾಕು, ಯಾವ ಸ್ವೆಟರೂ ಬೇಕಾಗಿಲ್ಲ!

Pashmina Shawls cost: ಚಳಿಗಾಲ ಆರಂಭವಾಗುತ್ತಿದ್ದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ನಟ-ನಟಿಯರು, ಮಾಡೆಲ್‌ಗಳು ಓಡಾಡುವಾಗ ಅವರ ಮೈಮೇಲೆ ದೊಡ್ಡದಾದ ಉಣ್ಣೆಯ ಶಾಲು ಕಂಡುಬರುತ್ತದೆ. ಇದು ಸಾಮಾನ್ಯ ಶಾಲು ಅಲ್ಲ, ಪಶ್ಮಿನಾ ಶಾಲು!

ದೇಹದೊಳಗಿನ ಮೂಳೆಗಳನ್ನ ಹಿಡಿದು ಎಳೆದಂತಹ ತೀವ್ರ ಚಳಿಯಲ್ಲಿ ಹಗುರವಾದ, ಅಷ್ಟೇ ಚಳಿಯಿಂದ ತಡೆಯುವ, ಮೈಬೆಚ್ಚಗಿಡುವ ಶಾಲು ಇದು. ಇದು ಸಾಮಾನ್ಯ ಶಾಲುಗಳಂತಲ್ಲ, ಪಶ್ಮಿನಾ ಶಾಲುಗಳಿಗೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಅಂತಹ ಶಾಲು ಹಾಕುವುದೇ ಒಂದು ಪ್ರತಿಷ್ಠೆಯಾಗಿದೆ. ತುಂಬಾ ಹಗುರವಾಗಿದ್ದರೂ ಚಳಿಗಾಲದಲ್ಲಿ ದೇಹ ಬೆಚ್ಚಗಿಡುತ್ತದೆ. ಆದರೆ ಅದರ ಗುಣಮಟ್ಟ ಉತ್ಕೃಷ್ಟವಾಗಿರುವುದರಿಂದ ಅದರ ಬೆಲೆಯೂ ದುಬಾರಿ. ಚಳಿಗಾಲದಲ್ಲಿ ಲಕ್ಷ ಲಕ್ಷ ರೂಪಾಯಿಗೆ ಬಿಕರಿಯಾಗುತ್ತದೆ. ಪಶ್ಮಿನಾ ಶಾಲು ಹೇಗೆ ತಯಾರಿಸಲಾಗುತ್ತೆ ಅದರ ವಿಶೇಷತೆ ಏನು ಇಲ್ಲಿ ತಿಳಿಯೋಣ.

24
ಪಶ್ಮಿನಾ ಶಾಲು ತಯಾರಿಸುವ ಚಂಗ್ಥಂಗಿ ಮೇಕೆ(Changthangi Goat) ಎಲ್ಲಿ ಸಿಗುತ್ತೆ?

ಪಶ್ಮಿನಾ ಶಾಲು ಅದರ ತಯಾರಿಸುವ ವಿಧಾನವೇ ಇತರೆ ಶಾಲುಗಳಿಗಿಂತ ಗುಣಮಟ್ಟದಲ್ಲೂ, ನೋಟದಲ್ಲೂ ವಿಭಿನ್ನವಾಗಿಸುತ್ತದೆ. ಏಕೆಂದರೆ ಪಶ್ಮಿನಾ ಶಾಲು ಬಟ್ಟೆಯಿಂದ ತಯಾರಿಸುವ ಶಾಲು ಖಂಡಿತ ಅಲ್ಲ. ಇದಕ್ಕಾಗಿ ವಿಶೇಷವಾದ ಉಣ್ಣೆ ಇದೆ. ಈ ವಿಶೇಷ ಉಣ್ಣೆಯು ಎಲ್ಲ ಕಡೆಯೂ ಸಿಗುವುದಿಲ್ಲ. ಇದಕ್ಕಾಗಿ ಲಡಾಖ್‌ನ ಚಾಂಗ್‌ಥಾಂಗ್ ಪ್ರದೇಶಕ್ಕೆ ಹೋಗಬೇಕಾಗುತ್ತೆ. ಏಕೆಂದರೆ ಪಶ್ಮಿನಾ ಶಾಲು ತಯಾರಿಕೆಗೆ ಬಳಸುವ ಉಣ್ಣೆಯು ಅಲ್ಲಿನ ಚಂಗ್ಥಂಗಿ ಮೇಕೆ(Changthangi Goat)ಯಿಂದ ಪಡೆಯಲಾಗುತ್ತೆ. ಈ ಮೇಕೆ ಸುಲಭಕ್ಕೆ ಸಿಗುವಂತದ್ದಲ್ಲ.

ಲಡಾಖ್‌ನ ಚಾಂಗ್‌ಥಾಂಗ್ ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 14,000 ಅಡಿ ಎತ್ತರದಲ್ಲಿದೆ. ಅಲ್ಲಿನ ರಕ್ತ ಹೆಪ್ಪುಗಟ್ಟುವಂತಹ ಶೀತದಲ್ಲೂ ಸಹ ಚಾಂಗ್ರಾ ಮೇಕೆ ಎಂದು ಕರೆಯಲ್ಪಡುವ ಚಾಂಗ್‌ಥಾಂಗಿ ಮೇಕೆ ಸುಲಭವಾಗಿ ಬದುಕುಳಿಯುತ್ತೆದೆಂದರೆ ಅದಕ್ಕೆ ಕಾರಣ ಅದರ ವಿಶಿಷ್ಟ ಉಣ್ಣೆ! ಈ ಮೇಕೆಯ ದೇಹ ಎರಡು ಲೇಯರ್‌ನ ಉಣ್ಣೆ ಹೊಂದಿರುತ್ತದೆ. ಹೊರಗೆ ಒರಟಾಗಿರುತ್ತೆ ಇದು ಶೀತಗಾಳಿಯಿಂದ ದೇಹ ರಕ್ಷಿಸುತ್ತದೆ. ಅತ್ಯಂತ ನುಣುಪಾದ ಒಳಗಿನ ಉಣ್ಣೆಯಿಂದ ಪಶ್ಮಿನಾ ತಯಾರಿಕೆಗೆ ಬಳಸಲಾಗುತ್ತದೆ.

34
ಚಂಗ್ಥಂಗಿ ಮೇಕೆಯಿಂದ ಉಣ್ಣೆ ಹೇಗೆ ತೆಗೆಯಲಾಗುತ್ತೆ?

ಪಶ್ಮಿನಾ ಶಾಲು ತಯಾರಿಸಲು ಚಾಂಗ್‌ಥಾಂಗಿ ಮೇಕೆ ಉಣ್ಣೆ ಬೇಕು. ಹಾಗಾಂತ ಶಾಲು ತಯಾರಿಸಲು ಮೇಕೆಗಳನ್ನ ಕೊಲ್ಲಲಾಗುತ್ತದೆ ಎಂದಲ್ಲ, ಇದಕ್ಕಾಗಿ ಮೇಕೆಗಳನ್ನ ಕೊಲ್ಲುವುದಿಲ್ಲ. ಬದಲಾಗಿ ಚಳಿಗಾಲ ಮುಗಿದು ಬೇಸಿಗೆ ಕಾಲ ಶುರುವಾಗ್ತಿದ್ದಂತೆ ಮೇಕೆಗಳ ಒಳಗಿನ ನುಣುಪಾದ ಉಣ್ಣೆ ಸ್ವಾಭಾವಿಕವಾಗಿ ಉದುರಿಹೋಗುತ್ತದೆ. ಇಲ್ಲದಿದ್ದರೆ ಕುರಿ ಸಾಕಾಣಿಕೆದಾರರು ಅಥವಾ ಕುರುಬರು ಅವುಗಳನ್ನು ವಿಶಿಷ್ಟವಾದ ಮರದಿಂದ ತಯಾರಿಸಿದ ಅಥವಾ ಲೋಹದಿಂದ ತಯಾರಿಸಿದ ಬಾಚಣಿಕೆಗಳಿಂದ ಬಾಚುವ ಮೂಲಕ ಉಣ್ಣೆ ತೆಗೆದುಹಾಕುತ್ತಾರೆ.

ಸಾಮಾನ್ಯವಾಗಿ ಈ ಕೆಲಸ ಮೇ, ಜುಲೈ ತಿಂಗಳ ನಡುವೆ ನಡೆಯುತ್ತದೆ. ಪ್ರತಿಯೊಂದು ಮೇಕೆ ವರ್ಷಕ್ಕೆ ಸರಾಸರಿ 150 ರಿಂದ 250 ಗ್ರಾಂ ಫೈಬರ್ ನೀಡುತ್ತೆ. ಹೀಗೆ ಸಂಗ್ರಹಿಸಿದ ಉಣ್ಣೆ ಸ್ವಚ್ಛಗೊಳಿಸಿ ನಂತರ ನಾರುಗಳನ್ನಾಗಿ ಮಾಡಿ ನೂಲುವುದು, ಇಲ್ಲದಿದ್ರೆ ಕೈಯಿಂದಲೇ ನೇಯ್ಗೆ ಮಾಡಲಾಗುತ್ತದೆ ಕೆಲವರು ಮನೆಯಲ್ಲೇ ಶಾಲುಗಳನ್ನು ತಯಾರಿಸಿದರೆ, ಇನ್ನು ಕೆಲವರು ಉಣ್ಣೆಯನ್ನ ಇತರೆ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತೆ. ಹೀಗೆ ಖರೀದಿಸಿ ಉಣ್ಣೆಯಿಂದ ಪಶ್ಮಿನಾ ಶಾಲು ತಯಾರಿಲಾಗುತ್ತದೆ. ಪಶ್ಮಿನಾ ಶಾಲು ತಯಾರಿಸುವ ಪ್ರಕ್ರಿಯೆಗೆ ವಾರಗಟ್ಟಲೇ ಸಮಯ ಬೇಡುತ್ತದೆ ಇದಕ್ಕಾಗಿಯೇ ಪಶ್ಮಿನಾ ಶಾಲು ದುಬಾರಿ.

44
ಪಶ್ಮಿನಾ ಶಾಲು ಲಕ್ಷ ಲಕ್ಷ ರೂಪಾಯಿ ಮಾರಾಟ!

ಪಶ್ಮಿನಾ ತಯಾರಿಸಲು ಬೇಕಾದ ಉಣ್ಣೆಯು ಸಾಮಾನ್ಯ ಉಣ್ಣೆಗಿಂತ ಹೆಚ್ಚು ಸೂಕ್ಷ್ಮವು, ಹಗುರವೂ ಆಗಿದೆ. ಇದು ಸುಮಾರು 12 ರಿಂದ 16 ಮೈಕ್ರಾನ್‌ಗಳಷ್ಟು ಮಾತ್ರ ದಪ್ಪ ಇರುತ್ತದೆ. ಒಂದು ಮೈಕ್ರಾನ್ ಮೀಟರ್‌ ಎಂದರೆ ಮಿಲಿಯನ್‌ನ ಒಂದು ಭಾಗಕ್ಕೆ ಸಮ. ಕಲ್ಪಿಸಿಕೊಳ್ಳಿ ಈ ಉಣ್ಣೆ ಅದೆಷ್ಟು ನುಣುಪಾಗಿರುತ್ತದೆಂಬುದು. ಇದರ ನುಣುಪಾದ ಗುಣದಿಂದ ಪಶ್ಮಿನಾವನ್ನು ನಂಬಲು ಆಗದಷ್ಟು ಮೃದು ಮತ್ತು ಹಗುರವಾಗಿಸುತ್ತದೆ. ಪಶ್ಮಿನಾ ಶಾಲು ಕಡಿಮೆ ತೂಕ,, ಎಲ್ಲೆಡೆ, ಯಾವಾಗಲೂ ಸಿಗದಿರುವುದು, ಕೇವಲ ನುರಿತ ಕುಶಲಕರ್ಮಿಗಳಿಂದ ಮಾತ್ರ ತಯಾರಿಸಬಹುದಾದು ಆದ್ದರಿಂದ ದುಬಾರಿ ಬೆಲೆ ಮಾರಾಟವಾಗುತ್ತದೆ.

ಪಶ್ಮಿನಾ ಶಾಲು ತಯಾರಿಕೆ ಪರಿಶ್ರಮ ಬೇಡುತ್ತದೆ

ಪಶ್ಮಿನಾ ಶಾಲು ತಕ್ಷಣ ತಯಾರಿಸುವಂತದ್ದಲ್ಲ. ಉಣ್ಣೆಯಿಂದ ಶಾಲು ತಯಾರಿಸುವವರೆಗೆ ಪ್ರಕ್ರಿಯೆಗೆ ವಾರಗಳ ಕಾಲ ಸಮಯ ಬೇಕಾಗುತ್ತದೆ. ಲಡಾಖ್‌ನಲ್ಲಿ, ಚಂಗ್ಥಂಗಿ ಮೇಕೆಗಳನ್ನು ಸಾಕುವ ಅಲೆಮಾರಿಗಳಾಗಿ ಜೀವನ ನಡೆಸುವ ಚಾಂಗ್ಪಾ ಸಮುದಾಯವು ಈ ಉಣ್ಣೆಯ ಮೇಲೆ ಜೀವನ ಅವಲಂಬಿಸಿದೆ. ಮೇಕೆಯಿಂದ ಉಣ್ಣೆಯನ್ನು ಸಂಗ್ರಹಿಸಿದ ನಂತರ, ಲಡಾಖ್ ಮತ್ತು ಕಾಶ್ಮೀರದ ಕುಶಲಕರ್ಮಿಗಳು, ವಿಶೇಷವಾಗಿ ಕಾಶ್ಮೀರದ ಸಾಂಪ್ರದಾಯಿಕ ನೇಯ್ಗೆ ಮತ್ತು ಕಸೂತಿ, ಶಾಲು ತಯಾರಕರು ಖರೀದಿಸಿ ನಂತರ ತಮಗೆ ಬೇಕಾದ ಸೂಕ್ಷ್ಮ ಉತ್ಪನ್ನಗಳಲ್ಲಿ ಬಳಸಿಕೊಳ್ಳುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories