ಪರ್ಫೆಕ್ಟ್‌ ಅವರೆಕಾಳು ಉಪ್ಪಿಟ್ಟು ಮಾಡಲು ಈ ಟಿಪ್ಸ್ ಫಾಲೋ ಮಾಡಿ Hitikida Avarekalu

Published : Nov 27, 2026, 09:02 PM IST

ಮಾರುಕಟ್ಟೆಯಲ್ಲಿ ಅವರೆಕಾಳು ಸೀಸನ್ ಶುರುವಾಗಿದ್ದು, ರುಚಿಯಾದ ಉಪ್ಪಿಟ್ಟು ಮಾಡಲು ಕೆಲವು ವಿಧಾನಗಳನ್ನು ಪಾಲಿಸಬೇಕು. ಕಾಳನ್ನು ನೆನೆಸಿ, ಸಿಪ್ಪೆ ತೆಗೆದು ಬೇಯಿಸಿ ಬಳಸಬೇಕು ಹಾಗೂ ಬೇರೆ ತರಕಾರಿಗಳನ್ನು ಸೇರಿಸಬಾರದು.

PREV
15
ಅವರೆಕಾಳು ಉಪ್ಪಿಟ್ಟು

ಮಾರುಕಟ್ಟೆಗೆ ಅವರೆಕಾಳು ಕಾಲಿಟ್ಟಿದ್ದು, ಸೀಸನ್ ಆರಂಭವಾಗಿದೆ. ಹಾಗಾಗಿ ಮನೆಗಳಲ್ಲಿ ಅವರೆಕಾಳು ಪರಮಳ ಹರಡುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಅವರೆಕಾಳು ಉಪ್ಪಿಟ್ಟು ಮಾಡುತ್ತಾರೆ. ಅವರೆಕಾಳು ಉಪ್ಪಿಟ್ಟು ಮಾಡುವ ಸಂದರ್ಭದಲ್ಲಿ ಕೆಲವು ವಿಧಾನ ಪಾಲಿಸಿದ್ರೆ ಅದು ರುಚಿಕರವಾಗುತ್ತದೆ. ಆ ಸಲಹೆಗಳು ಏನು ಗೊತ್ತಾ?

25
ಅವರೆಕಾಳು

ಮಾರುಕಟ್ಟೆಯಿಂದ ತೆಗೆದುಕೊಂಡು ಬಂದ ಅವರೆಕಾಳನ್ನು ನೇರವಾಗಿ ಉಪ್ಪಿಟ್ಟು ತಯಾರಿಸಲು ಹಾಕಬಾರದು. ಅದಕ್ಕಿಂತ ಮೊದಲು ಅವರೆಕಾಳುಗಳನ್ನು ಸಿಪ್ಪೆಯಿಂದ ಬಿಡಿಸಿಕೊಳ್ಳಬೇಕು. ನಂತರ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಅವರೆಕಾಳುಗಳನ್ನು ನೆನೆಸಿಟ್ಟುಕೊಳ್ಳಬೇಕು. ನಂತರ ಅವರೆಕಾಳು ಮೇಲಿನ ಸಿಪ್ಪೆ ಬಿಡಿಸಿಕೊಳ್ಳಿ.

35
ಬೇಯಿಸಿಕೊಳ್ಳಿ

ಈ ರೀತಿಯಾಗಿ ಬಿಡಿಸಿಕೊಂಡ ಅವರೆಕಾಳನ್ನು 5 ರಿಂದ 10 ನಿಮಿಷ ಬಿಸಿನೀರಿನಲ್ಲಿ ಬೇಯಿಸಿಕೊಳ್ಳಿ. ಇಲ್ಲವಾದ್ರೆ ಉಪ್ಪಿಟ್ಟಿನಲ್ಲಿ ಸೇರಿಸಿರುವ ಅವರೆಕಾಳು ಸರಿಯಾಗಿ ಸಾಫ್ಟ್ ಆಗದೇ ಹಸಿಯಾಗಿರುತ್ತದೆ. ಇದರಿಂದ ಉಪ್ಪಿಟ್ಟು ಅವರೆಕಾಳಿನ ರುಚಿಯೂ ಬರಲ್ಲ. ಅವರೆಕಾಳು ಬೇಯಿಸಿಕೊಂಡ ನೀರನ್ನೇ ಉಪ್ಪಿಟ್ಟು ಮಾಡಲು ಬಳಸಿಕೊಳ್ಳಿ.

45
ಅವರೆಕಾಳು ಬಿಡಿಸಿಕೊಳ್ಳಿ

ಅವರೆಕಾಳು ದ್ವಿದಳ ಧಾನ್ಯವಾಗಿದ್ದು, ಎರಡು ಸಮ ಭಾಗವಾಗುತ್ತದೆ. ಹೀಗೆ ಬಿಡಿಸಿಕೊಂಡ ಅವರೆಕಾಳನ್ನು ಉಪ್ಪಿಟ್ಟಿನ ಒಗ್ಗರಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದರಿಂದ ಅವರೆಕಾಳು ಸಾಫ್ಟ್ ಆಗುತ್ತದೆ. ಅವರೆಕಾಳು ರವೆಯಲ್ಲಿ ಚೆನ್ನಾಗಿ ಬಂದು ಟೇಸ್ಟ್ ಹೆಚ್ಚಾಗುತ್ತದೆ. ಅವರೆಕಾಳು ಬೇಳೆ ಅಥವಾ ಅವರೆಕಾಳು, ಈ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನೋದು ನಿಮ್ಮ ನಿರ್ಧಾರವಾಗುತ್ತದೆ .

55
ಇತರೆ ತರಕಾರಿ ಬೇಡ

ಅವರೆಕಾಳು ಉಪ್ಪಿಟ್ಟು ಮಾಡುವಾಗ ಇನ್ನಿತರ ಯಾವುದೇ ತರಕಾರಿ ಸೇರಿಸಿಕೊಳ್ಳಬೇಕು. ಕೆಲವರು ಬಟಾಣಿ, ಕ್ಯಾರಟ್, ಬೀನ್ಸ್ ಸೇರಿದಂತೆ ಇನ್ನಿತರ ತರಕಾರಿಗಳನ್ನು ಸೇರಿಸಿಕೊಳ್ಳುತ್ತಾರೆ. ಹೆಚ್ಚು ತರಕಾರಿ ಸೇರಿಸಿಕೊಳ್ಳೋದರಿಂದ ಉಪ್ಪಿಟ್ಟಿನ ನಿಜವಾದ ರುಚಿ ಗೊತ್ತಾಗಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories