ಪ್ರತಿ ಪ್ರಯಾಣದ ಬಳಿಕ ವೈಟ್ ಶೂ ಹೊಚ್ಚ ಹೊಸದಾಗಿ ಕಾಣಲು ಹೀಗೆ ಮಾಡಿ ಸಾಕು

Published : Sep 04, 2026, 09:42 PM IST

ವೈಟ್ ಶೂಗಳಲ್ಲಿ ಸಣ್ಣ ಕೊಳೆಯಾದರೂ ಎದ್ದು ಕಾಣುತ್ತದೆ. ವೈಟ್ ಶೂ ಶುಭ್ರವಾಗಿದ್ದರೆ ಮಾತ್ರ ಉತ್ತಮ. ನೀರಿನಲ್ಲಿ ತೊಳೆದರೂ ಉಜ್ಜಿ ತೊಳೆದರೂ ಬಿಳಿಯಾಗುತ್ತಿಲ್ಲವೇ, ಹಾಗಾದರೆ ಹೀಗೆ ಮಾಡಿದರೆ ಮತ್ತೊ ಬ್ರ್ಯಾಂಡ್ ಹೊಸ ಶೂ ರೀತಿ ಕಾಣಲಿದೆ.

PREV
15
ಬಿಳಿ ಶೂ ಕ್ಲೀನ್ ಮಾಡುವುದು ಹೇಗೆ

ಬಳಿ ಶೂ ಅಥವಾ ಯಾವುದೇ ಶೂ ಬಳಸುವುದು ದೊಡ್ಡದಲ್ಲ, ಆದರೆ ಅದನ್ನು ಹೇಗೆ ಸ್ವಚ್ಚಗೊಳಿಸುತ್ತೀರಿ ಅನ್ನೋದು ಮುಖ್ಯ. ಕಾರಣ ಬಿಳಿ ಶೂಗಳು ಬೇಗನೆ ಕೊಳೆಯಾಗುತ್ತದೆ. ಒಂದು ಬಾರಿ ಹಾಕಿದರೆ ಕೊಳೆಯಾಗಿ, ಧೂಳು ಹಿಡಿದು ಹಳೇ ಶೂ ರೀತಿ ಕಾಣುತ್ತದೆ. ಬಿಳಿ ಶೂಗಳು ಮತ್ತೆ ಹೊಸ ಬ್ರ್ಯಾಂಡ್ ಶೂ ರೀತಿ ಕಾಣಲು ಸ್ವಚ್ಚಗೊಳಿಸುವ ವಿಧಾನವಿದೆ. ಲೆದರ್ ಶೂ ಆಗಿದ್ದರೆ ನೆನೆಸಬಾರದು, ಕ್ಯಾನ್ವಾಸ್ ಶೂ ನೀರು, ಮೈಲ್ಡ್ ಡಿಟರ್ಜೆಂಟ್ ಮೂಲಕ ತೊಳೆಯಬಹುದು. ಸುಲಭವಾಗಿ ಬಿಳಿ ಶೂ ಹೊಸದಾಗಿ ಕಾಣಲು ಟಿಪ್ಸ್ ಇಲ್ಲಿದೆ.

25
ಬೇಕಿಂಗ್ ಸೋಡಾ

ಎಣ್ಣೆ ಸೇರಿದಂತ ತೇವಾಂಶದ ಜೊತೆ ಕೊಳೆ ಬಿಳಿ ಶೂ ಮೇಲೆ ಮೆತ್ತಿಕೊಂಡರೆ ಹೋಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮೊದಲು ನೀರು ಹಾಕಿ ತೊಳೆಯಲು ಹೋಗಬೇಡಿ. ಬದಲಾಗಿ ಬೇಕಿಂಗ್ ಸೋಡಾ, ಕಾರ್ನ್ ಸ್ಟಾರ್ಚ್ ಅಥವಾ ಬೇಬಿ ಪೌಡರ್ ಚಿಮುಕಿಸಿ ಕೆಲ ಹೊತ್ತು ಬಿಡಿ, ಬಳಿಕ ಬ್ರಶ್ ಮೂಲಕ ತೊಳೆದರೆ ಶುಭ್ರವಾಗುತ್ತದೆ.

35
ಡ್ರೈ ಬ್ರಷ್ ಮೂಲಕ ಸ್ವಚ್ಚ

ಬಿಳಿ ಶೂಗಳ ಮೇಲಿನ ಧೂಳು ಸೇರಿದಂತೆ ಸಣ್ಣ ಮಣ್ಣಿನ ಕಣಗಳನ್ನು ತೆಗೆದು ಶೂ ತೊಳೆಯಬೇಕು. ಇದಕ್ಕಾಗಿ ಡ್ರೈ ಬ್ರಷ್ ಬಳಸಿದರೆ ಉತ್ತಮ. ಇಷ್ಟೇ ಅಲ್ಲ ಶೂನ ಯಾವುದೇ ಭಾಗಗಕ್ಕೂ ಬ್ರಶ್ ಮೂಲಕ ಸ್ವಚ್ಚಗೊಳಿಸಲು ಸಾಧ್ಯವಾಗುತ್ತದೆ. ಉತ್ತಮ ಮೈಲ್ಡ್ ಡಿಟರ್ಜೆಂಟ್ ಮೂಲಕ ಬ್ರಶ್ ಬಳಸಿ ಸ್ವಚ್ಚವಾಗಿ ತೊಳೆದರೆ ಹೊಸದಾಗಿ ಕಾಣಲಿದೆ.

45
ಸ್ಯೂಡ್ ಬಳಸಿ ಕ್ಲೀನ್

ಬಿಳಿ ಶೂಗಳನ್ನು ತೊಳೆಯಲು,ಸ್ವಚ್ಚಗೊಳಿಸಲು ಸ್ಯೂಡ್ , ಸ್ಯೂಡ್ ಲಿಕ್ವಿಡ್ ಲಭ್ಯವಿದೆ. ಇದನ್ನು ಬಿಳಿ ಶೂ ಮೇಲೆ ಹಾಕಿ ಕೆಲ ಹೊತ್ತು ಬಿಟ್ಟು ಬ್ರಶ್ ಹಾಗೂ ನೀರಿನ ಮೂಲಕ ತೊಳೆದರು ಶುಭ್ರವಾಗುತ್ತದೆ. ಇಷ್ಟೇ ಅಲ್ಲ ಹೊಸ ಶೂ ರೀತಿ ಹೊಳೆಯುತ್ತದೆ. ಇದರಿಂದ ಎಷ್ಟೇ ಹಳೇಯದಾಗಿದ್ದರೂ ಶೂ ಹೊಸ ರೀತಿ ಕಾಣಲಿದೆ.

55
ಬಿಳಿ ಶೂ ಪಾಲಿಶ್

ಬ್ಲಾಕ್ ಶೂಗಳಿಗೆ ಪಾಲಿಶ್ ಇರುವ ರೀತಿ ಬಳಿ ಶೂಗಳಿಗೆ ಪಾಲಿಶ್ ಹಾಗೂ ಸ್ಪ್ರೇ ಲಭ್ಯವಿದೆ. ಇದು ಶೂವನ್ನು ಮತ್ತೆ ಹೊಳೆಯುವಂತೆ ಮಾಡುತ್ತದೆ. ಶುಭ್ರವಾಗಿ ತೊಳೆದು ಒಣಗಿಸಿದ ಬಳಿಕ ಪಾಲಿಶ್ ಅಥವಾ ಸ್ಪ್ರೇ ಮೂಲಕ ಬಿಳಿ ಶೂವನ್ನು ಶುಭ್ರವಾಗಿಸಬಹುದು. ಜೊತೆಗೆ ಶೋ ಶೈನಿಂಗ್ ಹೆಚ್ಚಾಗಲಿದ್ದು, ಹೊಸ ಶೂ ರೀತಿ ಕಾಣಲಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories