ಹೆಚ್ಚು ಸಮಯ ಬೇಡ, ಹತ್ತು ನಿಮಿಷ ಸಾಕು.. ಟಾಯ್ಲೆಟ್ ಬ್ರಷ್‌ನ ಕೊಳೆ, ಬ್ಯಾಕ್ಟೀರಿಯಾ ಎರಡೂ ಇರಲ್ಲ

Published : Jul 26, 2026, 07:15 PM IST

Toilet brush cleaning tips: ಟಾಯ್ಲೆಟ್ ಕ್ಲೀನ್ ಆಗಿದ್ದರೆ ಸಾಲದು, ಅದನ್ನು ಸ್ವಚ್ಛಗೊಳಿಸುವ ಬ್ರಷ್ ಕೂಡ ಬ್ಯಾಕ್ಟೀರಿಯಾ ಮುಕ್ತವಾಗಿರಬೇಕು. ಟಾಯ್ಲೆಟ್ ಬ್ರಷ್ ಅನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಿ ಬಾತ್ ರೂಮ್ ಅನ್ನು ಫ್ರೆಶ್ ಆಗಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್.

PREV
16
ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುವ ಬ್ಯಾಕ್ಟೀರಿಯಾ

ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುವ ಬ್ಯಾಕ್ಟೀರಿಯಾ
ನಮ್ಮಲ್ಲಿ ಹೆಚ್ಚಿನವರು ಟಾಯ್ಲೆಟ್ ಅನ್ನು ಫಳಫಳ ಹೊಳೆಯುವಂತೆ ಸ್ವಚ್ಛಗೊಳಿಸುತ್ತಾರೆ. ಆದರೆ ಆ ಟಾಯ್ಲೆಟ್ ಅನ್ನು ಸ್ವಚ್ಛಗೊಳಿಸಲು ಬಳಸುವ ಬ್ರಷ್ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ನೆನಪಿಡಿ, ನೀವು ಟಾಯ್ಲೆಟ್ ಬ್ರಷ್ ಅನ್ನು ಆಗಾಗ್ಗೆ ಸ್ವಚ್ಛಗೊಳಿಸದಿದ್ದರೆ, ಪ್ರತಿ ಬಾರಿ ನೀವು ಅದನ್ನು ಬಳಸುವಾಗ ಬ್ಯಾಕ್ಟೀರಿಯಾಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುತ್ತಿದ್ದೀರಿ ಎಂದೇ ಅರ್ಥ. ನಿಮ್ಮ ಬಾತ್ ರೂಮ್ ಹೆಚ್ಚು ಕ್ಲೀನ್ ಆಗಿರಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

26
1. ಬಳಸಿದ ತಕ್ಷಣ ಚೆನ್ನಾಗಿ ತೊಳೆಯಿರಿ

1. ಬಳಸಿದ ತಕ್ಷಣ ಚೆನ್ನಾಗಿ ತೊಳೆಯಿರಿ
ಟಾಯ್ಲೆಟ್ ಕ್ಲೀನ್ ಮಾಡಿದ ತಕ್ಷಣ ಬ್ರಷ್ ಅನ್ನು ಹಾಗೆಯೇ ಇಡಬೇಡಿ. ಬಿಸಿ ನೀರಿನಿಂದ ಬ್ರಷ್‌ನ ಎಳೆಗಳನ್ನು (Bristles) ಸರಿಯಾಗಿ ತೊಳೆಯಿರಿ. ಕೇವಲ ಕಮೋಡ್ ನೀರಿನಲ್ಲಿ ಅದ್ದುವ ಬದಲು, ಅದರ ಮೇಲೆ ಬಿಸಿ ನೀರು ಹಾಕಿ ಯಾವುದೇ ಕೊಳೆ ಉಳಿಯದಂತೆ ನೋಡಿ.

36
2. ಒಣಗಿದ ನಂತರವೇ ಇರಿಸಿ

2. ಒಣಗಿದ ನಂತರವೇ ಇರಿಸಿ
ಟಾಯ್ಲೆಟ್ ಬ್ರಷ್ ಅನ್ನು ಒದ್ದೆಯಾಗಿರುವಾಗಲೇ ಅದರ ಹೋಲ್ಡರ್ (Holder) ಒಳಗೆ ಇಡುವುದು ನಾವು ಮಾಡುವ ಅತಿದೊಡ್ಡ ತಪ್ಪು. ಒದ್ದೆಯಾದ ಬ್ರಷ್ ಬ್ಯಾಕ್ಟೀರಿಯಾ ಮತ್ತು ಬೂಸ್ಟ್ (Mould) ಬೆಳೆಯಲು ಕಾರಣವಾಗುತ್ತದೆ. ಆದ್ದರಿಂದ, ಬ್ರಷ್ ತೊಳೆದ ನಂತರ ಅದನ್ನು ಕಮೋಡ್ ಮೇಲೆ ಇಟ್ಟು ಅದರ ನೀರು ಪೂರ್ತಿ ಬಸಿಯುವಂತೆ ಮಾಡಿ. ಅದು ಪೂರ್ತಿ ಒಣಗಿದ ನಂತರವಷ್ಟೇ ಅದರ ಸ್ಟ್ಯಾಂಡ್‌ನಲ್ಲಿ ಇರಿಸಿ.

46
3. ಬ್ರಷ್ ಹೋಲ್ಡರ್ ಕೂಡ ಸ್ವಚ್ಛವಾಗಿರಲಿ

3. ಬ್ರಷ್ ಹೋಲ್ಡರ್ ಕೂಡ ಸ್ವಚ್ಛವಾಗಿರಲಿ
ಬ್ರಷ್ ಇಡುವ ಡಬ್ಬ ಅಥವಾ ಹೋಲ್ಡರ್‌ನಲ್ಲಿ ಕೊಳಕು ನೀರು ಸಂಗ್ರಹವಾಗಿ ದುರ್ವಾಸನೆ ಬರಬಹುದು. ಆದ್ದರಿಂದ ಹೋಲ್ಡರ್ ಅನ್ನು ವಾರಕ್ಕೊಮ್ಮೆ ಬಿಸಿ ಸೋಪಿನ ನೀರು ಅಥವಾ ಸೋಂಕು ನಿವಾರಕದಿಂದ ತೊಳೆಯಿರಿ. ಸಾಧ್ಯವಾದರೆ ಗಾಳಿಯಾಡುವ ರಂಧ್ರವಿರುವ ಹೋಲ್ಡರ್ ಬಳಸಿ.

56
4. ವಾರಕ್ಕೊಮ್ಮೆ 'ಡೀಪ್ ಕ್ಲೀನ್' ಮಾಡಿ

4. ವಾರಕ್ಕೊಮ್ಮೆ 'ಡೀಪ್ ಕ್ಲೀನ್' ಮಾಡಿ
ವಾರಕ್ಕೊಮ್ಮೆ ಒಂದು ಬಕೆಟ್‌ನಲ್ಲಿ ಬಿಸಿ ನೀರು ಮತ್ತು ಸೋಂಕು ನಿವಾರಕ ದ್ರಾವಣ (Disinfectant) ಅಥವಾ ಬಿಳಿ ವಿನೆಗರ್ ಹಾಕಿ ಅದರಲ್ಲಿ ಬ್ರಷ್ ಅನ್ನು 10 ರಿಂದ 15 ನಿಮಿಷ ನೆನೆಸಿಡಿ. ಇದು ಬ್ರಷ್‌ನಲ್ಲಿರುವ ಕಠಿಣ ಕೊಳೆ ಮತ್ತು ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ನಂತರ ಶುದ್ಧ ನೀರಿನಿಂದ ತೊಳೆದು ಒಣಗಿಸಿ.

66
5. ಹೊಸ ಬ್ರಷ್ ಯಾವಾಗ ಕೊಳ್ಳಬೇಕು?

5. ಹೊಸ ಬ್ರಷ್ ಯಾವಾಗ ಕೊಳ್ಳಬೇಕು?
ಬ್ರಷ್‌ನ ಎಳೆಗಳು ಬಾಗಿದ್ದರೆ, ಬಣ್ಣಗೆಟ್ಟಿದ್ದರೆ ಅಥವಾ ಸರಿಯಾಗಿ ಸ್ವಚ್ಛ ಮಾಡುತ್ತಿಲ್ಲವೆಂದರೆ ಅದನ್ನು ಬದಲಿಸುವ ಸಮಯ ಬಂದಿದೆ ಎಂದರ್ಥ. ಸಾಮಾನ್ಯವಾಗಿ ಪ್ರತಿ 6 ರಿಂದ 12 ತಿಂಗಳಿಗೊಮ್ಮೆ ಟಾಯ್ಲೆಟ್ ಬ್ರಷ್ ಬದಲಿಸುವುದು ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories