ನೀರು, ಸೋಪಿಲ್ಲದೆಯೂ ಅತಿ ಭಾರವಿರುವ ದಪ್ಪ ಬ್ಲಾಂಕೆಟ್ ಹೀಗೆ ಕ್ಲೀನ್ ಮಾಡ್ಬೋದು!

Published : Sep 15, 2026, 11:41 AM IST

Winter blanket cleaning hacks kannada: ದಪ್ಪ ಬ್ಲಾಂಕೆಟ್ ನೀರಲ್ಲಿ ನೆನೆಸಿ, ಒಗೆದು, ಒಣಗಿಸೋದು ದೊಡ್ಡ ತಲೆನೋವಾಗಿದ್ಯಾ? ನೀರು ಮತ್ತು ಸೋಪ್ ಇಲ್ಲದೆ ಕೇವಲ 10 ನಿಮಿಷದಲ್ಲಿ ಬ್ಲಾಂಕೆಟ್ ಸ್ವಚ್ಛಗೊಳಿಸೋ ಸೂಪರ್ ಹ್ಯಾಕ್ ಇಲ್ಲಿದೆ ನೋಡಿ...

PREV
16
ಚರ್ಮದ ಸೋಂಕು ಅಥವಾ ಅಲರ್ಜಿ ಬರುವ ಸಾಧ್ಯತೆ ಹೆಚ್ಚು

ಚರ್ಮದ ಸೋಂಕು ಅಥವಾ ಅಲರ್ಜಿ ಬರುವ ಸಾಧ್ಯತೆ ಹೆಚ್ಚು
ಚಳಿಗಾಲ ಅಥವಾ ಮಳೆಗಾಲದಲ್ಲಿ ಪ್ರತಿಯೊಬ್ಬರಿಗೂ ಬ್ಲಾಂಕೆಟ್ (Blanket) ಬೇಕೇಬೇಕು. ಮಲಗುವಾಗ ಮಾತ್ರವಲ್ಲದೆ, ಚಳಿಗೆ ಕಂಬಳಿ ಹೊದ್ದುಕೊಂಡೇ ಟಿವಿ ನೋಡುವುದು, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದು, ಅಷ್ಟೇ ಏಕೆ ಊಟ-ತಿಂಡಿ ತಿನ್ನುವುದು ಕೂಡ ಸಾಮಾನ್ಯ. ಆದರೆ ಹೀಗೆ ನಿರಂತರವಾಗಿ ಬಳಸುವುದರಿಂದ ಬ್ಲಾಂಕೆಟ್‌ನಲ್ಲಿ ಧೂಳು, ಬೆವರು, ಎಣ್ಣೆಯ ಜಿಡ್ಡು, ಆಹಾರದ ಕಣಗಳು ಮತ್ತು ಕಣ್ಣಿಗೆ ಕಾಣದ ಅಪಾಯಕಾರಿ ಬ್ಯಾಕ್ಟೀರಿಯಾಗಳು ಜಮೆಯಾಗುತ್ತವೆ. ಇದರಿಂದ ಚರ್ಮದ ಸೋಂಕು (Infection) ಅಥವಾ ಅಲರ್ಜಿ ಬರುವ ಸಾಧ್ಯತೆ ಹೆಚ್ಚು.

26
ಸೋಪ್ ಪೌಡರ್ ಬಳಸದೆ ಸ್ವಚ್ಛಗೊಳಿಸುವ ವಿಧಾನ

ಸೋಪ್ ಪೌಡರ್ ಬಳಸದೆ ಸ್ವಚ್ಛಗೊಳಿಸುವ ವಿಧಾನ
ಆದರೆ, ದಪ್ಪನೆಯ ಬ್ಲಾಂಕೆಟ್ ನೀರಿನಲ್ಲಿ ನೆನೆಸಿ ತೊಳೆಯುವುದು ಅತ್ಯಂತ ಕಷ್ಟದ ಕೆಲಸ. ಒದ್ದೆಯಾದ ಬ್ಲಾಂಕೆಟ್ ಅತಿಯಾದ ತೂಕ ಹೊಂದಿರುತ್ತದೆ ಮತ್ತು ಚಳಿಗಾಲದಲ್ಲಿ ಒಣಗಿಸುವುದು ಮತ್ತೊಂದು ದೊಡ್ಡ ಸವಾಲು. ಇನ್ನು ಡ್ರೈ ಕ್ಲೀನಿಂಗ್‌ಗೆ ಕೊಟ್ಟರೆ ನೂರಾರು ರೂಪಾಯಿ ಖರ್ಚಾಗುತ್ತದೆ. ಆದರೆ ಚಿಂತಿಸಬೇಡಿ, ನೀರು ಮತ್ತು ಸೋಪ್ ಪೌಡರ್ ಬಳಸದೆ ಬ್ಲಾಂಕೆಟ್ ಅನ್ನು ಬ್ಯಾಕ್ಟೀರಿಯಾ ಮುಕ್ತಗೊಳಿಸಿ ಸ್ವಚ್ಛಗೊಳಿಸುವ ವಿಧಾನವನ್ನು ಇಲ್ಲಿ ಕೊಡಲಾಗಿದೆ.

36
ಮನೆಯಲ್ಲೇ ಡ್ರೈ ಕ್ಲೀನ್ ಮಾಡುವುದು ಹೇಗೆ?

ಮನೆಯಲ್ಲೇ ಡ್ರೈ ಕ್ಲೀನ್ ಮಾಡುವುದು ಹೇಗೆ?
ಬೇಕಿಂಗ್ ಸೋಡಾ ಸಿಂಪಡಿಸಿ
ಮೊದಲು ಬ್ಲಾಂಕೆಟ್ ಅನ್ನು ನೆಲದ ಮೇಲೆ ಅಥವಾ ಮಂಚದ ಮೇಲೆ ಪೂರ್ತಿಯಾಗಿ ಹರಡಿ. ನಂತರ ಟೀ ಸೋಸುವ ಜಾಲರಿಗೆ (Strainer) ಅಡುಗೆ ಸೋಡಾ (Baking Soda) ಹಾಕಿ, ಇಡೀ ಬ್ಲಾಂಕೆಟ್ ಮೇಲೆ ಸಮವಾಗಿ ಉದುರಿಸಿ. ಬೇಕಿಂಗ್ ಸೋಡಾವು ನೈಸರ್ಗಿಕವಾಗಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮತ್ತು ಜಿಡ್ಡನ್ನು ಹೀರಿಕೊಳ್ಳುವ ಅದ್ಭುತ ಗುಣವನ್ನು ಹೊಂದಿದೆ.

46
ಬ್ರಷ್‌ನಿಂದ ಉಜ್ಜಿ

ಬ್ರಷ್‌ನಿಂದ ಉಜ್ಜಿ
ಸ್ವಲ್ಪ ಸಮಯದ ನಂತರ, ಒಂದು ಬಟ್ಟೆ ತೊಳೆಯುವ ಕ್ಲೀನ್ ಆದ ಒಣ ಬ್ರಷ್ ತೆಗೆದುಕೊಂಡು ಬ್ಲಾಂಕೆಟ್‌ ಮೇಲೆ ಲಘುವಾಗಿ ಉಜ್ಜಿ (ಸ್ಕ್ರಬ್ ಮಾಡಿ). ಇದರಿಂದ ಬ್ಲಾಂಕೆಟ್‌ ನೂಲಿನ ಒಳಗೆ ಸಿಲುಕಿರುವ ಧೂಳು, ಕೊಳೆ ಮತ್ತು ಸತ್ತ ಬ್ಯಾಕ್ಟೀರಿಯಾಗಳು ಸಂಪೂರ್ಣವಾಗಿ ಹೊರಬರುತ್ತವೆ. ಇದೇ ರೀತಿ ಬ್ಲಾಂಕೆಟ್‌ ಉಲ್ಟಾ ಮಾಡಿ ಇನ್ನೊಂದು ಬದಿಯೂ ಮಾಡಿ.

56
ಕೆಟ್ಟ ವಾಸನೆ ಹೋಗಲಾಡಿಸಲು

ಕೆಟ್ಟ ವಾಸನೆ ಹೋಗಲಾಡಿಸಲು
ಬ್ಲಾಂಕೆಟ್‌ನಿಂದ ಬರುವ ಬೆವರಿನ ಅಥವಾ ಮುಗ್ಗಲು ವಾಸನೆಯನ್ನು ಹೋಗಲಾಡಿಸಲು ಒಂದು ಸ್ಪ್ರೇ ಬಾಟಲಿಗೆ ಸ್ವಲ್ಪ ಗುಲಾಬಿ ಜಲ (Rose Water) ಮತ್ತು ಕೆಲವೇ ಹನಿ ವಿನೆಗರ್ (Vinegar) ಬೆರೆಸಿ ಬ್ಲಾಂಕೆಟ್‌ ಮೇಲೆ ಲಘುವಾಗಿ ಸ್ಪ್ರೇ ಮಾಡಿ. ಇದು ಬ್ಲಾಂಕೆಟ್‌ನಲ್ಲಿರುವ ಸೂಕ್ಷ್ಮಾಣುಗಳನ್ನು ನಾಶಪಡಿಸಿ, ಸುಂದರ ಸುವಾಸನೆ ನೀಡುತ್ತದೆ.

66
ಬಿಸಿಲಿನಲ್ಲಿ ಒಣಗಿಸಿ

ಬಿಸಿಲಿನಲ್ಲಿ ಒಣಗಿಸಿ
ಕೊನೆಯದಾಗಿ ಈ ಬ್ಲಾಂಕೆಟ್ ಅನ್ನು ಮಧ್ಯಾಹ್ನದ ಹೊತ್ತು ಕೇವಲ 1 ರಿಂದ 2 ಗಂಟೆಗಳ ಕಾಲ ಬಿಸಿಲಿಗೆ ಹಾಕಿ (ಬಿಸಿಲಿಲ್ಲದಿದ್ದರೆ ಫ್ಯಾನ್ ಗಾಳಿಯಲ್ಲಿ ಹರಡಿ). ಈಗ ನಿಮ್ಮ ಬ್ಲಾಂಕೆಟ್‌ ಯಾವುದೇ ಶ್ರಮವಿಲ್ಲದೆ, ಒಂದು ಹನಿ ನೀರೂ ಬಳಸದೆ ಹೊಚ್ಚ ಹೊಸದರಂತೆ ಪರಿಮಳಯುಕ್ತವಾಗಿ, ಬ್ಯಾಕ್ಟೀರಿಯಾ ಮುಕ್ತವಾಗಿ ಸಿದ್ಧವಾಗುತ್ತದೆ!

ಯಾರಿಗೆ ಇದು ಹೆಚ್ಚು ಉಪಯುಕ್ತ?
ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು, ಬ್ಯಾಚುಲರ್‌ಗಳು ಮತ್ತು ಒಂಟಿಯಾಗಿ ವಾಸಿಸುವವರಿಗೆ ಈ ವಿಧಾನ ವರದಾನವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories