Remove shirt collar stains: ಬಿಳಿ, ತಿಳಿ ಬಣ್ಣದ ಶರ್ಟ್‌ಗಳು ನೋಡಲು ಎಷ್ಟು ಅಂದವೋ, ಅವುಗಳ ಕಾಲರ್ ಮೇಲೆ ಕುಳಿತುಕೊಳ್ಳುವ ಕಲೆಗಳನ್ನು ತೆಗೆಯುವುದು ಅಷ್ಟೇ ಕಷ್ಟದ ಕೆಲಸ. ಆದರೆ ಅಡುಗೆ ಮನೆಯಲ್ಲಿಯೇ ಇರುವ ಪದಾರ್ಥ ಬಳಸಿಕೊಂಡು ಕಾಲರ್‌ಗಳನ್ನು ಮತ್ತೆ ಹೊಸದರಂತೆ ಮಾಡುವುದು ಹೇಗೆಂದು ನೋಡೋಣ..
ಕಾಲರ್ ಕಲೆಗಳನ್ನ ಹೋಗಲಾಡಿಸಲು ಬಟ್ಟೆಗಳ ಮೇಲಿನ ಹಠಮಾರಿ ಕಲೆಗಳನ್ನು ತೆಗೆಯುವುದು ಅಷ್ಟು ಸುಲಭವಲ್ಲ. ಅದರಲ್ಲೂ ಶರ್ಟ್ ಕಾಲರ್‌ಗಳ ಮೇಲಿನ ಕೊಳೆಯನ್ನು ತೆಗೆಯುವುದು ತುಂಬಾ ಶ್ರಮದಾಯಕ ಕೆಲಸ. ಕಾಲರ್ ನಿರಂತರವಾಗಿ ಕುತ್ತಿಗೆಗೆ ತಾಗುತ್ತಿರುವುದರಿಂದ ಬೆವರು, ಚರ್ಮದ ಎಣ್ಣೆ ಅಂಶ ಮತ್ತು ಧೂಳು ಕಾಲರ್ ಮೇಲೆ ಸೇರಿಕೊಂಡು ಗಟ್ಟಿಯಾದ ಕಲೆಗಳಾಗುತ್ತವೆ.
ಶರ್ಟ್ ಕಾಲರ್ ಮೇಲಿನ ಈ ಕೊಳೆಯನ್ನು ತೆಗೆಯಲು ಕಾಲರ್ ಅನ್ನು ಪದೇ ಪದೇ ಉಜ್ಜಿದರೆ ಬಟ್ಟೆ ಹಾಳಾಗುತ್ತದೆ ಮತ್ತು ಶರ್ಟ್ ಹಳೆಯದರಂತೆ ಕಾಣಿಸುತ್ತದೆ. ಆದರೆ ಈ ಕೆಳಗಿನ ಕೆಲವು ಮನೆಮದ್ದುಗಳ ಸಹಾಯದಿಂದ ನೀವು ಕಾಲರ್ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು:
25
1. ಅಡುಗೆ ಸೋಡಾ –ಲಿಂಬೆ ರಸ
1. ಅಡುಗೆ ಸೋಡಾ –ಲಿಂಬೆ ರಸ ಕಾಲರ್ ಮೇಲಿನ ಕಲೆಗಳನ್ನು ತೆಗೆಯಲು ಅಡುಗೆ ಸೋಡಾ ಮತ್ತು ಲಿಂಬೆ ರಸದ ಮಿಶ್ರಣವು ಅತ್ಯಂತ ಪರಿಣಾಮಕಾರಿ. ವಿಧಾನ: 2 ಟೇಬಲ್ ಚಮಚ ಅಡುಗೆ ಸೋಡಾಕ್ಕೆ ಸ್ವಲ್ಪ ಲಿಂಬೆ ರಸವನ್ನು ಬೆರೆಸಿ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಕಾಲರ್‌ನ ಕಲೆ ಇರುವ ಜಾಗಕ್ಕೆ ಹಚ್ಚಿ, ಹಳೆಯ ಟೂತ್‌ಬ್ರಷ್‌ನಿಂದ ಮೆಲ್ಲಗೆ ಉಜ್ಜಿ. 15-20 ನಿಮಿಷ ಹಾಗೆಯೇ ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
35
2. ಬಿಳಿ ವಿನೆಗರ್ – ಡಿಟರ್ಜೆಂಟ್
2. ಬಿಳಿ ವಿನೆಗರ್ – ಡಿಟರ್ಜೆಂಟ್ ಕಾಲರ್ ಮೇಲಿನ ಹಳೆಯ ಕಪ್ಪು ಅಥವಾ ಹಳದಿ ಕಲೆಗಳನ್ನು ತೆಗೆಯಲು ಇದು ಸುಲಭ ಮಾರ್ಗ. ವಿಧಾನ: ಕಾಲರ್ ಮೇಲೆ ಸ್ವಲ್ಪ ಲಿಕ್ವಿಡ್ ಡಿಟರ್ಜೆಂಟ್ ಹಾಕಿ, ಅದರ ಮೇಲೆ 1-2 ಟೇಬಲ್ ಚಮಚ ಬಿಳಿ ವಿನೆಗರ್ ಸುರಿಯಿರಿ. 10-15 ನಿಮಿಷ ಬಿಟ್ಟು ಬ್ರಷ್‌ನಿಂದ ಹಗುರವಾಗಿ ಉಜ್ಜಿ. ಇದರಿಂದ ಕಲೆಗಳು ಸುಲಭವಾಗಿ ಮಾಯವಾಗುತ್ತವೆ.
3. ಪಾತ್ರೆ ತೊಳೆಯುವ ಲಿಕ್ವಿಡ್– ಶಾಂಪೂ ಒಂದು ಬಟ್ಟಲಿನಲ್ಲಿ ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ ಮತ್ತು ಅಷ್ಟೇ ಪ್ರಮಾಣದ ಶಾಂಪೂವನ್ನು ಮಿಶ್ರಣ ಮಾಡಿ. ಇದನ್ನು ನೇರವಾಗಿ ಶರ್ಟ್ ಕಾಲರ್‌ಗೆ ಹಚ್ಚಿ. 10 ನಿಮಿಷಗಳ ಕಾಲ ಬಿಟ್ಟು, ನಂತರ ಬ್ರಷ್‌ನಿಂದ ಉಜ್ಜಿ ನೀರಿನಿಂದ ತೊಳೆಯಿರಿ. ಇದು ಎಣ್ಣೆಯಂತಹ ಜಿಡ್ಡು ಕಲೆಗಳನ್ನು ಚೆನ್ನಾಗಿ ತೆಗೆಯುತ್ತದೆ.
55
ಶುಚಿಗೊಳಿಸುವಾಗ ಈ ವಿಷಯಗಳು ನೆನಪಿರಲಿ
ಶುಚಿಗೊಳಿಸುವಾಗ ಈ ವಿಷಯಗಳು ನೆನಪಿರಲಿ ಕಾಲರ್ ಸ್ವಚ್ಛಗೊಳಿಸುವಾಗ ಈ ಕೆಳಗಿನ ಎಚ್ಚರಿಕೆಗಳನ್ನು ವಹಿಸದಿದ್ದರೆ ಬಟ್ಟೆ ಬೇಗನೆ ಹಾಳಾಗಬಹುದು.. *ಕಾಲರ್ ಅನ್ನು ಬ್ರಷ್‌ನಿಂದ ಅತಿಯಾಗಿ ಅಥವಾ ತುಂಬಾ ಗಟ್ಟಿಯಾಗಿ ಉಜ್ಜಬೇಡಿ. ಇದರಿಂದ ಬಟ್ಟೆಯ ಎಳೆಗಳು ಹಾನಿಗೊಳಗಾಗುತ್ತವೆ. *ಬಣ್ಣದ ಶರ್ಟ್‌ಗಳ ಮೇಲೆ ಲಿಂಬೆ ರಸ ಅಥವಾ ಬ್ಲೀಚ್ ಬಳಸುವಾಗ ಜಾಗರೂಕರಾಗಿರಿ (ಬಣ್ಣ ಹೋಗುವ ಸಾಧ್ಯತೆ ಇರುತ್ತದೆ). *ಯಾವುದೇ ಮಿಶ್ರಣವನ್ನು ಬಳಸುವ ಮೊದಲು ಬಟ್ಟೆಯ ಯಾವುದಾದರೂ ಒಂದು ಮೂಲೆಯಲ್ಲಿ ಪ್ಯಾಚ್ ಟೆಸ್ಟ್ (Patch Test) ಮಾಡಿ ನೋಡಿ. ಬಟ್ಟೆಯ ಬಣ್ಣ ಮಾಸಿದರೆ ಅದನ್ನು ಬಳಸಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.