ನೀವು ಮನೇಲಿ ಸ್ಟೀಲ್ ವಾಟರ್ ಬಾಟಲ್ ಬಳಸ್ತಿದ್ದೀರಾ? ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೇದು. ಆದ್ರೆ, ಇದನ್ನ ಸರಿಯಾಗಿ ಕ್ಲೀನ್ ಮಾಡೋದು ಕೂಡ ಅಷ್ಟೇ ಮುಖ್ಯ. ಸ್ಟೀಲ್ ವಾಟರ್ ಬಾಟಲ್ ಕ್ಲೀನ್ ಮಾಡೋ ಸರಿಯಾದ ವಿಧಾನ ನಿಮಗೆ ಗೊತ್ತಾ?
ಆಫೀಸ್, ಕಾಲೇಜು ಅಥವಾ ಟ್ರಾವೆಲ್ ಮಾಡುವಾಗ ಪ್ಲಾಸ್ಟಿಕ್ ಬದಲು ಸ್ಟೀಲ್ ವಾಟರ್ ಬಾಟಲ್ ಬಳಸೋದು ಈಗ ಒಳ್ಳೆ ಅಭ್ಯಾಸವಾಗಿದೆ. ತಣ್ಣನೆಯ ನೀರು, ಬಿಸಿ ಟೀ ಅಥವಾ ಕಾಫಿ ಇಡಲು ಇದು ತುಂಬಾ ಉಪಯುಕ್ತ. ಆದ್ರೆ, ದಿನಾ ಬರೀ ನೀರು ಕುಡಿತೀವಿ ಅಂತಾ ಮೇಲ್ನೋಟಕ್ಕೆ ತೊಳೆದು ಬಿಡ್ತಾರೆ. ಬಾಟಲ್ ತಳದಲ್ಲಿ, ಕ್ಯಾಪ್ ರಬ್ಬರ್ ಹತ್ತಿರ ಕಣ್ಣಿಗೆ ಕಾಣದ ಜಿಡ್ಡು, ಪಾಚಿ, ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತೆ. ಸರಿಯಾಗಿ ಕ್ಲೀನ್ ಮಾಡದ ಬಾಟಲ್ ಬಳಸಿದ್ರೆ ಹೊಟ್ಟೆನೋವು, ಇನ್ಫೆಕ್ಷನ್ ಬರೋ ಅಪಾಯ ಇದೆ. ನಿಮ್ಮ ಸ್ಟೀಲ್ ಬಾಟಲ್ ಯಾವಾಗಲೂ ಹೊಸದರಂತೆ, ಕ್ಲೀನ್ ಆಗಿ ಇರಲು ಏನೆಲ್ಲಾ ಮಾಡಬೇಕು ಅಂತ ಈಗ ನೋಡೋಣ...
26
1. ಬೇಕಿಂಗ್ ಸೋಡಾ:
ಒಂದು ಚಮಚ ಬೇಕಿಂಗ್ ಸೋಡಾವನ್ನು ಬಾಟಲ್‌ಗೆ ಹಾಕಿ, ಅದಕ್ಕೆ ಉಗುರುಬೆಚ್ಚಗಿನ ನೀರು ತುಂಬಿಸಿ. ಇದನ್ನ 2-3 ಗಂಟೆ ಅಥವಾ ರಾತ್ರಿಯಿಡೀ ಹಾಗೇ ಬಿಡಿ. ಬೆಳಗ್ಗೆ ಬಾಟಲ್ ಬ್ರಷ್‌ನಿಂದ ಉಜ್ಜಿ ತೊಳೆದರೆ ಒಳಗಿರುವ ಕಲೆ, ಕೆಟ್ಟ ವಾಸನೆ ಸಂಪೂರ್ಣವಾಗಿ ಹೋಗುತ್ತೆ.
2. ವಿನೆಗರ್ ಮತ್ತು ಉಗುರುಬೆಚ್ಚಗಿನ ನೀರು:
ವಿನೆಗರ್ ಒಂದು ನೈಸರ್ಗಿಕ ಕ್ಲೀನರ್. ಬಾಟಲ್‌ನ ಅರ್ಧ ಭಾಗಕ್ಕೆ ಬಿಳಿ ವಿನೆಗರ್, ಉಳಿದರ್ಧಕ್ಕೆ ಉಗುರುಬೆಚ್ಚಗಿನ ನೀರು ಹಾಕಿ. 30 ನಿಮಿಷ ಹಾಗೇ ಬಿಟ್ಟು, ಆಮೇಲೆ ಸೋಪಿನ ನೀರಿನಿಂದ ತೊಳೆದರೆ ಬ್ಯಾಕ್ಟೀರಿಯಾ ಸತ್ತು, ಬಾಟಲ್ ಫ್ರೆಶ್ ಆಗುತ್ತೆ.
36
3. ನಿಂಬೆರಸ ಮತ್ತು ಉಪ್ಪು:
ಬಾಟಲ್‌ಗೆ ಎರಡು ಚಮಚ ನಿಂಬೆರಸ, ಒಂದು ಚಮಚ ಕಲ್ಲುಪ್ಪು, ಸ್ವಲ್ಪ ಐಸ್ ಕ್ಯೂಬ್ ಹಾಕಿ ಚೆನ್ನಾಗಿ ಕುಲುಕಿ. ನಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್ ಮತ್ತು ಉಪ್ಪಿನ ಒರಟುತನ ಬಾಟಲ್ ತಳದಲ್ಲಿರುವ ಕೊಳೆಯನ್ನು ತೆಗೆದುಹಾಕುತ್ತೆ. ಬಾಟಲ್ ಕ್ಲೀನ್ ಆಗುತ್ತೆ.
ಬಾಟಲ್ ತಳಕ್ಕೆ ಕೈ ಅಥವಾ ಬ್ರಷ್ ಹೋಗದಿದ್ದಾಗ... ಸ್ವಲ್ಪ ಅಕ್ಕಿ, ಉಗುರುಬೆಚ್ಚಗಿನ ನೀರು, ಎರಡು ಹನಿ ಡಿಶ್ ವಾಶ್ ಲಿಕ್ವಿಡ್ ಹಾಕಿ. ಮುಚ್ಚಳ ಮುಚ್ಚಿ ಗಟ್ಟಿಯಾಗಿ ಕುಲುಕಿದರೆ, ಅಕ್ಕಿ ಕಾಳುಗಳು ಸ್ಕ್ರಬ್ಬರ್ ತರಹ ಕೆಲಸ ಮಾಡಿ ಒಳಗಿನ ಜಿಡ್ಡನ್ನು ಸಂಪೂರ್ಣವಾಗಿ ತೆಗೆಯುತ್ತೆ.
56
5. ಬಾಟಲ್ ಕ್ಯಾಪ್, ರಬ್ಬರ್ ಗ್ಯಾಸ್ಕೆಟ್ ಕ್ಲೀನಿಂಗ್:
ಬಾಟಲ್ ಮುಚ್ಚಳ ಮತ್ತು ಅದರ ರಬ್ಬರ್ ಗ್ಯಾಸ್ಕೆಟ್ ಹತ್ತಿರ ಅತಿ ಹೆಚ್ಚು ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತೆ. ಪ್ರತಿ ವಾರ ಈ ರಬ್ಬರ್ ರಿಂಗ್ ಅನ್ನು ಹುಷಾರಾಗಿ ಹೊರತೆಗೆದು, ಹಳೇ ಟೂತ್ ಬ್ರಷ್ ಮತ್ತು ಸೋಪಿನ ನೀರಿನಿಂದ ಕ್ಲೀನ್ ಮಾಡಬೇಕು. ಇಲ್ಲದಿದ್ದರೆ ಅಲ್ಲಿ ಕಪ್ಪು ಬೂಸ್ಟ್ ಬೆಳೆಯುತ್ತೆ.
6. ಗಾಳಿಗೆ ಒಣಗಿಸೋದು ತುಂಬಾ ಮುಖ್ಯ:
ಬಾಟಲ್ ತೊಳೆದ ತಕ್ಷಣ ಮುಚ್ಚಳ ಮುಚ್ಚಬಾರದು. ಬಾಟಲ್ ಅನ್ನು ತಲೆಕೆಳಗಾಗಿ ಇಟ್ಟು, ತೇವಾಂಶ ಇಲ್ಲದಂತೆ ಸಂಪೂರ್ಣವಾಗಿ ಒಣಗಲು ಬಿಡಬೇಕು. ಹಸಿ ಇರುವಾಗಲೇ ಮುಚ್ಚಳ ಮುಚ್ಚಿದರೆ ಮತ್ತೆ ಬೂಸ್ಟ್ ಹಿಡಿದು ಕೆಟ್ಟ ವಾಸನೆ ಬರುತ್ತೆ.
66
ಮಾಡಬಾರದ ತಪ್ಪುಗಳು:
ಸ್ಟೀಲ್ ಸ್ಕ್ರಬ್ಬರ್ ಬಳಸಬೇಡಿ. ಬಾಟಲ್ ಒಳಗೆ ಅಥವಾ ಹೊರಗೆ ಗೀರು ಬೀಳದಿರಲು ಸ್ಟೀಲ್ ನಾರು ಬದಲು ಸ್ಪಾಂಜ್ ಅಥವಾ ಸಾಫ್ಟ್ ಬಾಟಲ್ ಬ್ರಷ್ ಮಾತ್ರ ಬಳಸಿ. ಹಾಗೇ, ಸ್ಟ್ರಾಂಗ್ ಕೆಮಿಕಲ್ಸ್ ಬಳಸಬಾರದು. ಇವು ಸ್ಟೀಲ್ ಪದರವನ್ನು ಹಾಳುಮಾಡುತ್ತವೆ. ಜೊತೆಗೆ, ಸ್ಟೀಲ್ ಬಾಟಲ್‌ಗಳನ್ನು ಡಿಶ್ ವಾಷರ್‌ನಲ್ಲಿ ಇಡಬಾರದು. ಇಟ್ಟರೆ, ಅದರ ಶಾಖವು ಬಾಟಲ್‌ನ ನಿರೋಧಕ ಶಕ್ತಿಯನ್ನು ಹಾಳುಮಾಡುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.