how to block Online Wallets ಮೊಬೈಲ್ ಕಳೆದುಹೋದಾಗ ಆನ್‌ಲೈನ್ ವ್ಯಾಲೆಟ್‌ಗಳನ್ನು ಸುರಕ್ಷಿತವಾಗಿ ಲಾಕ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. Google Pay, PhonePe ಮತ್ತು Paytm ನಂತಹ ಆ್ಯಪ್‌ಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸುವ ವಿಧಾನಗಳನ್ನು ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಒಂದು ಸಂಪರ್ಕ ಸಾಧನ ಮಾತ್ರವಲ್ಲದೆ, ನಮ್ಮ ಜೇಬಿನಲ್ಲಿ ಲಕ್ಷಾಂತರ ರೂಪಾಯಿ ಇರುವಷ್ಟು ಧೈರ್ಯ ನೀಡುವ ಒಂದು ಪಾವತಿ ಸಾಧನವಾಗಿದೆ.
27
ಆದರೆ, ಇದೇ ಮೊಬೈಲ್ ಕಳೆದುಹೋದಾಗ, ನಮ್ಮ ಹಣಕ್ಕೂ ಕನ್ನ ಬೀಳುವ ಭಯ ಕಾಡುತ್ತದೆ. ಹಾಗಿದ್ದರೆ, ನಿಮ್ಮ ಮೊಬೈಲ್ ಕಳೆದು ಹೋದಾಗ ಅದರಲ್ಲಿರುವ ಪ್ರಮುಖ ಆನ್‌ಲೈನ್ ವ್ಯಾಲೆಟ್‌ಗಳನ್ನು ಸುರಕ್ಷಿತವಾಗಿ ಬ್ಲಾಕ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
37
ಮೊಬೈಲ್ ಇಲ್ಲದೆ ಶಾಪಿಂಗ್ ಮಾಡುವುದು ಈಗ ಅಸಾಧ್ಯ. ಯಾಕೆಂದರೆ, ದಿನಸಿ ಸಾಮಾನುಗಳಿಂದ ಹಿಡಿದು ಬಟ್ಟೆಗಳವರೆಗೆ ಎಲ್ಲದಕ್ಕೂ ನಗದು ಅಥವಾ ಕಾರ್ಡ್‌ಗಳ ಬದಲಿಗೆ Google Pay, PhonePe ಮತ್ತು Paytm ನಂತಹ ಆ್ಯಪ್‌ಗಳನ್ನು ಬಳಸಿ UPI ಪಾವತಿ ಮಾಡುತ್ತೇವೆ.
ಇದು ಸುರಕ್ಷಿತ ಮತ್ತು ಸರಳವಾದ ಮಾರ್ಗವಾದರೂ, ನಿಮ್ಮ ಮೊಬೈಲ್ ಕಳ್ಳರ ಕೈಗೆ ಸಿಕ್ಕರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು. ಆದರೆ, ಚಿಂತಿಸಬೇಡಿ. ನಿಮ್ಮ ಮೊಬೈಲ್ ಕಳೆದುಹೋದರೂ ಸಹ ಈ ಆ್ಯಪ್‌ಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸಬಹುದು.
57
Google Pay ಖಾತೆ ನಿಷ್ಕ್ರಿಯಗೊಳಿಸಲು:
ಮೊದಲು Google Pay ಗ್ರಾಹಕರ ಸಹಾಯವಾಣಿ ಸಂಖ್ಯೆ 18004190157 ಗೆ ಕರೆ ಮಾಡಿ.
ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ.
ಅಲ್ಲಿ ಕೇಳುವ ಆಯ್ಕೆಗಳಲ್ಲಿ 'ಇತರೆ ಸಮಸ್ಯೆಗಳು' (Other issues) ಎಂಬುದನ್ನು ಆಯ್ಕೆ ಮಾಡಿ.
ತದನಂತರ, ಪರಿಣತರ ಜೊತೆ ಮಾತನಾಡಲು ಆಯ್ಕೆ ಮಾಡಿಕೊಂಡರೆ, ಅವರು ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲು ಸಹಾಯ ಮಾಡುತ್ತಾರೆ.
67
PhonePe ಖಾತೆ ನಿಷ್ಕ್ರಿಯಗೊಳಿಸಲು:
PhonePe ಬಳಕೆದಾರರಾಗಿದ್ದರೆ, 08068727374 ಅಥವಾ 02268727374 ಸಂಖ್ಯೆಗೆ ಕರೆ ಮಾಡಿ.
ಭಾಷೆ ಆಯ್ಕೆ ಮಾಡಿದ ನಂತರ, 'PhonePe ಖಾತೆಗೆ ಸಂಬಂಧಿಸಿದ ಸಮಸ್ಯೆಯನ್ನು ದಾಖಲಿಸಲು ಬಯಸುವಿರಾ?' ಎಂದು ಕೇಳಿದಾಗ 'ಹೌದು' ಎಂದು ಒತ್ತಿ.
ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ. ನಿಮಗೆ OTP ಸಿಗಲಿಲ್ಲವಾದಲ್ಲಿ, 'OTP ಲಭಿಸಲಿಲ್ಲ' ಎಂಬ ಆಯ್ಕೆ ಒತ್ತಿ.
ನಂತರ ನಿಮ್ಮ ಸಿಮ್ ಅಥವಾ ಮೊಬೈಲ್ ಕಳೆದುಹೋಗಿರುವ ಬಗ್ಗೆ ದೂರು ನೀಡಲು ಅವಕಾಶ ಸಿಗುತ್ತದೆ. ಆ ಆಯ್ಕೆ ಆಯ್ದುಕೊಂಡರೆ, ನಿಮ್ಮ ಕರೆಯನ್ನು ತಂತ್ರಜ್ಞರಿಗೆ ವರ್ಗಾಯಿಸಲಾಗುತ್ತದೆ.
ಅವರು ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲು ನೆರವು ನೀಡುತ್ತಾರೆ. ಆದರೆ, ಇದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಇತ್ತೀಚಿನ ವಹಿವಾಟುಗಳ ವಿವರಗಳನ್ನು ನೀಡಬೇಕಾಗುತ್ತದೆ.
77
Paytm ಖಾತೆ ನಿಷ್ಕ್ರಿಯಗೊಳಿಸಲು:
Paytm ಸಹಾಯವಾಣಿ ಸಂಖ್ಯೆ 01204456456 ಗೆ ಕರೆ ಮಾಡಿ.
ಅಲ್ಲಿ 'ಕಳೆದುಹೋದ ಫೋನ್' (Lost Phone) ಆಯ್ಕೆಯನ್ನು ಆರಿಸಿ.
'ಬೇರೆ ಮೊಬೈಲ್ ಸಂಖ್ಯೆ'ಯನ್ನು ನಮೂದಿಸುವ ಆಯ್ಕೆ ಆಯ್ದುಕೊಂಡು, ನಿಮ್ಮ ಕಳೆದುಹೋದ ಮೊಬೈಲ್ ಸಂಖ್ಯೆ ನಮೂದಿಸಿ.
ಎಲ್ಲ ಸಾಧನಗಳಿಂದ ಲಾಗ್ ಔಟ್ ಆಗುವ ಆಯ್ಕೆಯನ್ನು ಕ್ಲಿಕ್ ಮಾಡಿ.
ಇದಾದ ನಂತರ, Paytm ವೆಬ್‌ಸೈಟ್‌ಗೆ ಭೇಟಿ ನೀಡಿ, '24*7 ಸಹಾಯ' ಆಯ್ಕೆ ಮೇಲೆ ಕ್ಲಿಕ್ ಮಾಡಿ. 'ವಂಚನೆ ಬಗ್ಗೆ ವರದಿ' (Report a fraud) ಆಯ್ಕೆ ಆರಿಸಿ.
ಅಲ್ಲಿ ಲಭ್ಯವಿರುವ 'ಮೆಸೇಜ್ ಅಸ್' (Message Us) ಲಿಂಕ್ ಅನ್ನು ಬಳಸಿಕೊಂಡು, ನಿಮ್ಮ Paytm ವಹಿವಾಟುಗಳು, ಇಮೇಲ್ ಮತ್ತು ಮೆಸೇಜ್‌ಗಳ ವಿವರಗಳನ್ನು ನೀಡಿ.
Paytm ನಿಮ್ಮ ಮನವಿಯನ್ನು ಪರಿಶೀಲಿಸಿ ಖಾತೆಯನ್ನು ಬ್ಲಾಕ್ ಮಾಡುತ್ತದೆ ಮತ್ತು ನಿಮಗೆ ದೃಢೀಕರಣ ಸಂದೇಶವನ್ನು ಕಳುಹಿಸುತ್ತದೆ.