ಹಾವುಗಳು ದಿನಕ್ಕೆ ಎಷ್ಟು ನೀರು ಕುಡಿಯುತ್ತವೆ? ದಾಹ ತೀರಿಸಿಕೊಳ್ಳಲು ಏನು ಮಾಡುತ್ತವೆ?

Published : Oct 09, 2026, 05:33 PM IST

ಬೇಸಿಗೆಯಲ್ಲಿ ಹಾವುಗಳು ನೀರು ಅರಸಿ ಜನವಸತಿ ಪ್ರದೇಶಗಳಿಗೆ ಬರುತ್ತವೆ. ಅವು ತಮ್ಮ ನೀರಿನ ಅಗತ್ಯವನ್ನು ಬೇಟೆಯಾಡುವ ಪ್ರಾಣಿಗಳಿಂದಲೇ ಪೂರೈಸಿಕೊಳ್ಳುತ್ತವೆ ಮತ್ತು ನೀರಿಲ್ಲದೆ ತಿಂಗಳುಗಟ್ಟಲೆ ಬದುಕಬಲ್ಲವು. ಹಾವುಗಳು ನಾಲಿಗೆಯಿಂದಲ್ಲದೆ ನೇರವಾಗಿ ಬಾಯಿಯಿಂದ ನೀರು ಕುಡಿಯುತ್ತವೆ.

PREV
15
ಹಾವು ಮತ್ತು ನೀರು

ಬೇಸಿಗೆ ಸಂದರ್ಭದಲ್ಲಿ ಹಾವುಗಳು ನೀರು ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಬರುತ್ತವೆ. ಹಾಗೆಯೇ ಸೋಶಿಯಲ್‌ ಮೀಡಿಯಾದಲ್ಲಿ ಜನರು ಹಾವುಗಳಿಗೆ ನೀರು ಕುಡಿಸುವ ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತವೆ. ಇಂದಿನ ಲೇಖನವು ಹಾವುಗಳು ದಿನಕ್ಕೆ ಎಷ್ಟು ನೀರು ಕುಡಿಯುತ್ತವೆ ಮತ್ತು ನೀರಿನ ಬೇಡಿಕೆಯನ್ನು ಹೇಗೆ ಪೂರೈಸಿಕೊಳ್ಳುತ್ತೆ ಎಂಬುದರ ಮಾಹಿತಿಯನ್ನು ಹೊಂದಿದೆ.

25
ಆಹಾರದಿಂದ ನೀರು

ಸಾಮಾನ್ಯವಾಗಿ ಹಾವುಗಳು ತಾವು ಬೇಟೆಯಾಡುವ ಇಲಿ, ಕಪ್ಪೆ ಸೇರಿದಂತೆ ಸಣ್ಣಪ್ರಾಣಿಗಳ ದೇಹದಿಂದ ತಮ್ಮ ದಾಹವನ್ನು ಪೂರೈಸಿಕೊಳ್ಳುತ್ತವೆ. ತಮ್ಮ ನೀರಿನ ಅಗತ್ಯತೆಯನ್ನು ಬಹುಪಾಲನ್ನು ಆಹಾರದಲ್ಲಿ ಪೂರೈಸಿಕೊಳ್ಳುತ್ತವೆ.

35
ನೀರಿಲ್ಲದೇ ಬದುಕುವ ಸಾಮಾರ್ಥ್ಯ

ಚಳಿಗಾಲ ಅಥವಾ ಮಳೆಗಾಲದಲ್ಲಿ ಹಾವುಗಳು ನೀರು ಕುಡಿಯದೇ ತಿಂಗಳುಗಟ್ಟಲೇ ಜೀವಿಸುತ್ತವೆ. ಹಾವುಗಳಿಗೆ ಪ್ರತಿದಿನವೂ ನೀರು ಕುಡಿಯಬೇಕೆಂಬ ಅಗತ್ಯತೆ ಇಲ್ಲ. ಹಾಗಾಗಿ ನೀರು ಸಿಕ್ಕಾಗ ಅಗತ್ಯತೆಯನ್ನು ಪೂರೈಸಿಕೊಳ್ಳುತ್ತವೆ ಎಂದು ಉರಗ ತಜ್ಞರು ಹೇಳುತ್ತಾರೆ. ನೀರು ಕುಡಿಯುವ ಪ್ರಮಾಣ ಹಾವಿನಿಂದ ಹಾವಿಗೆ ಬೇರೆಯಾಗಿರುತ್ತದೆ.

45
ಕನಿಷ್ಠ 20 ರಿಂದ 25 ಎಂಎಲ್

ಒಂದು ವೇಳೆ ಹಾವುಗಳು ದಿನನಿತ್ಯವೂ ನೀರು ಕುಡಿಯುತ್ತಿದ್ರೆ ಅದು ಕೇವಲ 20 ರಿಂದ 30 ಎಂಎಲ್ ಮಾತ್ರ ಆಗಿರುತ್ತದೆ. ಆದ್ರೆ ಹೆಬ್ಬಾವು ಸೇರಿದಂತೆ ದೈತ್ಯ ಹಾವುಗಳು ಇದಕ್ಕಿಂತ ಕೊಂಚ ಹೆಚ್ಚು ನೀರು ಕುಡಿಯಬಹುದು. ಕಾಳಿಂಗ ಸರ್ಪವೂ ಸುಮಾರು 60 ದಿನಗಳವರೆಗೆ ನೀರು ಕುಡಿಯದೇ ಜೀವಿಸುವ ಸಾಮರ್ಥ್ಯವನ್ನು ಹೊಂದಿವೆ.

55
ಹಾವುಗಳು ನೀರು ಹೇಗೆ ಕುಡಿಯುತ್ತವೆ?

ಹಾವುಗಳು ಇತರೆ ಪ್ರಾಣಿಗಳಂತೆ ನಾಲಿಗೆಯಿಂದ ನೀರು ಕುಡಿಯಲ್ಲ. ಹಾವುಗಳು ನೇರವಾಗಿ ತಮ್ಮ ಬಾಯಿಯ ಮೂಲಕ ನೀರನ್ನು ತಮ್ಮ ದೇಹಕ್ಕೆ ತೆಗೆದುಕೊಳ್ಳುತ್ತವೆ. ಬೇಸಿಗೆಯಲ್ಲಿ ದೀರ್ಘ ಸಮಯ ನೀರು ಸಿಗದಿದ್ದಾಗ ಜನವಸತಿ ಪ್ರದೇಶದತ್ತ ಬಂದಿರುತ್ತವೆ. ಹಾಗಾಗಿ ಅವುಗಳಿಗೆ ಹಾನಿಯುಂಟು ಮಾಡಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories