ದಿನವಲ್ಲ, ತಿಂಗಳುಗಟ್ಟಲೆ ಉಪವಾಸವಿದ್ದರೂ ಹಾವು ಸಾಯೋದಿಲ್ಲ! ಹೇಗೆ ಗೊತ್ತಾ?

Published : Apr 04, 2026, 05:29 PM IST

Snakes Can Survive Without Food for Months? ಹಾವು ಅನ್ನೋದ್ರೇ ಹಲವರಿಗೆ ಭಯ… ಆದರೆ ಈ ಜೀವಿಯ ಬಗ್ಗೆ ಕೆಲವೊಂದು ಅಚ್ಚರಿಯ ಸತ್ಯಗಳು ನಿಮಗೆ ಗೊತ್ತಿಲ್ಲ! ಹಸಿವಾದರೂ ಹಾವು ಎಷ್ಟು ದಿನ ಬದುಕಬಲ್ಲದು ಗೊತ್ತಾದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ. 

PREV
15
ಪ್ರಪಂಚದಾದ್ಯಂತ ಸುಮಾರು 3000ಕ್ಕೂ ಹೆಚ್ಚು ಜಾತಿಯ ಹಾವು

ಪ್ರಪಂಚದಾದ್ಯಂತ ಸುಮಾರು 3000ಕ್ಕೂ ಹೆಚ್ಚು ಜಾತಿಯ ಹಾವುಗಳು ಇದ್ದು, ಪ್ರತಿಯೊಂದು ಹಾವು ತನ್ನದೇ ಆದ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಹೊಂದಿದೆ. ಭಾರತದಲ್ಲಿಯೂ ಕೋಬ್ರಾ, ಕ್ರೈಟ್, ವೈಪರ್ ಮುಂತಾದ ವಿಷಕಾರಿ ಹಾವುಗಳು ಹೆಚ್ಚು ಕಂಡುಬರುತ್ತವೆ.

25
ಹಾವು ಆಹಾರವಿಲ್ಲದೆ ಎಷ್ಟು ದಿನ ಬದುಕುತ್ತೆ?

ಸಾಮಾನ್ಯವಾಗಿ ಹೆಚ್ಚಿನ ಹಾವುಗಳು 10 ರಿಂದ 12 ದಿನಗಳವರೆಗೆ ಆಹಾರವಿಲ್ಲದೆ ಬದುಕಬಲ್ಲವು. ಆದರೆ ಅಚ್ಚರಿಯ ವಿಷಯ ಏನೆಂದರೆ, ಕೆಲವು ಹಾವು ಪ್ರಭೇದಗಳು ತಿಂಗಳುಗಳ ಕಾಲ ಆಹಾರವಿಲ್ಲದೇ ಜೀವಿಸಬಲ್ಲವು!

35
ಇಷ್ಟು ದಿನ ಹೇಗೆ ಬದುಕುತ್ತವೆ?

ಹಾವುಗಳ ದೇಹದಲ್ಲಿ ಮೆಟಾಬಾಲಿಸಂ ತುಂಬಾ ನಿಧಾನವಾಗಿರುತ್ತದೆ. ಅಂದರೆ, ಅವು ಶಕ್ತಿ ಕಡಿಮೆ ಬಳಕೆ ಮಾಡುತ್ತವೆ. ಇದರಿಂದಾಗಿ ಕಡಿಮೆ ಆಹಾರದಲ್ಲಿಯೇ ದೀರ್ಘಕಾಲ ಬದುಕುವ ಸಾಮರ್ಥ್ಯ ಅವುಗಳಿಗೆ ಇದೆ.

45
ಜೀವನಾವಧಿ ಎಷ್ಟು?

ನಾಗರಹಾವುಗಳು ಸುಮಾರು 25-30 ವರ್ಷಗಳವರೆಗೆ ಬದುಕಬಹುದು. ಕ್ರೈಟ್ ಹಾವುಗಳು 10-15 ವರ್ಷಗಳವರೆಗೆ ಜೀವಿಸುತ್ತವೆ. ಹಾವುಗಳ ವಯಸ್ಸು ಹೆಚ್ಚಾದಂತೆ ಅವುಗಳ ಬದುಕುವ ಸಾಮರ್ಥ್ಯವೂ ಹೆಚ್ಚಾಗುತ್ತದೆ.

55
ತಿಂಗಳುಗಟ್ಟಲೆ ಏನೂ ತಿನ್ನದೆ ಬದುಕಬಲ್ಲವು

ಹಾವುಗಳು ಆಹಾರಕ್ಕಿಂತಲೂ ವಾತಾವರಣದ ತೇವಾಂಶ, ಅಡಗಿಕೊಳ್ಳುವ ಸ್ಥಳ ಇತ್ಯಾದಿಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತವೆ. ಈ ಪರಿಸ್ಥಿತಿಗಳು ಸರಿಯಾಗಿದ್ದರೆ, ಅವು ತಿಂಗಳುಗಟ್ಟಲೆ ಏನೂ ತಿನ್ನದೆ ಬದುಕಬಲ್ಲವು. ಹೆಬ್ಬಾವು (Python) ಇದಕ್ಕೆ ಉತ್ತಮ ಉದಾಹರಣೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories