ಮನೆ ಕ್ಲೀನ್‌ ಮಾಡಲು ಬೆಳಿಗ್ಗೆ ಅಥವಾ ಸಂಜೆ ಇದ್ರಲ್ಲಿ ಯಾವುದು ಬೆಸ್ಟ್ ? ತಜ್ಞರು ಹೇಳಿದ ಸೀಕ್ರೆಟ್!

Published : Jul 30, 2026, 03:03 PM IST

house cleaning time : ಮನೆ ಕ್ಲೀನ್‌ ಆಗಿದ್ರೆ ಮನಸ್ಸು ಸಂತೋಷವಾಗಿರುತ್ತೆ. ಪ್ರತಿ ದಿನ ಮನೆ ಕ್ಲೀನ್‌ ಮಾಡುವವರಿದ್ದಾರೆ. ಆದ್ರೆ ಮನೆಯನ್ನು ಬರೀ ಸ್ವಚ್ಛವಾಗಿಡಲು ಕ್ಲೀನ್‌ ಮಾಡೋದಲ್ಲ. ಕ್ಲೀನ್‌ ಮಾಡುವ ಸೂಕ್ತ ಸಮಯ ತಿಳಿದಿರಬೇಕು. ಮನೆ ಒರೆಸಲು ಉತ್ತಮ ಸಮಯ ಯಾವುದು ಗೊತ್ತಾ?

PREV
14
ಮನೆ ಕ್ಲೀನ್‌ ಮಾಡಲು ಉತ್ತಮ ಸಮಯ

ಮನೆ ಒರೆಸುವಾಗ ಮನೆಯೊಳಗೆ ಜನರ ಓಡಾಟ ಕಡಿಮೆ ಇರುವ ಸಮಯವನ್ನು ಆಯ್ಕೆ ಮಾಡುವುದು ಉತ್ತಮ. ಬೆಳಿಗ್ಗೆ ಎದ್ದ ತಕ್ಷಣ ಒರೆಸುವ ಬದಲು, ಮನೆಯವರು ಶಾಲೆ, ಕಚೇರಿ ಅಥವಾ ತಮ್ಮ ಕೆಲಸಗಳಿಗೆ ತೆರಳಿದ ಬಳಿಕ ಒರೆಸಿದರೆ ನೆಲ ಹೆಚ್ಚು ಹೊತ್ತು ಸ್ವಚ್ಛವಾಗಿರುತ್ತದೆ. ಸಂಜೆ ಒರೆಸುವುದಾದರೆ, ಅಡುಗೆ ಸೇರಿದಂತೆ ದಿನದ ಎಲ್ಲಾ ಕೆಲಸಗಳು ಮುಗಿದ ನಂತರ ಒರೆಸುವುದು ಉತ್ತಮ. ಇದರಿಂದ ನೆಲ ಒಣಗಲು ಸಾಕಷ್ಟು ಸಮಯ ಸಿಗುತ್ತದೆ ಮತ್ತು ಮತ್ತೆ ಕೊಳಕಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

24
ಒರೆಸುವ ಮೊದಲು ಏನು ಮಾಡಬೇಕು?

ಎತ್ತರದ ಸ್ಥಳಗಳು ಮತ್ತು ಪೀಠೋಪಕರಣಗಳ ಧೂಳು ತೆಗೆಯುವ ಕೆಲಸ ಮಾಡಿ. ಆಟಿಕೆಗಳು, ಬೂಟುಗಳು ಮತ್ತು ಇತರ ವಸ್ತುಗಳನ್ನು ಮೊದಲು ಕೋಣೆಯಿಂದ ದೂರವಿಡಿ. ಕಪಾಟು, ಪೀಠೋಪಕರಣಗಳ ಧೂಳು ತೆಗೆಯಿರಿ. ನಂತ್ರ ನೀವು ನೆಲವನ್ನು ಗುಡಿಸಬೇಕು. ಕೊನೆಯದಾಗಿ ಒದ್ದೆಯಾದ ಬಟ್ಟೆಯಿಂದ ಒರೆಸಬೇಕು.

34
ಅತಿಯಾಗಿ ನೀರು ಬಳಸಬೇಡಿ

ಒರೆಸುವಾಗ ಅತಿಯಾಗಿ ನೀರು ಬಳಸುವುದು ಸರಿಯಲ್ಲ. ವಿಶೇಷವಾಗಿ ಮರದ ಅಥವಾ ಲ್ಯಾಮಿನೇಟ್ ನೆಲಕ್ಕೆ ಹೆಚ್ಚು ನೀರು ಹಾನಿ ಉಂಟುಮಾಡಬಹುದು. ಒರೆಸಿದ ನಂತರ ನೆಲ ಸಂಪೂರ್ಣ ಒಣಗುವವರೆಗೆ ಅದರ ಮೇಲೆ ನಡೆಯಬೇಡಿ. ಒದ್ದೆಯಾಗಿದ್ದಾಗ ನಡೆದಾಡಿದ್ರೆ ನೆಲ ಕೊಳಕಾಗುತ್ತೆ ಜೊತೆಗೆ ಜಾರಿ ಬೀಳುವ ಅಪಾಯವಿರುತ್ತದೆ.

44
ಪ್ರತಿದಿನ ಇಡೀ ಮನೆ ಒರೆಸಬೇಕೇ?

ವಾರದ ಎಲ್ಲ ದಿನ ಮನೆ ಒರೆಸುವ ಅಗತ್ಯವಿಲ್ಲ. ಆಹಾರ ಚೆಲ್ಲಿದ ಸ್ಥಳ, ಮಕ್ಕಳಿಂದ ಕೊಳಕಾದ ಭಾಗ ಅಥವಾ ಹೊರಗಿನಿಂದ ಬಂದ ಮಣ್ಣಿನ ಗುರುತು ಇರುವ ಜಾಗವನ್ನು ಮಾತ್ರ ತಕ್ಷಣ ಸ್ವಚ್ಛಗೊಳಿಸಿದರೂ ಸಾಕು.ಸಣ್ಣ ಸ್ವಚ್ಛತಾ ಅಭ್ಯಾಸಗಳು ನಿಮ್ಮ ಮನೆಯನ್ನು ಹೆಚ್ಚು ಹೊತ್ತು ಹೊಳೆಯುವಂತೆ ಮಾಡುತ್ತವೆ. ಆದ್ದರಿಂದ ಸರಿಯಾದ ಕ್ರಮ ಮತ್ತು ಸರಿಯಾದ ಸಮಯದಲ್ಲಿ ಮನೆ ಒರೆಸಿ,

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories