ನಾಯಿ ಯಾವಾಗ್ಲೂ ಕಾರ್‌ ಟಯರ್‌, ಕಂಬದ ಮೇಲೆ ಮೂತ್ರ ವಿಸರ್ಜಿಸೋದು ಯಾಕೆ?

First Published Mar 18, 2023, 4:37 PM IST

ನಮ್ಮ ದಿನನಿತ್ಯದ ಜೀವನದಲ್ಲಿ ನಾವು ದಿನವೂ ನೋಡುವ ಅನೇಕ ವಿಷಯಗಳಿವೆ. ಆದರೆ ಅವುಗಳ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ಯಾರೂ ಪ್ರಯತ್ನಿಸುವುದಿಲ್ಲ. ಅಂಥಾ ವಿಷಯಗಳಲ್ಲೊಂದು ನಾಯಿ ಟೈರ್ ಮೇಲೆ ಮೂತ್ರ ಮಾಡುವುದು. ಇದರ ಹಿಂದಿರುವ ಕಾರಣವೇನು ?

ಮನುಷ್ಯ, ಪ್ರಾಣಿಗಳ ಜೀವನದಲ್ಲಿ ಹಲವಾರು ಕುತೂಹಲಕಾರಿ ವಿಷಯಗಳಿವೆ. ಆದರೆ ಪ್ರತಿನಿತ್ಯವೂ ನಾವದನ್ನು ನೋಡುತ್ತಲೇ ಇರುವ ಕಾರಣ, ಅವು ಯಾವುವೂ ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ನಮ್ಮ ಕಣ್ಣುಗಳು ವಿಚಿತ್ರವೆನಿಸುವ ಅಂಥಾ ಘಟನೆಗಳಿಗೆ ಒಗ್ಗಿಕೊಂಡಿವೆ.

ಅಂತಹ ಒಂದು ವಿಷಯವೆಂದರೆ ನಾಯಿಗಳು ಟೈರ್ ಅಥವಾ ಕಂಬಗಳ ಮೇಲೆ ಮೂತ್ರ ವಿಸರ್ಜಿಸುವುದು. ನಾಯಿಗಳು ಮೂತ್ರ ವಿಸರ್ಜಿಸಲು ಈ ಎರಡು ತಾಣಗಳನ್ನು ಏಕೆ ಬಳಸುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ಎಲ್ಲರೂ ನಾಯಿಗಳು ಟೈರ್ ಮೇಲೆ ಮೂತ್ರ ಮಾಡಿ ಕೊಳಕು ಮಾಡುತ್ತದೆ ಅಂತ ಬೈಯ್ಯುತ್ತಾರೆ. ಆದ್ರೆ ದಿನನಿತ್ಯ ಅನೇಕ ನಾಯಿಗಳು ಕಂಬಕ್ಕೆ ಮೂತ್ರ ವಿಸರ್ಜನೆ ಮಾಡುತ್ತಲೇ ಇರುತ್ತದೆ. ಆದರೆ ಯಾಕೆ ಅಂತ ಯಾರು ಸಹ ಯೋಚಿಸುವುದಿಲ್ಲ. ಶ್ವಾನ ತಜ್ಞರು ಪ್ರಾಣಿಗಳ ಈ ನಡವಳಿಕೆಯ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿದ್ದಾರೆ. ಮತ್ತು ನಾಯಿ ಯಾಕೆ ಹೀಗೆ ಮೂತ್ರ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ.

ಕಾರಿನ ಚಕ್ರ ಕಂಡರೆ ನಾಯಿ ಅದರ ಮೇಲೆ ಮೂತ್ರ ವಿಸರ್ಜಿಸುತ್ತದೆ. ರಸ್ತೆಯಲ್ಲಿ ಈ ದೃಶ್ಯವನ್ನು ನೋಡದೇ ಇರುವವರು ಕಡಿಮೆ. ಆದರೆ ನಾಯಿಗಳು ಮೂತ್ರ ವಿಸರ್ಜಿಸಲು ಈ ಸ್ಥಳವನ್ನೇ ಏಕೆ ಆರಿಸಿಕೊಳ್ಳುತ್ತವೆ. ಕಂಬ ಅಥವಾ ಟೈರ್ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ ನಾಯಿಗಳು ತಮ್ಮ ಪ್ರದೇಶವನ್ನು ಗುರುತಿಸುತ್ತವೆ. ಇದು ಅವರ ಇತರ ಸಹಚರರನ್ನು ಸಂಪರ್ಕಿಸುವ ಮಾರ್ಗವಾಗಿದೆ.

ನಾಯಿಯು ಕಂಬ ಅಥವಾ ಟೈರ್‌ನಲ್ಲಿ ಮೂತ್ರ ವಿಸರ್ಜಿಸಿದಾಗ, ಅದು ಮಾಹಿತಿಯನ್ನು ರವಾನಿಸುತ್ತದೆ. ಅದು ನಂತರ ಆ ಕಂಬ ಅಥವಾ ಟೈರ್ ಅನ್ನು ವಾಸನೆ ಮಾಡುವ ಇತರ ನಾಯಿಗಳಿಗೆ ಲಭ್ಯವಾಗುತ್ತದೆ. ಇದನ್ನು ಅನುಸರಿಸಿ, ಹೊಸ ನಾಯಿ ಕೂಡ ತನ್ನ ಗುರುತು ಬಿಡುತ್ತದೆ.

ನಾಯಿಗಳು ಅಡ್ಡ ಮೇಲ್ಮೈಗಿಂತ ಲಂಬವಾದ ಮೇಲ್ಮೈಗಳಲ್ಲಿ ಮೂತ್ರ ವಿಸರ್ಜಿಸಲು ಬಯಸುತ್ತವೆ. ಟೈರ್ ಮತ್ತು ಕಂಬದ ಕೆಳಗಿನ ಭಾಗವು ನಾಯಿಯ ಮೂಗಿನ ವ್ಯಾಪ್ತಿಯಲ್ಲಿದೆ. ಆದ್ದರಿಂದ, ಅವರು ಇತರ ನಾಯಿಗಳ ಮೂಗಿನ ಮಟ್ಟದಲ್ಲಿ ತಮ್ಮ ಗುರುತು ಬಿಡುತ್ತಾರೆ. ನಾಯಿ ಮೂತ್ರದ ವಾಸನೆಯು ರಬ್ಬರ್ ಟೈರ್‌ನಲ್ಲಿ ದೀರ್ಘಕಾಲ ಉಳಿಯುತ್ತದೆ. ಮತ್ತೊಂದೆಡೆ, ನಾಯಿಗಳು ನೆಲದ ಮೇಲೆ ಮೂತ್ರ ವಿಸರ್ಜಿಸಿದರೆ, ಅವುಗಳ ವಾಸನೆಯು ಅಲ್ಪಾವಧಿಯಲ್ಲಿ ಕೊನೆಗೊಳ್ಳುತ್ತದೆ.

ನಾಯಿ ರಬ್ಬರ್ ಟೈರ್ ಮೇಲೆ ಮೂತ್ರ ವಿಸರ್ಜಿಸಲು ಇನ್ನೊಂದು ಕಾರಣವಿದೆ. ನಾಯಿ ರಬ್ಬರ್ ವಾಸನೆಯನ್ನು ಇಷ್ಟಪಡುತ್ತದೆ. ಹೀಗಾಗಿ ಟೈರ್ ವಾಸನೆಗೆ ಆಕರ್ಷಿತರಾಗಿ ಅದರ ಬಳಿ ಹೋಗಿ ಮೂತ್ರ ವಿಸರ್ಜಿಸಿ ವಾಪಸ್ ಆಗುತ್ತದೆ.

click me!