ದಾಸವಾಳ ಗಿಡದಲ್ಲಿ ಹೂವು ಬಿಡದಿರಲು ಹಲವು ಕಾರಣಗಳಿವೆ. ಕೆಲವೊಮ್ಮೆ ಎಷ್ಟೇ ನೀರು ಹಾಕಿ ಆರೈಕೆ ಮಾಡಿದ್ರೂ ಹೂಗಳು ಅರಳಲ್ಲ. ಈ ಸಂದರ್ಭದಲ್ಲಿ ರಾಸಾಯನಿಕ ಬಳಕೆ ಮಾಡದೇ ಮನೆ ಮದ್ದು ಬಳಸಿ. ತರಕಾರಿ ಸಿಪ್ಪೆ ಸೇರಿಸೋದರಿಂದ ಹೂವು ಬಿಡುವ ಪ್ರಮಾಣ ಹೆಚ್ಚಾಗುತ್ತದೆ.
ಮನೆ ಆವರಣದಲ್ಲಿ ದಾಸವಾಳದ ಒಂದು ಗಿಡವಿದ್ದರೆ, ದಿನನಿತ್ಯದ ಪೂಜೆಗೆ ಬೇಕಾಗುವ ಹೂವಿನ ಕೊರತೆಯನ್ನು ನೀಗಿಸುತ್ತದೆ. ಆದ್ರೆ ಕೆಲವೊಮ್ಮೆ ದಾಸವಾಳದ ಗಿಡ ದಟ್ಟವಾಗಿಯೂ ಮತ್ತು ಎತ್ತರವಾಗಿಯೂ ಬೆಳೆದರೂ ಹೂ ಬಿಟ್ಟಿರಲ್ಲ ಅಥವಾ ಹೂವಿನ ಪ್ರಮಾಣ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ನೋಡೋಣ ಬನ್ನಿ.
25
ಹೂ ಬಿಡದಿರಲು ಕಾರಣ ಏನು?
ಸೂರ್ಯನ ಬೆಳಕಿನ ಕೊರತೆ, ಅಸಮರ್ಪಕ ನೀರು ನಿರ್ವಹಣೆ, ತಪ್ಪು ಗೊಬ್ಬರ ಬಳಕೆ ಮತ್ತು ಕೀಟಗಳ ಬಾಧೆಯಿಂದ ಹೂ ಬಿಡಲು ಪ್ರಮುಖ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಹೂ ಅರಳುವ ಮುಂಚೆಯೇ ಮೊಗ್ಗು ಉದುರಿ ಬೀಳುತ್ತದೆ. ದಾಸವಾಳ ಗಿಡದ ಮೇಲೆ ದಿನಕ್ಕೆ ಕನಿಷ್ಠ 6 ರಿಂದ 7 ಗಂಟೆಗಳ ಕಾಲ ಬಿಸಿಲು ಬೀಳುವಂತಿರಬೇಕು.
35
ದಾಸವಾಳ ಗಿಡ
ದಾಸವಾಳ ಗಿಡವನ್ನು ನೆರಳಿನಲ್ಲಿ ಬೆಳೆಸೋದು ತಪ್ಪು ಎಂದು ತೋಟಗಾರಿಕಾ ತಜ್ಞರು ಸಲಹೆ ನೀಡುತ್ತಾರೆ. ಕೆಲವೊಂದು ತಪ್ಪುಗಳನ್ನು ಸರಿಪಡಿಸಿಕೊಳ್ಳೋದರ ಜೊತೆಯಲ್ಲಿ ಒಂದು ತರಕಾರಿಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಬೇರಿನ ಭಾಗದಲ್ಲಿ ಹಾಕಬೇಕು.
ದಿನನಿತ್ಯ ಅಡುಗೆಮನೆಯಲ್ಲಿ ಈರುಳ್ಳಿ ಬಳಕೆ ಮಾಡಲಾಗುತ್ತದೆ. ಈರುಳ್ಳಿ ಕತ್ತರಿಸುವಾಗ ತೆಗೆಯುವ ಸಿಪ್ಪೆಯನ್ನು ಎಸೆಯದೇ ಒಂದೆಡೆ ಸಂಗ್ರಹಿಸಿ ಬಿಸಿನಲ್ಲಿ ಒಣಗಿಸಿಕೊಳ್ಳಿ. ನಂತರ ಅದನ್ನು ಪುಡಿ ಮಾಡಿಕೊಳ್ಳಿ. ಈಗ ದಾಸವಾಳ ಗಿಡದ ಬುಡ ಭಾಗದಲ್ಲಿನ ಮಣ್ಣನ್ನು ಸಡಿಲಗೊಳಿಸಿಕೊಳ್ಳಬೇಕು. ನಂತರ ಈರುಳ್ಳು ಪುಡಿಯನ್ನು ಹಾಕಿ, ಮೇಲೆ ಮಣ್ಣಿನಿಂದ ಮುಚ್ಚಿ ನೀರು ಸಿಂಪಡಿಸಿಕೊಳ್ಳಿ.
55
ಕೀಟಭಾದೆಗೆ ಪರಿಹಾರ
ಚಳಿಗಾಲದ ಕೊನೆಯಲ್ಲಿ ಅಥವಾ ವಸಂತ ಋತುವಿನ ಆರಂಭದಲ್ಲಿ ಮಾತ್ರ ಗಿಡವನ್ನು ಲಘುವಾಗಿ ಕತ್ತರಿಸಿ. ಕೆಲವೊಮ್ಮೆ ಸಾರಜನಕದ ಅಂಶ ಹೆಚಾದ್ರೂ ಹೂಗಳು ಆರಳದಿರಲು ಪ್ರಮುಖ ಕಾರಣವಾಗುತ್ತದೆ. ಕೀಟಭಾದೆಯಾಗಿದ್ರೆ ಗಿಡಕ್ಕೆ ನಿಯಮಿತವಾಗಿ ಬೇವಿನ ಎಣ್ಣೆ ಮತ್ತು ಡಿಟರ್ಜೆಂಟ್ ನೀರನ್ನು ಸಿಂಪಡಿಸುವ ಕೆಲಸವನ್ನು ಮಾಡಬೇಕಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.