ಫ್ರಿಡ್ಜ್ ಕ್ಲೀನಿಂಗ್ ವೇಳೆ ಈ ಜಾಗವನ್ನು ಮಾತ್ರ ಮರೆಯಬೇಡಿ: ಇಲ್ಲಿದೆ ಈಸಿ ಟಿಪ್ಸ್!

Published : Oct 19, 2026, 09:30 PM IST

ಫ್ರಿಡ್ಜ್‌ನ ತರಕಾರಿ ಡ್ರಾಯರ್‌ನಲ್ಲಿ ಸೇರಿಕೊಳ್ಳುವ ಬ್ಯಾಕ್ಟೀರಿಯಾ ಹಾಗೂ ಕೆಟ್ಟ ವಾಸನೆಯನ್ನು ಓಡಿಸಲು ಅದನ್ನು ಸರಿಯಾಗಿ ಕ್ಲೀನ್ ಮಾಡುವುದು ಹೇಗೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

PREV
14
ಫ್ರಿಡ್ಜ್ ವೆಜಿಟೇಬಲ್ ಡ್ರಾಯರ್ ಕ್ಲೀನ್ ಮಾಡಲು ಟಿಪ್ಸ್

2023ರಲ್ಲಿ 'Food Microbiology' ಜರ್ನಲ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ನಾವು ಮನೆಯಲ್ಲಿ ಬಳಸುವ ಫ್ರಿಡ್ಜ್‌ನ ತರಕಾರಿ ಡ್ರಾಯರ್‌ನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುತ್ತವೆ ಅನ್ನೋದೇ ಆ ಶಾಕಿಂಗ್ ನ್ಯೂಸ್. ಹಾಗಾಗಿ, ಫ್ರಿಡ್ಜ್ ವೆಜಿಟೇಬಲ್ ಡ್ರಾಯರ್ ಅನ್ನು ಬರೀ ಒದ್ದೆ ಬಟ್ಟೆಯಲ್ಲಿ ಒರೆಸಿದರೆ ಸಾಲದು, ಸರಿಯಾಗಿ ಕ್ಲೀನ್ ಮಾಡಬೇಕು.

24
ಮನೆಯಲ್ಲಿರುವ ವಸ್ತುಗಳೇ ಸಾಕು

ದುಬಾರಿ ಕೆಮಿಕಲ್ಸ್ ಇಲ್ಲದೆ, ಅಡುಗೆಮನೆಯಲ್ಲಿರುವ ವಸ್ತುಗಳನ್ನು ಬಳಸಿಯೇ ಫ್ರಿಡ್ಜ್ ಡ್ರಾಯರ್ ಅನ್ನು ಸುಲಭವಾಗಿ ಕ್ಲೀನ್ ಮಾಡಬಹುದು. ಮೊದಲು ಒಳಗಿರುವ ತರಕಾರಿ, ಹಣ್ಣುಗಳನ್ನು ಹೊರತೆಗೆದು, ಕೊಳೆತ ಹಾಗೂ ಫಂಗಸ್ ಬಂದಿರುವ ವಸ್ತುಗಳನ್ನು ಕಸದ ಬುಟ್ಟಿಗೆ ಎಸೆಯಿರಿ. ಕಂಪನಿಯ ಸೂಚನೆಯಂತೆ ಡ್ರಾಯರ್ ಅನ್ನು ನಿಧಾನವಾಗಿ ಹೊರತೆಗೆಯಿರಿ. ಕಷ್ಟವಾದರೆ ಬಲವಂತವಾಗಿ ಎಳೆಯಬೇಡಿ.

ಸ್ವಲ್ಪ ಉಗುರುಬೆಚ್ಚಗಿನ ನೀರಿಗೆ ಪಾತ್ರೆ ತೊಳೆಯುವ ಲಿಕ್ವಿಡ್ ಮಿಕ್ಸ್ ಮಾಡಿ. ಮೈಕ್ರೋಫೈಬರ್ ಬಟ್ಟೆ ಅಥವಾ ಮೃದುವಾದ ಸ್ಪಾಂಜ್ ಬಳಸಿ ಡ್ರಾಯರ್‌ನ ಒಳಭಾಗ ಹಾಗೂ ತಳಭಾಗವನ್ನು ಚೆನ್ನಾಗಿ ಒರೆಸಿ. ಅಂಟಂಟಾದ ಕಲೆಗಳಿದ್ದರೆ, ಸೋಪು ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಸ್ವಲ್ಪ ಹೊತ್ತು ಅದರ ಮೇಲೆ ಇಟ್ಟು ಆಮೇಲೆ ಒರೆಸಿದರೆ ಕಲೆ ಬೇಗ ಹೋಗುತ್ತದೆ.

34
ವಾಸನೆ ಓಡಿಸಲು ಬೇಕಿಂಗ್ ಸೋಡಾ

ತರಕಾರಿ ರಸ ಹಾಗೂ ಹಣ್ಣಿನ ಕಸದಿಂದ ಬರುವ ಕೆಟ್ಟ ವಾಸನೆಯನ್ನು ಓಡಿಸಲು ಬೇಕಿಂಗ್ ಸೋಡಾ ಬೆಸ್ಟ್. 1 ಅಥವಾ 2 ಟೇಬಲ್ ಚಮಚ ಬೇಕಿಂಗ್ ಸೋಡಾವನ್ನು ಉಗುರುಬೆಚ್ಚಗಿನ ನೀರಿಗೆ ಸೇರಿಸಿ, ಆ ನೀರಿನಿಂದ ಡ್ರಾಯರ್ ಒರೆಸಿ. ಹಠಮಾರಿ ಕಲೆಗಳನ್ನು ನಿಧಾನವಾಗಿ ಉಜ್ಜಿ ತೆಗೆದ ಮೇಲೆ, ಸೋಪಿನ ಅಂಶ ಹೋಗುವಂತೆ ಶುದ್ಧ ನೀರಿನಿಂದ ತೊಳೆಯಿರಿ.

ಡ್ರಾಯರ್‌ನ ಹ್ಯಾಂಡಲ್, ಮೂಲೆಗಳು ಹಾಗೂ ಸಣ್ಣ ಗ್ಯಾಪ್‌ಗಳಲ್ಲಿ ಕೊಳೆ ಸುಲಭವಾಗಿ ಅಡಗಿರುತ್ತದೆ. ಇದನ್ನು ಕ್ಲೀನ್ ಮಾಡಲು ಹಳೆಯ ಟೂತ್ ಬ್ರಷ್ ಅಥವಾ ಮೃದುವಾದ ಬ್ರಷ್ ಬಳಸುವುದು ಜಾಣತನ. ಗಟ್ಟಿಯಾದ ಕಲೆಗಳ ಮೇಲೆ ಸೋಪು ನೀರು ಹಾಕಿ ನೆನೆಸಿದ ಮೇಲೆ ಉಜ್ಜಬಹುದು. ಆದರೆ ಚೂಪಾದ ವಸ್ತುಗಳಿಂದ ಕೆರೆಯಬೇಡಿ.

ಬರೀ ಡ್ರಾಯರ್ ತೊಳೆದರೆ ಕೆಲಸ ಮುಗಿಯಲ್ಲ. ಅದು ಕೂರುವ ಫ್ರಿಡ್ಜ್‌ನ ತಳಭಾಗ ಹಾಗೂ ಸೈಡ್ ಗೋಡೆಗಳಲ್ಲೂ ಕೊಳೆ ಕೂತಿರುತ್ತದೆ. ಉಗುರುಬೆಚ್ಚಗಿನ ಸೋಪು ನೀರಿನಿಂದ ಆ ಜಾಗಗಳನ್ನು ಒರೆಸಿ, ಆಮೇಲೆ ಒದ್ದೆ ಬಟ್ಟೆಯಿಂದ ಕ್ಲೀನ್ ಮಾಡಿ.

ಈ ಟೈಮ್‌ನಲ್ಲಿ ಫ್ರಿಡ್ಜ್‌ನ ಎಲೆಕ್ಟ್ರಿಕ್ ಪಾರ್ಟ್ಸ್ ಹಾಗೂ ಗಾಳಿ ಬರುವ ರಂಧ್ರಗಳ ಒಳಗೆ ನೀರು ಹೋಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಕೊನೆಯದಾಗಿ ಒಣ ಬಟ್ಟೆಯಿಂದ ಉಳಿದಿರುವ ತೇವಾಂಶವನ್ನು ಸಂಪೂರ್ಣವಾಗಿ ಒರೆಸಿ ತೆಗೆಯಿರಿ.

44
ಡ್ರಾಯರ್ ಒಣಗಿಸುವುದು ಬಹಳ ಮುಖ್ಯ

ತೊಳೆದ ಡ್ರಾಯರ್ ಅನ್ನು ಹಸಿಯಾಗಿಯೇ ಮತ್ತೆ ಫ್ರಿಡ್ಜ್ ಒಳಗೆ ಇಟ್ಟರೆ ಫಂಗಸ್ ಬೆಳೆಯಲು ನಾವೇ ದಾರಿ ಮಾಡಿಕೊಟ್ಟಂತೆ. ಶುದ್ಧವಾದ ಬಟ್ಟೆಯಿಂದ ಒರೆಸಿ, ಗಾಳಿಯಾಡುವ ಜಾಗದಲ್ಲಿ ಅದನ್ನು ಸಂಪೂರ್ಣವಾಗಿ ಒಣಗಲು ಬಿಡಿ. ಫ್ರಿಡ್ಜ್‌ನ ಒಳಭಾಗ ಹಾಗೂ ಡ್ರಾಯರ್ ಎರಡೂ ಚೆನ್ನಾಗಿ ಒಣಗಿದ ಮೇಲೆಯೇ ಮತ್ತೆ ಫಿಕ್ಸ್ ಮಾಡಬೇಕು.

ತಿಂಗಳಿಗೊಮ್ಮೆಯಾದರೂ ಹೀಗೆ ಕಂಪ್ಲೀಟ್ ಆಗಿ ಕ್ಲೀನ್ ಮಾಡುವುದನ್ನು ರೂಢಿಸಿಕೊಳ್ಳಿ. ತೊಳೆದ ತರಕಾರಿಗಳನ್ನು ಹಸಿಯಾಗಿಯೇ ಡ್ರಾಯರ್‌ನಲ್ಲಿ ಮುಚ್ಚಿಡುವುದನ್ನು ತಪ್ಪಿಸಿ. ಚೆಲ್ಲಿದ ಆಹಾರ ಪದಾರ್ಥಗಳನ್ನು ತಕ್ಷಣವೇ ಉಗುರುಬೆಚ್ಚಗಿನ ಸೋಪು ನೀರಿನಿಂದ ಒರೆಸಿ ಕ್ಲೀನ್ ಮಾಡಬೇಕು ಎಂದು ಅಮೆರಿಕದ ಕೃಷಿ ಇಲಾಖೆಯ ವಿಭಾಗ ಸಲಹೆ ನೀಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories