Jasmine Flower Storage: ಮಲ್ಲಿಗೆ ಹೂವುಗಳು ತಂದ ಕೆಲವೇ ಗಂಟೆಗಳಲ್ಲಿ ಕಪ್ಪಾಗುವುದು ಅಥವಾ ಬಾಡಿ ಹೋಗುವುದು ಅನೇಕರ ದೂರು. ಆದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಮಲ್ಲಿಗೆ ಹೂವಿನ ತಾಜಾತನ ಮತ್ತು ಸುಗಂಧವನ್ನು ಒಂದು ವಾರದವರೆಗೆ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಬೇಗನೆ ಬಾಡುತ್ತಿದೆಯೇ? ಬೇಸಿಗೆ ಇರಲಿ, ಹಬ್ಬಗಳಿರಲಿ ಅಥವಾ ಶುಭ ಸಮಾರಂಭಗಳಿರಲಿ ಮಲ್ಲಿಗೆ ಹೂವಿಗೆ ಇರುವ ಬೇಡಿಕೆಯೇ ಬೇರೆ. ಅದರ ಬಿಳಿ ಬಣ್ಣ ಮತ್ತು ಮನಸೆಳೆಯುವ ಸುಗಂಧವನ್ನು ಇಷ್ಟಪಡದ ಮಹಿಳೆಯರೇ ಇಲ್ಲ. ಆದರೆ ಮಲ್ಲಿಗೆ ಹೂವುಗಳ ವಿಷಯದಲ್ಲಿ ಎಲ್ಲರನ್ನೂ ಕಾಡುವ ದೊಡ್ಡ ಸಮಸ್ಯೆ ಎಂದರೆ ಅವು ಬೇಗನೆ ಬಾಡಿ ಹೋಗುವುದು ಅಥವಾ ಸ್ವಲ್ಪ ಸಮಯದಲ್ಲೇ ಕೆಂಪು ಅಥವಾ ಕಪ್ಪು ಬಣ್ಣಕ್ಕೆ ತಿರುಗುವುದು. ಮಾರುಕಟ್ಟೆಯಿಂದ ಹೆಚ್ಚು ಹೂವು ತಂದಾಗ ಅಥವಾ ಫಂಕ್ಷನ್‌ಗಳಿಗಾಗಿ ಮುಂಚಿತವಾಗಿ ಖರೀದಿಸಿದಾಗ ಅವುಗಳನ್ನು ಎರಡು ಮೂರು ದಿನಗಳ ಕಾಲ ಫ್ರೆಶ್ ಆಗಿ ಇಡುವುದು ಕಷ್ಟವಾಗುತ್ತದೆ.ಆದರೆ ಮನೆಯಲ್ಲಿ ಸಿಗುವ ಕೆಲವು ಸಣ್ಣ ವಸ್ತುಗಳನ್ನು ಬಳಸಿ ಸರಿಯಾಗಿ ಸಂಗ್ರಹಿಸಿದರೆ, ಮಲ್ಲಿಗೆ ಹೂವುಗಳನ್ನು ಒಂದು ವಾರದವರೆಗೆ ಬಣ್ಣ ಬದಲಾಗದಂತೆ, ಪರಿಮಳ ಕುಂದದಂತೆ ತಾಜಾವಾಗಿ ಇಡಬಹುದು ಎಂದು ತಜ್ಞರು ಹೇಳುತ್ತಾರೆ.
26
ಬಾಕ್ಸ್ ಮತ್ತು ಟಿಶ್ಯೂ ಪೇಪರ್ ಹ್ಯಾಕ್
ಬಾಕ್ಸ್ ಮತ್ತು ಟಿಶ್ಯೂ ಪೇಪರ್ ಹ್ಯಾಕ್ ಮಲ್ಲಿಗೆ ಹೂವುಗಳು ಫ್ರೆಶ್ ಆಗಿರಲು ಗಾಳಿ ಮತ್ತು ಅತಿಯಾದ ತೇವಾಂಶ ತಗುಲದಂತೆ ನೋಡಿಕೊಳ್ಳುವುದು ಮುಖ್ಯ. ಒಂದು ಗಾಳಿಯಾಡದ (Air-tight) ಪ್ಲಾಸ್ಟಿಕ್ ಅಥವಾ ಗಾಜಿನ ಡಬ್ಬವನ್ನು ತೆಗೆದುಕೊಳ್ಳಿ. ಅದರ ತಳಭಾಗದಲ್ಲಿ ಒಂದು ಟಿಶ್ಯೂ ಪೇಪರ್ ಅಥವಾ ತೆಳುವಾದ ಕಾಟನ್ ಬಟ್ಟೆಯನ್ನು ಹರಡಿ. ಅದರ ಮೇಲೆ ಹೂವುಗಳನ್ನು ಗಟ್ಟಿಯಾಗಿ ಒತ್ತದೆ ಹಗುರವಾಗಿ ಹಾಕಿ. ಹೂವುಗಳ ಮೇಲೂ ಮತ್ತೊಂದು ಟಿಶ್ಯೂ ಪೇಪರ್ ಇಟ್ಟು, ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ ಫ್ರಿಡ್ಜ್‌ನಲ್ಲಿ ಇರಿಸಿ. ಟಿಶ್ಯೂ ಪೇಪರ್ ಹೂವಿನ ಹೆಚ್ಚಿನ ತೇವಾಂಶವನ್ನು ಹೀರಿಕೊಂಡು ಅವು ಕಪ್ಪಾಗದಂತೆ ಕಾಪಾಡುತ್ತದೆ.
36
ಬಾಳೆ ಎಲೆಯ ಪ್ರಯೋಗ
ಬಾಳೆ ಎಲೆಯ ಪ್ರಯೋಗ ಇದು ನಮ್ಮ ಹಿರಿಯರ ಕಾಲದಿಂದಲೂ ನಡೆದು ಬಂದಿರುವ ಅತ್ಯಂತ ಪರಿಣಾಮಕಾರಿ ವಿಧಾನ. ಒಂದು ತಾಜಾ ಬಾಳೆ ಎಲೆಯನ್ನು ತೆಗೆದುಕೊಂಡು, ಅದರಲ್ಲಿ ಮಲ್ಲಿಗೆ ಹೂವುಗಳನ್ನು ಇಟ್ಟು ಚೆನ್ನಾಗಿ ಸುತ್ತಿ. ಆ ಬಾಳೆ ಎಲೆಯ ಸುತ್ತನ್ನು ಒಂದು ಪ್ಲಾಸ್ಟಿಕ್ ಕವರ್ ಅಥವಾ ಡಬ್ಬದಲ್ಲಿಟ್ಟು ಫ್ರಿಡ್ಜ್‌ನಲ್ಲಿ ಇರಿಸಿದರೆ, ಹೂವುಗಳು ಸುಮಾರು 5 ರಿಂದ 7 ದಿನಗಳವರೆಗೆ ಈಗಷ್ಟೇ ಗಿಡದಿಂದ ಕಿತ್ತಂತೆ ತಾಜಾವಾಗಿರುತ್ತವೆ.
ನಿಂಬೆ ರಸದ ನೀರಿನ ಸಿಂಪಡಣೆ ಮಲ್ಲಿಗೆ ಹೂವುಗಳ ಬಣ್ಣ ಬದಲಾಗದಂತೆ ತಡೆಯಲು ನಿಂಬೆ ರಸದಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ಸಹಾಯ ಮಾಡುತ್ತವೆ. ಒಂದು ಸ್ಪ್ರೇ ಬಾಟಲಿಯಲ್ಲಿ ಕುಡಿಯುವ ನೀರನ್ನು ತೆಗೆದುಕೊಂಡು, ಅದಕ್ಕೆ ಕೆಲವು ಹನಿ ನಿಂಬೆ ರಸ ಸೇರಿಸಿ. ಹೂವುಗಳನ್ನು ಸಂಗ್ರಹಿಸುವ ಮೊದಲು ಈ ನೀರನ್ನು ಲಘುವಾಗಿ ಹೂವುಗಳ ಮೇಲೆ ಸ್ಪ್ರೇ ಮಾಡಿ. ಇದು ಹೂವುಗಳು ಒಣಗದಂತೆ ನೋಡಿ, ಬಣ್ಣ ಬದಲಾಗದಂತೆ ತಡೆಯುತ್ತದೆ.
56
ಐಸ್ ವಾಟರ್ ಪದ್ಧತಿ
ಐಸ್ ವಾಟರ್ ಪದ್ಧತಿ ಒಂದು ವೇಳೆ ಹೂವುಗಳು ಈಗಾಗಲೇ ಸ್ವಲ್ಪ ಬಾಡಿದಂತೆ ಅಥವಾ ಮೆತ್ತಗಾದಂತೆ ಅನಿಸಿದರೆ ಈ ಟ್ರಿಕ್ ಬಳಸಿ. ಒಂದು ಪಾತ್ರೆಯಲ್ಲಿ ಅತ್ಯಂತ ತಣ್ಣನೆಯ (ಐಸ್ ವಾಟರ್) ನೀರನ್ನು ತೆಗೆದುಕೊಂಡು, ಅದರಲ್ಲಿ ಬಾಡಿದ ಹೂವುಗಳನ್ನು ಕೇವಲ 2 ರಿಂದ 3 ನಿಮಿಷಗಳ ಕಾಲ ಮುಳುಗಿಸಿ ತೆಗೆಯಿರಿ. ನಂತರ ನೀರನ್ನು ಸಂಪೂರ್ಣವಾಗಿ ಆರಿಸಿ ಸಂಗ್ರಹಿಸಿಟ್ಟರೆ, ಹೂವುಗಳು ಮತ್ತೆ ಅರಳಿದಂತೆ ತಾಜಾವಾಗಿ ಕಾಣುತ್ತವೆ.
66
ಹೂವುಗಳನ್ನು ಸಂಗ್ರಹಿಸುವಾಗ ಮಾಡಬಾರದು ತಪ್ಪುಗಳು
ಹೂವುಗಳನ್ನ ಸಂಗ್ರಹಿಸುವಾಗ ಮಾಡಬಾರದು ತಪ್ಪುಗಳು *ಹೂವುಗಳನ್ನು ನೇರವಾಗಿ ನೀರಿನಲ್ಲಿ ದೀರ್ಘಕಾಲ ನೆನೆಸಬಾರದು. ಇದರಿಂದ ದಳಗಳು ಬೇಗನೆ ಕೊಳೆಯಬಹುದು. *ಮಾರುಕಟ್ಟೆಯಿಂದ ತಂದ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಗೆಯೇ ಇಟ್ಟರೆ, ಒಳಗೆ ಗಾಳಿಯಾಡದೆ ಹೂವುಗಳು ಕೆಲವೇ ಗಂಟೆಗಳಲ್ಲಿ ಕಪ್ಪಾಗುತ್ತವೆ. *ಹೂವುಗಳನ್ನು ಫ್ರಿಡ್ಜ್‌ನ ಸಾಮಾನ್ಯ ಕಪಾಟುಗಳಲ್ಲಿ ಮಾತ್ರ ಇಡಬೇಕು, ಫ್ರೀಜರ್‌ನಲ್ಲಿ (Freezer) ಅಪ್ಪಿತಪ್ಪಿಯೂ ಇಡಬಾರದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.