10 ವರ್ಷದ ಹಳೆ ಫ್ರಿಡ್ಜ್‌ಗೆ ಹೊಸ ಲುಕ್ ಕೊಡಲು ಅನುಸರಿಸಿ 7 ಸೂಪರ್ ಟಿಪ್ಸ್

Published : Jul 06, 2025, 04:07 PM IST

How to Make Old Refrigerator Look New: ಹಳೆಯದಾದ ರೆಫ್ರಿಜರೇಟರ್‌ ಅನ್ನು ಹೊಸದಾಗಿ ಕಾಣುವಂತೆ ಮಾಡಲು ಮತ್ತು ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು 7 ಸರಳ ವಿಧಾನಗಳನ್ನು ಈ ಲೇಖನ ಒಳಗೊಂಡಿದೆ. ವೃತ್ತಿಪರ ತಂತ್ರಜ್ಞರು ನೀಡಿರುವ ಈ ಸಲಹೆಗಳು ಇಲ್ಲಿವೆ

PREV
110

ಬೇಸಿಗೆ, ಚಳಿ, ಮಳೆಗಾಲವಿರಲಿ ಮನೆಯಲ್ಲಿ ರೆಫ್ರಿಜರೇಟರ್‌ ಬಳಕೆಯಾಗುತ್ತದೆ. ನಿಮ್ಮ ಮನೆಯ ಫ್ರಿಡ್ಜ್ 10 ವರ್ಷಗಳಷ್ಟು ಹಳೆಯದಾಗಿದ್ದರೆ ಕೆಲವು ವಿಧಾನಗಳ ಮೂಲಕ ಹೊಸದಾಗಿ ಮಾಡಬಹುದಾಗಿದೆ. ವೃತ್ತಿಪರ ತಂತ್ರಜ್ಞರು ನೀಡಿದ ಕೆಲವು ಸೂಪರ್ ಸಲಹೆಗಳು ಇಲ್ಲಿವೆ.

210

ಈ ಸುಲಭ ಮತ್ತು ಸರಳ ವಿಧಾನಗಳಿಂದ ನಿಮ್ಮ ಹಳೆಯ ರೆಫ್ರಿಜರೇಟರ್ ಅನ್ನು ಹೊಸದಾಗಿ ಕಾಣುವಂತೆ ಮಾಡಬಹುದು ಮತ್ತು ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು. ವೃತ್ತಿಪರ ತಂತ್ರಜ್ಞರು ನೀಡಿರುವ ಸಲಹೆಗಳು ಏನು ಅಂತ ನೋಡೋಣ ಬನ್ನಿ.

310

ಸಲಹೆ 1: ವಾರ್ಷಿಕ ನಿರ್ವಹಣೆ

ರೆಫ್ರಿಜರೇಟರ್‌ನ್ನು ನಿಯಮಿತವಾಗಿ ಸರ್ವಿಸಿಂಗ್ ಮಾಡಿಸುತ್ತಿರಬೇಕು. ರಿಪೇರಿ ಇಲ್ಲದಿದ್ದರೂ ನಿರ್ದಿಷ್ಟ ಸಮಯಕ್ಕೆ ತಂತ್ರಜ್ಞರಿಂದ ತಪಾಸಣೆಗೆ ಒಳಪಡಿಸಬೇಕು. ಹೀಗೆ ಮಾಡೋದರಿಂದ ಫ್ರಿಡ್ಕ್ ಹಲವು ವರ್ಷ ಬಾಳಿಕೆ ಬರುತ್ತದೆ.

410

ಸಲಹೆ 2: ರಬ್ಬರ್ ಗ್ಯಾಸ್ಕೆಟ್

ರೆಫ್ರಿಜರೇಟರ್‌ ಬಾಗಿಲನ್ನು ಸರಿಯಾಗಿ ಮುಚ್ಚಬೇಕು. ಇಲ್ಲದಿದ್ರೆ ತಂಪಾಗಿಸುವಿಕೆ ಮೇಲೆ ಪರಿಣಾಮ ಬೀರುತ್ತದೆ. ಬಾಗಿಲು ಸರಿಯಾಗಿ ಮುಚ್ಚಿಕೊಳ್ಳದಿದ್ದರೆ ರಬ್ಬರ್ ಗ್ಯಾಸ್ಕೆಟ್ ತೆಗೆದು ಬಿಸಿನೀರಿನಿಂದ ತೊಳೆದು ಪುನಃ ಅಳವಡಿಸಿ.

510

ಸಲಹೆ 3: ಧೂಳಿನಿಂದ ಮುಕ್ತಿ

ರೆಫ್ರಿಜರೇಟರ್‌ನ ಹಿಂದಿರುವ ಸುರುಳಿಗಳಲ್ಲಿ ಧೂಳು ಸಂಗ್ರಹವವಾದ್ರೆ ತಂಪಾಗಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಬ್ರಷ್ ಅಥವಾ ವ್ಯಾಕ್ಯೂಮ್ ಕ್ಲೀನರ್‌ನಿಂದ ಸುರುಳಿಗಳನ್ನು ಸ್ವಚ್ಛಗೊಳಿಸಬೇಕು.

610

ಸಲಹೆ 4: ಒಳಭಾಗದ ಸ್ವಚ್ಛತೆ

ಹೊರ ಭಾಗದಂತೆ ಫ್ರಿಡ್ಜ್ ಒಳಭಾಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದರಿಂದ ಒಳಭಾಗದ ಕೆಟ್ಟ ವಾಸನೆ ಹೋಗುತ್ತದೆ ಮತ್ತು ಗ್ಲಾಸ್‌ಗಳು ಹೊಳೆಯುತ್ತದೆ. ಅಡುಗೆ ಸೋಡಾದ ದ್ರಾವಣ ಬಳಸಿ ಒಳಭಾಗವನ್ನು ಕ್ಲೀನ್ ಮಾಡಿ.

710

ಸಲಹೆ 5: ಪಾಲಿಶಿಂಗ್ ಕ್ರೀಮ್‌

ಫ್ರಿಡ್ಜ್ ಮೇಲ್ಭಾಗದಲ್ಲಿ ಗೀರುಗಳು ಬಂದಿದ್ರೆ, ಅಲ್ಲಲ್ಲಿ ಬಣ್ಣ ಮಾಸಿದ್ದರೆ ಕಾರ್ ವ್ಯಾಕ್ಸ್ ಅಥವಾ ಪಾಲಿಶಿಂಗ್ ಕ್ರೀಮ್‌ ಬಳಸಬಹುದು. ಈ ಮೂಲಕ ನಿಮ್ಮ ಫ್ರಿಡ್ಜ್ ಸಂಪೂರ್ಣವಾಗಿ ಹೊಸದಂತೆ ಕಾಣಿಸುತ್ತದೆ. ಇಲ್ಲವಾದ್ರೆ ಬಣ್ಣ ಹೋಗಿರುವ ಜಾಗದ ಮೇಲೆ ಸ್ಟಿಕ್ಕರ್ ಅಂಟಿಸಿ.

810

ಸಲಹೆ 6: ಎಲ್ಇಡಿ ದೀಪ

ಹಳೆಯ ಫ್ರಿಡ್ಜ್ ಆಗಿದ್ರೆ ಒಳಭಾಗದ ದೀಪಗಳ ಪ್ರಖರತೆ ಕಡಿಮೆಯಾಗಿರುತ್ತದೆ. ಹಾಗಾಗಿ ಹೊಸ ಎಲ್‌ಇಡಿ ದೀಪ ಅಳವಡಿಸುವ ಮೂಲಕ ಫ್ರಿಡ್ಜ್ ಹೊಸದಾಗಿ ಕಾಣುವಂತೆ ಮಾಡಬಹುದಾಗಿದೆ.

910

ಸಲಹೆ 7: ಡಿಫ್ರಾಸ್ಟ್

ನಿಮ್ಮ ರೆಫ್ರಿಜರೇಟರ್‌ನಲ್ಲಿ ಹಸ್ತಚಾಲಿತ ಡಿಫ್ರಾಸ್ಟ್ ವ್ಯವಸ್ಥೆ ಇದ್ದರೆ, ವಾರಕ್ಕೊಮ್ಮೆಯಾದರೂ ಅದನ್ನು ಡಿಫ್ರಾಸ್ಟ್ ಮಾಡಿ.

1010

ರೆಫ್ರಿಜರೇಟರ್ ಮೇಲೆ ಯಾವುದೇ ವಸ್ತುಗಳನ್ನು ಇರಿಸಬೇಡಿ. ಇದು ಫ್ರಿಡ್ಜ್ ಮೇಲೆ ಒತ್ತಡವವನ್ನು ಹೆಚ್ಚಳ ಮಾಡೋದರಿಂದ ಬೇಗ ಹಾಳಾಗುತ್ತದೆ. ಈ ಎಲ್ಲಾ ವಿಧಾನಗಳನ್ನು ಬಳಸುವ ಮೂಲಕ ಫ್ರಿಡ್ಜ್‌ ನ್ನು ಹೊಸದರಂತೆಯೇ ಇಟ್ಟುಕೊಳ್ಳಬಹುದು.

Read more Photos on
click me!

Recommended Stories