ನಮ್ಮ ಬೆಂಗಳೂರಿನಲ್ಲಿ ಚೀಪ್ ಆಗಿ ಸಿಗೋ ಮೊಟ್ಟೆ… ವಿದೇಶಗಳಲ್ಲಿ ಲಕ್ಸುರಿ ಐಟಂ, ಈ ಬೆಲೆ ಕೇಳಿದ್ರೆ ನೀವು ನಂಬೋದಿಲ್ಲ

Published : Apr 05, 2026, 02:17 PM IST

Egg price ಒಂದು ಕಾಲದಲ್ಲಿ ಬಡವರ ಪ್ರೊಟೀನ್ ಆಹಾರವಾಗಿದ್ದ ಮೊಟ್ಟೆ, ಈಗ ಶ್ರೀಮಂತರಿಗಷ್ಟೇ ಎನ್ನುವಂತಾಗಿದೆ. ನಾವು ಸಾಧಾರಣವಾಗಿ ಬಳಸುವ ಒಂದು ಮೊಟ್ಟೆಯ ಬೆಲೆ ಇಂದು ವಿದೇಶಗಳಲ್ಲಿ ಎಷ್ಟಾಗಿದೆ ನೋಡಿ.. 

PREV
16
ಮೊಟ್ಟೆ ಬೆಲೆ

ಪ್ರತಿ ಮನೆಯಲ್ಲೂ ಸಾಮಾನ್ಯವಾಗಿ ಬಳಕೆಯಾಗುವ ಆಹಾರ ಪದಾರ್ಥಗಳಲ್ಲಿ ಮೊಟ್ಟೆ ಪ್ರಮುಖ ಸ್ಥಾನ ಹೊಂದಿದೆ. ಆದರೆ ಇದೇ ಮೊಟ್ಟೆಯ ಬೆಲೆ ದೇಶದಿಂದ ದೇಶಕ್ಕೆ ಎಷ್ಟು ಬದಲಾಗುತ್ತದೆ ಗೊತ್ತಾ? ಈಗ ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ, ವಿಶ್ವದ ವಿವಿಧ ದೇಶಗಳಲ್ಲಿ 1 ಮೊಟ್ಟೆಯ ಬೆಲೆಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ.

26
ಒಂದು ಮೊಟ್ಟೆಯ ಸರಾಸರಿ ಬೆಲೆ

ಭಾರತದಲ್ಲಿ ಒಂದು ಮೊಟ್ಟೆಯ ಸರಾಸರಿ ಬೆಲೆ ₹7 ಇದ್ದು, ಇದು ವಿಶ್ವದಲ್ಲೇ ಕಡಿಮೆ ದರಗಳಲ್ಲಿ ಒಂದಾಗಿದೆ. ಆದರೆ ಪಕ್ಕದ ದೇಶವಾದ ಬಾಂಗ್ಲಾದೇಶದಲ್ಲಿ ₹10, ಶ್ರೀಲಂಕಾದಲ್ಲಿ ₹15 ಆಗಿದೆ.

36
ಅಚ್ಚರಿಯ ಸಂಗತಿ

ಇನ್ನೂ ಅಚ್ಚರಿಯ ಸಂಗತಿ ಏನೆಂದರೆ, ಬ್ರೆಜಿಲ್‌ನಲ್ಲಿ ₹20, ಜಪಾನ್‌ನಲ್ಲಿ ₹25 ಮತ್ತು ಆಸ್ಟ್ರೇಲಿಯಾದಲ್ಲಿ ₹28 ತನಕ ಏರಿದೆ. ಯುಕೆನಲ್ಲಿ ₹30, ಕೆನಡಾದಲ್ಲಿ ₹32 ಮತ್ತು ಅಮೆರಿಕಾದಲ್ಲಿ ₹35 ವರೆಗೆ ಬೆಲೆ ಇದೆ.

46
ಈ ದೇಶದಲ್ಲಿ ಮೊಟ್ಟೆ ಬೆಲೆ ಜಾಸ್ತಿ

ಆದರೆ ಅತ್ಯಂತ ದುಬಾರಿ ದೇಶಗಳ ಪಟ್ಟಿಯಲ್ಲಿ ನಾರ್ವೇ (₹50) ಮತ್ತು ಸ್ವಿಟ್ಜರ್‌ಲ್ಯಾಂಡ್ (₹60) ಮೊದಲ ಸ್ಥಾನದಲ್ಲಿವೆ. ಈ ದೇಶಗಳಲ್ಲಿ ಮೊಟ್ಟೆ ಸಾಮಾನ್ಯ ಜನರಿಗೆ ಸಹ ದುಬಾರಿ ಆಹಾರವಾಗಿದೆ.

56
ಪಾಕಿಸ್ತಾನದಲ್ಲಿ ಮೊಟ್ಟೆ

ಇದೇ ವೇಳೆ ಪಾಕಿಸ್ತಾನದಲ್ಲಿ ₹13ರಷ್ಟೇ ಬೆಲೆ ಇದ್ದು, ಭಾರತದೊಂದಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಆದರೆ ಇನ್ನೂ ಕಡಿಮೆ ಮಟ್ಟದಲ್ಲಿದೆ.

66
ಏಕೆ ಇಷ್ಟು ವ್ಯತ್ಯಾಸ?

ಆಹಾರ ಉತ್ಪಾದನೆ ವೆಚ್ಚ, ಸಾಗಾಟ, ತೆರಿಗೆ, ಮತ್ತು ದೇಶದ ಆರ್ಥಿಕ ಪರಿಸ್ಥಿತಿ ಇವುಗಳೇ ಬೆಲೆ ವ್ಯತ್ಯಾಸಕ್ಕೆ ಮುಖ್ಯ ಕಾರಣಗಳಾಗಿವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories