ಮನೆಯಲ್ಲಿರುವ ನೈಸರ್ಗಿಕ ವಸ್ತುಗಳ ಬಳಸಿಕೊಂಡು ರೆಫ್ರಿಜರೇಟರ್ (ಫ್ರಿಡ್ಜ್) ಸ್ವಚ್ಚಗೊಳಿಸಲು ಸುಲಭ ಉಪಾಯವಿದೆ. ಇದರಿಂದ ಬ್ಯಾಕ್ಟೀರಿಯಾ, ದುರ್ವಾಸನೆ ಮುಕ್ತವಾಗಲಿದೆ. ಜೊತೆಗ ಶೈನಿಂಗ್ ಬರಲಿದೆ.
ಫ್ರಿಡ್ಜ್‌ನಲ್ಲಿ ಹಲವು ಆಹಾರ ಪದಾರ್ಥ ಸೇರಿದಂತೆ ಹಲವು ವಸ್ತುಗಳನ್ನಿಡುವ ಕಾರಣ ದುರ್ವಾಸೆ ಬರಲು ಆರಂಭಿಸುತ್ತದೆ. ಜೊತೆಗೆ ಸ್ವಚ್ಚಗೊಳಿಸುವುದು ಕಷ್ಟವಾಗಲಿದೆ. ಹಲವರು ಕೆಮಿಕಲ್ ಬಳಸಿ ಫ್ರಿಡ್ಜ್ ಸ್ವಚ್ಚಗೊಳಿಸುತ್ತಾರೆ. ಇದು ಉತ್ತಮ ವಿಧಾನವಲ್ಲ. ಕಾರಣ ಆಹಾರ ಪದಾರ್ಥಗಳನ್ನಿಡುವ ಕಾರಣ ಕೆಮಿಕಲ್ ಉತ್ತಮವಲ್ಲ. ಹೀಗಾಗಿ ನೈಸರ್ಗಿಕವಾಗಿ ಫ್ರಿಡ್ಜ್ ಸ್ವಚ್ಚಗೊಳಿಸುವ ವಿಧಾನ ಇಲ್ಲಿದೆ.
25
ರೆಫ್ರಿಜರೇಟರ್ ಕ್ಲೀನಿಂಗ್
ಕೆಮಿಕಲ್ ಬಳಸದೇ ನೈಸರ್ಗಿಕವಾಗಿ ಫ್ರಿಡ್ಜ್ ಕ್ಲೀನ್ ಮಾಡಲು ಬೇಕಿಂಗ್ ಸೋಡಾ, ನಿಂಬೆ ರಸ, ನೀರು, ಸ್ವಾಂಚ್, ಸಣ್ಣ ಪಾತ್ರೆ, ವಾಕ್ಯೂಮ್ ಅಥವಾ ಬ್ರಷ್ ಅಗತ್ಯವಿದೆ. ಇವೆಲ್ಲವು ಮನೆಯಲ್ಲಿ ಸಿಗುವ ವಸ್ತುಗಳಾಗಿವೆ. ಈ ವಸ್ತುಗಳನ್ನು ಸಂಗ್ರಹಿಸಿದ ಬಳಿಕ ಫ್ರಿಡ್ಜ್‌ನಲ್ಲಿಟ್ಟಿರುವ ಎಲ್ಲಾ ವಸ್ತುಗಳನ್ನು ಹೊರತೆಗೆದು ಕ್ಲೀನಿಂಗ್ ಆರಂಭಿಸಬೇಕು.
35
ವಿನಿಗರ್ ಲಿಕ್ವಿಡ್
ವಿನಿಗರ್ ಹಾಗೂ ಬಿಸಿ ನೀರು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಬೇಕು. ಈ ಲಿಕ್ವಿಡ್ ನೈಸರ್ಗಿಕ ಡಿಸ್‌ಇನ್ಫೆಕ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಸ್ಪ್ರೈ ಬಾಟಲಿಯಲ್ಲಿ ಹಾಕಿ ಫ್ರಿಡ್ಜ್ ಒಳಗೆ ಸ್ಪ್ಪೇ ಮಾಡಿದರೆ ಬ್ಯಾಕ್ಟೀರಿಯಾ ಸೇರಿದಂತೆ ಫಂಗಸ್ ತೆಗೆದು ಹಾಕುತ್ತದೆ. ನೈಸರ್ಗಿಕವಾಗಿ ಫ್ರಿಡ್ಜ್ ಸ್ವಚ್ಚಗೊಳ್ಳುತ್ತದೆ.
ಫ್ರಿಡ್ಜ್ ಒಳಾಭಾಗ ಸ್ವಚ್ಚಗೊಳಿಸಿದ ಬಳಿಕ ಹಲವು ಬಾರಿ ಫ್ರಿಡ್ಜ್‌ನಲ್ಲಿ ದುರ್ವಾಸೆ ಹೋಗುವುದಿಲ್ಲ.ಇಂತಹ ಸಂದರ್ಭದಲ್ಲಿ ಸಣ್ಣ ಪಾತ್ರೆಯಲ್ಲಿ ಬೇಕಿಂಗ್ ಸೋಡಾ ಇಟ್ಟು ಫ್ರಿಡ್ಜ್‌ನಲ್ಲಿ ಕೆಲಕಾಲ ಇಡಬೇಕು. ಇದು ದುರ್ವಾಸೆ ಹೀರಿಕೊಳ್ಳುತ್ತದೆ. ಕತ್ತರಿಸಿದ ನಿಂಬೆ, ಕಾಫಿ ಪೌಡರ್, ವೆನಿಲ್ಲಾ ಸೇರಿದಂತೆ ಇತರ ನೈಸರ್ಗಿಕ ವಸ್ತುಗಳನ್ನಿಟ್ಟು ದುರ್ವಾಸೆ ಮುಕ್ತ ಮಾಡಬಹುದು.
55
ಡೋರ್‌ನಲ್ಲಿರುವ ರಬ್ಬರ್ ಸೀಲ್ ಮರೆಯಬೇಡಿ
ಫ್ರಿಡ್ಜ್ ಒಳಬಾಗ, ಹೊರಭಾಗ ಕ್ಲೀನ್ ಮಾಡಿದ ಬಳಿಕ ಡೋರ್‌ನಲ್ಲಿರುವ ರಬ್ಬರ್ ಸೀಲ್ ಶುಚಿಗೊಳಿಸಲು ಮರೆಯಬೇಡಿ. ಇದು ಅತ್ಯಂತ ಹೆಚ್ಚು ಬ್ಯಾಕ್ಟೀರಿಯಾ, ಫಂಗಸ್ ಸಂಗ್ರಹವಾಗುವ ಸ್ಥಳವಾಗಿದೆ. ವಿನಿಗರ್‌ನಲ್ಲಿ ಅದ್ದಿದ ಬಟ್ಟೆಯಿಂದ ರಬ್ಬರ್ ಸೀಲ್ ಸ್ವಚ್ಚಗೊಳಿಸಿ,ಸಣ್ಣ ಬ್ರಶ್ ಬಳಸಿ ಕ್ಲೀನ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.