ಹಳೆ ಮಾತ್ರೆ ಇದ್ರೆ ಈ ರೀತಿ ಸಿಂಕ್‌ಗೆ ಹಾಕಿ.. ಪೈಪ್ ಒಳಗಿನ ಜಿಡ್ಡು ಕರಗುತ್ತೆ, ವಾಸನೆಯೂ ಬರಲ್ಲ, ಬ್ಲಾಕ್ ಆಗಲ್ಲ

Published : Sep 20, 2026, 01:50 PM IST

Kitchen sink cleaning hack: ಕಿಚನ್ ಸಿಂಕ್ ಎಷ್ಟು ಸ್ವಚ್ಛಗೊಳಿಸಿದರೂ ರಾತ್ರಿಯಾಗುತ್ತಿದ್ದಂತೆ ಕೊಳೆತ ವಾಸನೆ ಬರುತ್ತಿದೆಯೇ? ಪೈಪ್‌ನಿಂದ ಜಿರಳೆ, ನೊಣಗಳು ಹೊರಬಂದು ಕಿರಿಕಿರಿ ಉಂಟುಮಾಡುತ್ತಿವೆಯೇ? ಮನೆಯಲ್ಲಿರುವ ಹಳೆಯ ಮಾತ್ರೆ ಬಳಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ.

PREV
17
ಇಲ್ಲಿದೆ ಸರಳ ಟ್ರಿಕ್

ಕಿಚನ್ ಸಿಂಕ್ ಎಷ್ಟು ಸ್ವಚ್ಛಗೊಳಿಸಿದರೂ ರಾತ್ರಿಯಾಗುತ್ತಿದ್ದಂತೆ ಕೊಳೆತ ವಾಸನೆ ಬರುತ್ತಿದೆಯೇ? ಪೈಪ್‌ನಿಂದ ಜಿರಳೆ, ನೊಣಗಳು ಹೊರಬಂದು ಕಿರಿಕಿರಿ ಉಂಟುಮಾಡುತ್ತಿವೆಯೇ? ದುಬಾರಿ ಕೆಮಿಕಲ್ ಕ್ಲೀನರ್‌ಗಳ ಬದಲು, ಮನೆಯಲ್ಲಿರುವ ಹಳೆಯ ಮಾತ್ರೆ ಹಾಗೂ ಅರಿಶಿನ ಬಳಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹೇಗೆ? ಇಲ್ಲಿದೆ ಸರಳ ಟ್ರಿಕ್!

27
ಸಿಂಕ್‌ನ ದುರ್ವಾಸನೆ ಮತ್ತು ಜಿರಳೆಗಳ ಕಾಟ!

ಕಿಚನ್ ಸಿಂಕ್ ಅನ್ನು ಮೇಲ್ನೋಟಕ್ಕೆ ಎಷ್ಟು ತೊಳೆದರೂ, ಪೈಪ್ ಒಳಗೆ ಉಳಿಯುವ ಎಣ್ಣೆ ಜಿಡ್ಡು ಮತ್ತು ಆಹಾರದ ಕಣಗಳಿಂದ ರಾತ್ರಿ ವೇಳೆ ಕೆಟ್ಟ ವಾಸನೆ ಹಾಗೂ ಜಿರಳೆಗಳು ಬರುವುದು ಸಾಮಾನ್ಯ ಸಮಸ್ಯೆ.

37
ಬೇಕಾಗುವ ಸಾಮಗ್ರಿಗಳು

ಈ ನೈಸರ್ಗಿಕ ಕ್ಲೀನರ್‌ಗೆ ದುಬಾರಿ ಖರ್ಚಿಲ್ಲ. ಯಾವುದಾದರೂ ಹಳೆಯ/ಎಕ್ಸ್‌ಪೈರ್ ಆದ ಮಾತ್ರೆ (ಟ್ಯಾಬ್ಲೆಟ್), ಕುದಿಯುವ ಬಿಸಿ ನೀರು, ಒಂದು ಚಿಟಿಕೆ ಅರಿಶಿನ ಮತ್ತು ಸ್ವಲ್ಪ ವಿನೆಗರ್ (ಅಥವಾ ನಿಂಬೆ ರಸ) ಸಾಕು.

47
ಮ್ಯಾಜಿಕ್ ಲಿಕ್ವಿಡ್ ತಯಾರಿ ಹೀಗಿರಲಿ

ಮೊದಲು ಎಕ್ಸ್‌ಪೈರ್ ಆದ ನಾರ್ಮಲ್ ಮಾತ್ರೆಯನ್ನು ಪುಡಿ ಮಾಡಿಕೊಳ್ಳಿ. ನಂತರ ಒಂದು ಪಾತ್ರೆ ನೀರನ್ನು ಚೆನ್ನಾಗಿ ಕುದಿಸಿ ಕೆಳಗಿಳಿಸಿ. ಈಗ ಇದಕ್ಕೆ ಈ ಮಾತ್ರೆಯ ಪುಡಿ, ಚಿಟಿಕೆ ಅರಿಶಿನ ಮತ್ತು ಸ್ವಲ್ಪ ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

57
ರಾತ್ರಿ ಮಲಗುವ ಮುನ್ನ ಹೀಗೆ ಬಳಸಿ

ರಾತ್ರಿ ಊಟದ ನಂತರ ಸಿಂಕ್‌ನಲ್ಲಿರುವ ಪಾತ್ರೆಗಳನ್ನೆಲ್ಲಾ ತೊಳೆದು ಸ್ವಚ್ಛಗೊಳಿಸಿ. ಆ ಬಳಿಕ ತಯಾರಿಸಿಟ್ಟುಕೊಂಡ ಕುದಿಯುವ ಬಿಸಿ ನೀರನ್ನು ನೇರವಾಗಿ ಸಿಂಕ್‌ನ ಪೈಪ್ ರಂಧ್ರಕ್ಕೆ ಸುರಿಯಿರಿ.

67
ಅರ್ಧ ಗಂಟೆ ಹಾಗೇ ಬಿಡಿ!

ಬಿಸಿ ನೀರನ್ನು ಸುರಿದ ನಂತರ ಸುಮಾರು ಅರ್ಧ ಗಂಟೆ ಸಿಂಕ್‌ಗೆ ಬೇರೆ ನೀರು ಬಿಡಬೇಡಿ. ನಂತರ ಸಾಮಾನ್ಯ ನೀರಿನಿಂದ ಒಮ್ಮೆ ತೊಳೆದರೆ ಸಾಕು. ವಾರದಲ್ಲಿ ಕೇವಲ 2 ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

77
ಇದರಿಂದ ಸಿಗುವ ಪ್ರಯೋಜನವೇನು?

ಬಿಸಿ ನೀರು ಪೈಪ್ ಒಳಗಿನ ಜಿಡ್ಡನ್ನು ಕರಗಿಸಿದರೆ, ಮಾತ್ರೆ ಮತ್ತು ಅರಿಶಿನವು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಇದರಿಂದ ಜಿರಳೆ, ಹುಳು-ಹುಪ್ಪಟೆಗಳು ಬರುವುದು ನಿಲ್ಲುತ್ತದೆ ಹಾಗೂ ಸಿಂಕ್ ಸದಾ ಫ್ರೆಶ್ ಆಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories